ಭಾರತದ ಮಾರುಕಟ್ಟೆ ಬೇಕೆಂದರೆ, ಉದ್ಯೋಗಾವಕಾಶ ಸೃಷ್ಟಿಸಬೇಕು; ಟೆಸ್ಲಾಗೆ ಕೇಂದ್ರ ಸರ್ಕಾರ ತಾಕೀತು

ವಿದೇಶದಲ್ಲಿ ವಿದ್ಯುತ್ ಚಾಲಿತ ಕಾರುಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಮೂಲದ ಟೆಸ್ಲಾ ಕಂಪನಿ ಭಾರತದಲ್ಲಿ ತಯಾರಿಕಾ ಚಟುವಟಿಕೆ ಆರಂಭಿಸದ ಹೊರತು ವಿನಾಯಿತಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಕೃಷನ್ ಪಾಲ್ ಗುರ್ಜರ್ ಅವರು ಲೋಕಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ವಿದ್ಯುತ್ ಚಾಲಿತ ಕಾರುಗಳ ಮೇಲಿನ ಅಮದು ಸುಂಕವನ್ನು ಕಡಿಮೆ ಮಾಡಬೇಕು ಎಂದು ಟೆಸ್ಲಾ ಕಂಪನಿಯು ಕಳೆದ ವರ್ಷ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಟೆಸ್ಲಾ ಕಂಪನಿಯು ಭಾರತದಲ್ಲಿ ತಯಾರಿಕಾ ಘಟಕ ಆರಂಭಿಸಿದಲ್ಲಿ ತೆರಿಗೆ ವಿನಾಯಿತಿ ಬಗ್ಗೆ ಪರಿಶೀಲಿಸಬಹುದು ಎಂದು ಸರ್ಕಾರ ಹೇಳಿದೆ.

“ಟೆಸ್ಲಾ ಕಂಪನಿಗೆ ಚೀನಾದ ಕಾರ್ಮಿಕರು ಬೇಕಾಗಿದ್ದಾರೆ, ಆದರೆ ಭಾರತದ ಮಾರುಕಟ್ಟೆಯನ್ನೂ ಬಯಸುತ್ತಿದೆ. ಮೋದಿ ಸರ್ಕಾರ ಅಂತಹ ಉದ್ಯಮಕ್ಕೆ ಅವಕಾಶ ಕೊಡುವುದಿಲ್ಲ. ಭಾರತದ ಮಾರುಕಟ್ಟೆಯನ್ನು ಬಳಸಿಕೊಳ್ಳಬೇಕೆಂದರೆ ಭಾರತೀಯರಿಗೆ ಉದ್ಯೋಗವಕಾಶ ಕೊಡಬೇಕು” ಎಂದು ಗುರ್ಜರ್ ಹೇಳಿದ್ದಾರೆ.

Related Posts

Leave a Reply

Your email address will not be published.

How Can We Help You?