ಮಂಗಳೂರು ರಾಜ್ಯದ ಮಾದರಿ ನಗರವನ್ನಾಗಿಸಲು ನಮ್ಮ ಪ್ರಯತ್ನ ಸಾಗಿದೆ : ಶಾಸಕ ವೇದವ್ಯಾಸ್ ಕಾಮತ್

ನಗರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು ಮುಂದಿನ 2 ವರ್ಷದಲ್ಲಿ ಮಂಗಳೂರು ರಾಜ್ಯದ ಮಾದರಿ ನಗರವನ್ನಾಗಿಸಲು ನಮ್ಮ ಪ್ರಯತ್ನ ಸಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಯ ಡೊಂಗರಕೇರಿ ವಾರ್ಡಿನಲ್ಲಿ‌ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 1.5 ಕೋಟಿ ವೆಚ್ಚದಲ್ಲಿ ಸಿಟಿ ಪಾಯಿಂಟ್ ಸರ್ಕಲ್ ನಿಂದ ಡೊಂಗರಕೇರಿ ಮೂಲಕ ನ್ಯೂಚಿತ್ರ ಚಿತ್ರಮಂದಿರ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಹಾಗೂ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಟ್ರೀಟ್ ಫೀಲ್ಡ್ ಬಳಿಯಿರುವ ಹರಿಗುರು ಅಪಾರ್ಟ್ಮೆಂಟ್ ಸಮೀಪದಲ್ಲಿ ‌ಕಾಲುಸಂಕ ನಿರ್ಮಾಣ ಕಾಮಗಾರಿಗೂ ಕೂಡ ಚಾಲನೆ ನೀಡಲಾಗಿದೆ ಎಂದರು.

ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುದಾನ ತರಲಾಗಿದ್ದು ಅನೇಕ ಕಡೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಮಂಗಳೂರು ರಾಜ್ಯದ ಮಾದರಿ ಕ್ಷೇತ್ರವಾಗಿ ಗುರುತಿಸಿಕೊಳ್ಳಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಲೀಲಾವತಿ ಪ್ರಕಾಶ್, ಸ್ಥಳೀಯ ಕಾರ್ಪೋರೇಟರ್ ಜಯಶ್ರೀ ಕುಡ್ವ, ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ವರದರಾಯ ನಾಗ್ವೇಕರ್, ವಿನಾಯಕ ಶೇಟ್, ಬಿಜೆಪಿ ಹಿರಿಯ ಮುಖಂಡರಾದ ನಗರ್ ನಾರಾಯಣ ಶೆಣೈ, ದೇವಾನಂದ ಶೆಣೈ, ಸತೀಶ್ ಕಾಮತ್, ದಿನಕರ್ ಶೆಟ್ಟಿ, ಮುಖಂಡರಾದ ಶ್ರೀನಿವಾಸ್ ಶೇಟ್, ರಮೇಶ್ ಹೆಗ್ಡೆ, ಜನಾರ್ದನ್ ಕುಡ್ವ, ವಸಂತ್ ಜೆ ಪೂಜಾರಿ, ಅರುಣ್ ಶೇಟ್, ಚಂದ್ರಹಾಸ್ ಶೆಟ್ಟಿ, ನಾಗೇಶ್, ಕೃಷ್ಣ, ಶರತ್, ಭವಾನಿ ಶಂಕರ್, ಜ್ಞಾನೇಶ್ವರ ಪೈ, ಪ್ರವೀಣ್, ಪ್ರಕಾಶ್, ರಮೇಶ್ ಪಟೇಲ್ ಹಾಗೂ ಪಕ್ಷದ ಕಾರ್ಯಕರ್ತರು,ಪರಿಸರದ ನಾಗರಿಕರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?