ತೊಕ್ಕೊಟ್ಟು: ಎಟಿಎಂ ನಿಂದ ಹಣ ಕಳವಿಗೆ ಯತ್ನ : ವ್ಯಕ್ತಿ ಸೆರೆ

ಉಳ್ಳಾಲ: ತೊಕ್ಕೊಟ್ಟು ವಿನಲ್ಲಿರುವ ಬರೋಡಾ ಬ್ಯಾಂಕಿಗೆ ಸೇರಿದ ಎಟಿಎಂ ನಿಂದ ಹಣ ಕಳವಿಗೆ ಯತ್ನಿಸಿದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.ಕೊಪ್ಪಳ ಜಿಲ್ಲೆ ಬಾಚನಹಳ್ಳಿ ನಿವಾಸಿ ಬೀರಪ್ಪ ಬಂಧಿತ.ನಡುರಾತ್ರಿ 2 ಗಂಟೆಗೆ ತೊಕ್ಕೊಟ್ಟು ವಿನಲ್ಲಿರುವ ಎಟಿಎಂನಿಂದ ಬಂಧಿತ ಹಣ ಕಳವುಗೈಯ್ಯಲು ಯತ್ನಿಸುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಬ್ಯಾಂಕ್ ಸೆಕ್ಯುರಿಟಿ ವಿಭಾಗ ಉಳ್ಳಾಲದ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸ್ ತಂಡ ಆರೋಪಿತನನ್ನು ಬಂಧಿಸಿದ್ದಾರೆ.

Related Posts

Leave a Reply

Your email address will not be published.

How Can We Help You?