ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಮೊದಲ ಪಂದ್ಯದಲ್ಲೇ ಭಾರತಕ್ಕೆ ಪಾಕಿಸ್ತಾನ ಎದುರಾಳಿ

ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದೆ. ಆಸ್ಟ್ರೇಲಿಯಾದಲ್ಲಿ ನೆಡೆಯಲಿರುವ ಟಿ-20ವಿಶ್ವಕಪ್ಗೆ ಅಕ್ಟೋಬರ್ನಲ್ಲಿ ಚಾಲನೆ ಸಿಗಲಿದೆ. ಅಕ್ಟೋಬರ್ 23ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಮಹತ್ವದ ಪಂದ್ಯವನ್ನು ಮೆಲ್ಬೋನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ನವೆಂಬರ್ 9ರಂದು ಮೊದಲ ಸೆಮಿಫೈನಲ್, ನವೆಂಬರ್ 10ರಂದು ಎರಡನೇ ಸೆಮಿಫೈನಲ್ ಮತ್ತು ನೆವೆಂಬರ್ 13ರಂದು ಫೈನೆಲ್ ಪಂದ್ಯ ನಡೆಯಲಿದೆ. ಮೊದಲ ರೌಂಡ್ನ ಮೊದಲ ಪಂದ್ಯ ಶೀಲಂಕಾ ಮತ್ತು ನಮೀಬಿಯಾ ನಡುವೆ ನಡೆಯಲಿದೆ. ಅಕ್ಟೋಬರ್ 21ರವರೆಗೆ ನಡೆಯುವ ಪಂದ್ಯಗಳಲ್ಲಿ ಅರ್ಹತೆ ಪಡೆದ ತಂಡಗಳು ಸೂಪರ್-12 ಹಂತಕ್ಕೆ ಪ್ರವೇಶ ಪಡೆಯಲಿವೆ. ಮೊದಲ ರೌಂಡ್ಗಳಲ್ಲಿ ಶ್ರೀಲಂಕಾ ನಮೀಬಿಯಾ, ಸ್ಕಾಟ್ಲಂಡ್, ವೆಸ್ಟ್ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಸೂಪರ್ 12 ಪಂದ್ಯಗಳು ಅಕ್ಟೋಬರ್ 22ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ನ್ಯೂಜಿಲೆಂಡ್ ಮತ್ತು ಕಳೆದ ವರ್ಷದ ಚಾಂಪಿಯನ್ ಆಸ್ಟ್ರೇಲಿಯ ತಂಡಗಳ ನಡುವೆ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮೊದಲ ಸೆಮಿಫೈನಲ್ ಪಂದ್ಯ ನೆವೆಂಬರ್ 9 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಮತ್ತು ಎರಡನೇ ಸೆಮಿಫೈನಲ್ ನವೆಂಬರ್ 10ರಂದು ಅಡಿಲೇಡ್ ಓವಲ್ ಗ್ರೌಂಡ್ನಲ್ಲಿ ನಡೆಯಲಿದೆ. ನಂತರ ನವೆಂಬರ್ 13ರಂದು ಫೈನಲ್ ಪಂದ್ಯ ಮೆಲ್ಟೋನ್ ಕ್ರಿಕೆಟ್ ಗ್ರೌಂಡ್ನಲ್ಲಿ ಆಯೋಜಿಸಲಾಗಿದೆ.
ಗ್ರೂಪ್ ಎ: ಶ್ರೀಲಂಕಾ, ನಮೀಬಿಯಾ, ಎರಡು ಕ್ವಾಲಿಫೈಯರ್ ತಂಡಗಳು
ಗ್ರೂಪ್ ಬಿ: ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಎರಡು ಕ್ವಾಲಿಫೈಯರ್ ತಂಡಗಳು
ಸೂಪರ್ 12 ಹಂತ
ಗ್ರೂಪ್ 1: ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್,
ಗ್ರೂಪ್ 2: ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ವೆಸ್ಟ್ಇಂಡೀಸ್,
ಭಾರತದ ಪಂದ್ಯಗಳ ವೇಳಾಪಟ್ಟಿ
ಅಕ್ಟೋಬರ್ 23: ಭಾರತ vs ಪಾಕಿಸ್ತಾನ, ಮೆಲ್ಬೋರ್ನ್ ಕ್ರೀಡಾಂಗಣ
ಅಕ್ಟೋಬರ್ 27: ಭಾರತ vs ಗ್ರೂಪ್ ಎ ರನ್ನರ್ ಅಪ್, ಸಿಡ್ನಿ ಕ್ರೀಡಾಂಗಣ
ಅಕ್ಟೋಬರ್ 30: ಭಾರತ vs ದಕ್ಷಿಣ ಆಫ್ರಿಕಾ, ಪರ್ತ್ ಕ್ರೀಡಾಂಗಣ
ನವೆಂಬರ್ 2 ಭಾರತ vs ಬಾಂಗ್ಲಾದೇಶ, ಅಡಿಲೇಡ್ ಓವಲ್.