ಹಿಜಾಬ್- ಶಾಲು ವಿವಾದ: ಉಡುಪಿಯಲ್ಲಿ144 ಸೆಕ್ಷನ್ ಜಾರಿ

ಶಾಲು ಹಾಗೂ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಫೆಬ್ರವರಿ 14 ರಿಂದ ಫೆ.19 ರವರೆಗೆ ಅನ್ವಯವಾಗುವಂತೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ನೂರಾರು ಪೊಲೀಸರು ಪಥ ಸಂಚಲನ ನಡೆಸಿದರು.

ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ನ ತ್ರಿಸದಸ್ಯ ಪೀಠವು ಸೋಮವಾರ (ಫೆ.14) ವಿಚಾರಣೆ ನಡೆಸಲಿದೆ. ಅಲ್ಲದೇ, ಸೋಮವಾರದಿಂದ ಶಿಕ್ಷಣ ಸಂಸ್ಥೆಗಳು ಕೂಡ ಆರಂಭವಾಗಲಿವೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ನಿಷೇಧಾಜ್ಞೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು.

ಜಿಲ್ಲಾಧಿಕಾರಿ ಆದೇಶದ ಮುಖ್ಯಾಂಶಗಳು:
ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ, ಪ್ರತಿಭಟನೆ, ಮೆರವಣಿಗೆ ನಡೆಸಲು ಅವಕಾಶವಿರುವುದಿಲ್ಲ. ಪರ-ವಿರೋಧ ಘೋಷಣೆ ಕೂಗುವಂತಿಲ್ಲ, ಜಾತಿ-ಧರ್ಮದ ನೈತಿಕತೆ ವಿರುದ್ಧವಾಗಿ ನಡೆದುಕೊಳ್ಳುವಂತಿಲ್ಲ, ಶಸ್ತ್ರ-ದೊಣ್ಣೆ, ಕತ್ತಿ ಮತ್ತಿತರ ಮಾರಕಾಸ್ತ್ರಗಳ ಸಾಗಾಟವನ್ನು ನಿಷೇಧಿಸಲಾಗಿದೆ.
ಪ್ರತಿಭಟನೆ, ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆಯನ್ನು ಸಹ ನಿಷೇಧ ಮಾಡಲಾಗಿದೆ. ಪ್ರಚೋದನಕಾರಿ ಭಾಷಣ, ಸಂಗೀತ, ಹಾಡು, ಘೋಷಣೆಗಳನ್ನು ಕೂಗುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.

Related Posts

Leave a Reply

Your email address will not be published.

How Can We Help You?