ಹಿಜಾಬ್ ವಿವಾದ ಹುಟ್ಟು ಹಾಕಿದ ಸಂಘಟನೆಯನ್ನು ನಿಷೇಧಿಸಬೇಕು : ಹಿಂದು ಮಹಾಸಭಾದ ಧರ್ಮೇಂದ್ರ

ಹಿಜಾಬ್ ವಿವಾದವನ್ನು ಹುಟ್ಟು ಹಾಕಿದ ವಿದ್ಯಾರ್ಥಿಗಳ ಹಿಂದೆ ಇರುವ ಎಸ್‍ಡಿಪಿಐ, ಪಿಎಫ್‍ಐಯನ್ನು ಕೂಡಲೇ ನಿಷೇಧಿಸಬೇಕು ಎಂದು ಅಖಿಲ ಭಾರತ ಹಿಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಆಗ್ರಹಿಸಿದ್ದಾರೆ.ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬುರ್ಕದ ಒಳಗಿನ ಹೀನ ಕೃತ್ಯವನ್ನು ಹಿಂದು ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಧರಿಸದಿರುವಂತೆ ಪಾತ್ವ ಹೊರಡಿಸಲು ಮುಸ್ಲಿಂ ಮತದ ಗುರುಗಳಲ್ಲಿ ಹಿಂದು ಮಹಾಸಭಾ ವಿನಂತಿಸುತ್ತದೆ. ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡ ಇದಕ್ಕೆ ಧ್ವನಿಗೂಡಿಸಬೇಕು. ಬುರ್ಕ ಒಂದು ಮತದ ಪ್ರತೀಕ. ಅದರ ದುರ್ಬಳಕೆ ನಡೆಯದಂತೆ ತಡೆಯಲು ಬುರ್ಕವನ್ನು ಸಾರ್ವಜನಿಕ ಸ್ಥಳಗಳಲ್ಲಿ ಧರಿಸುವುದನ್ನು ನಿಷೇಧಿಸುವಂತೆ ಹಿಂದು ಮಹಾಸಭಾ ವಿನಂತಿಸುತ್ತದೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಪ್ರೇಮ್ ಶೆಟ್ಟಿ ಪೊಳಲಿ, ಪುನೀತ್ ಸುವರ್ಣ ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?