ಬೋಳೂರು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ : ಹಸಿರು ಹೊರೆಕಾಣಿಕೆ ಮೆರವಣಿಗೆ

ಮಂಗಳೂರಿನ ಬೋಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಹಿತ ವರ್ಷಾವಧಿ ಮಹಾಪೂಜೆ ಕಾರ್ಯಕ್ರಮ ಫೆಬ್ರವರಿ 11ರಿಂದ ಫೆ. 15ರ ವರೆಗೆ ಮತ್ತು ಫೆ.19ರಂದು ಶ್ರೀ ಮಲರಾಯ ಧೂಮಾವತಿ ದೈವಗಳ ನೇಮೋತ್ಸವ ನಡೆಯಲಿದ್ದು, ಆ ಪ್ರಯುಕ್ತ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಬೋಳೂರು ಮೊಗವೀರ ಮಹಾಸಭಾ ಚಾವಡಿಯಿಂದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ಸಾಗಿತು.

ನೂರಾರು ಭಕ್ತರು ಹಸಿರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲ ಬೋಳೂರು ಮೊಗವೀರ ಸಭಾದ ಅಧ್ಯಕ್ಷರಾದ ರಾಜಶೇಖರ್ ಕರ್ಕೇರ, ಉಪಾಧ್ಯಕ್ಷರಾದ ದೇವದಾಸ್ ಬೋಳೂರು, ಖಜಾಂಜಿ ರಂಜನ್ ಬೋಳೂರು, ಕಾರ್ಯದರ್ಶಿ ಸುಭಾಶ್ ಕುಂದರ್, ಹಾಗೂ ಗುರಿಕಾರರು, ಬೋಳೂರು ಮೊಗವೀರ ಮಹಾಸಭಾದ ಸದಸ್ಯರುಗಳು ಹಾಗೂ ಮಹಿಳಾ ಮಂಡಲದ ಅಧ್ಯಕ್ಷರು ಸದಸ್ಯರುಗಳು ಪಾಲ್ಗೊಂಡಿದ್ದರು.