ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಸ್ಥಾಪಕರ ದಿನಾಚರಣೆ

ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಸ್ಥಾಪಕರ ದಿನಾಚರಣೆಯು ಫೆಬ್ರವರಿ 14ರಂದು ಪಾಂಡೇಶ್ವರದ ಶ್ರೀನಿವಾಸ್ ಕಾಲೇಜಿನ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಜರುಗಲಿದೆ ಎಂದು ಶ್ರೀನಿವಾಸ್ ವಿವಿಯ ಉಪಕುಲಪತಿಗಳಾದ ಡಾ. ಪಿ.ಎಸ್. ಐತಾಳ್ ಹೇಳಿದರು.
ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಬಂದರಿನ ಅಧ್ಯಕ್ಷರಾದ ವೆಂಕಟ ರಮಣ ಅಕ್ಕರಾಜು ಅವರು ಭಾಗವಹಿಸಲಿದ್ದಾರೆ ಹಾಗೂ ಸಂಸ್ಥಾಪಕದ ದಿನಾಚರಣೆಯ ಕುರಿತು ಉಪಾನ್ಯಾಸವನ್ನು ನೀಡಲಿದ್ದಾರೆ. ಎ ಶಾಮ ರಾವ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಶ್ರೀನಿವಾಸ್ ವಿಶ್ವವಿದ್ಯಾಲುದ ಕುಲಾಧಿಪತಿಗಳಾದ ಡಾ.ಸಿಎ ಎ ರಾಘವೇಂದ್ರ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಡಾ.ಎ ಶ್ರೀನಿವಾಸ್ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾದ ಎ ಮಿತ್ರಾ ಎಸ್.ರಾವ್, ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾದ ಪದ್ಮಿನಿ ಕುಮಾರ್, ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನಿಲ್ ಕುಮಾರ್, ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ. ಶ್ರೀನಿವಾಸ್ ಮಯ್ಯ, ಅಭಿವೃದ್ಧಿ ವಿಭಾಗದ ಕುಲಸಚಿವರಾದ ಡಾ. ಅಜಯ್ ಕುಮಾರ್, ಶೈಕ್ಷಣಿಕ ವಿಭಾಗದ ಕುಲಸಚಿವರಾದ ಆದಿತ್ಯ ಕುಮಾರ್ ಮಯ್ಯ, ಡಾ. ಶ್ರೀಮತಿ ಸುಷ್ಮಾ ಕೇಸರಿ, ಕುಮಾರಿ ಮೇಘನಾ, ಕುಮಾರಿ ಸಮನ ಮತ್ತು ಮಾಸ್ಟರ್ ಇಶಾನ್ ಅವರು ವೇದಿಕೆಯಲ್ಲಿ ಉಪಸ್ಥಿತಲಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಏಳು ಸಾಧಕರನ್ನು ಸಂಸ್ಥಾಪಕರ ದಿನಾಚರಣೆಯನ್ನು ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಾಗೂ ಹನ್ನೆರಡು ಪಿಹೆಚ್‍ಡಿ ಪದವೀಧರನ್ನು ಮತ್ತು ಚಿನ್ನದ ಪದಕ ಪಡೆದ ಎಂಟು ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕುಲಸಚಿವರಾದ ಡಾ. ಅನಿಲ್ ಕುಮಾರ್, ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ. ಶ್ರೀನಿವಾಸ್ ಮಯ್ಯ ಮತ್ತು ಅಭಿವೃದ್ಧಿ ವಿಭಾಗದ ಕುಲಸಚಿವರಾದ ಡಾ. ಅಜಯ್ ಕುಮಾರ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?