ಈ ವಾರಾಂತ್ಯದಲ್ಲಿ 6 ಸಿನಿಮಾಗಳು ರಿಲೀಸ್

ಕೊರೊನಾ ಹೆಚ್ಚಿದ ಕಾರಣ 2 ವರ್ಷಗಳಿಂದ ಸಿನಿಮಾಗಳು ಪರದೆ ಮೇಲೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಸಿನಿಪ್ರಿಯರಿಗೆ ರಸದೌತಣವಾಗಿದೆ. ಕಳೆದ ವಾರ 6 ಚಿತ್ರಗಳು ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಇದನ್ನು ಕಂಡ ನಿರ್ಮಾಪಕರು ಚಿತ್ರಗಳನ್ನು ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ. ಅದರಂತೆ ಈ ವಾರ ಕೂಡ 6 ಸಿನಿಮಾಗಳು ಬಿಡುಗಡೆಯಾಗಲು ಸಿದ್ದವಾಗಿವೆ.

ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಗಲಿದೆ ಎಂಬ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ

  1. ಬೈ ಟು ಲವ್ : ನಟ ಧನವೀರ್ ಮತ್ತು ನಟಿ ಶ್ರೀಲೀಲಾ ಅಭಿನಯದ ಸಿನಿಮಾ ‘ಬೈಟು ಲವ್’ ಈ ಚಿತ್ರ ಫೆಬ್ರವರಿ 18ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಪ್ರೇಮ ಕಥೆ ಆಧಾರಿತ ಈ ಸಿನಿಮಾ ಸಂಬಂಧಗಳ ಕುರಿತಾದ ವಿವರಣೆಯನ್ನು ಚಿತ್ರದಲ್ಲಿ ತಿಳಿಸಲಿದೆ ಎಂದು ನಿರ್ದೇಶಕ ಹರಿ ಸಂತೋಷ ಹೇಳಿದ್ದಾರೆ.
  2. ವರದ : ಮರಿ ಟೈಗರ್ ಎಂದೇ ಪ್ರಖ್ಯಾತಿ ಪಡೆದ ನಟ ವಿನೋದ್ ಪ್ರಭಾಕರ್ ನಟನೆಯ ಸಿನಿಮಾ ‘ವರದ’ ಫೆಬ್ರವರಿ 18ಕ್ಕೆ ಬಿಡುಗಡೆಯ ದಿನಾಂಕವನ್ನು ಖಾತ್ರಿ ಮಾಡಿದೆ. ಈ ಚಿತ್ರಕ್ಕೆ ಉದಯ್ ಪ್ರಕಾಶ್ ನಿರ್ದೇಶನವಿದೆ ಮತ್ತು ಸುನಿತಾ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ.
  3. ಫ್ಯಾಮಿಲಿ ಪ್ಯಾಕ್ : ನಟ ಪುನೀತ್ ರಾಜ್ ಕುಮಾರ್ ನಿರ್ಮಾಣ ಸಂಸ್ಥೆಯದ ಪಿಆರ್‌ಕೆ ಅಡಿಯಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾವಾಗಿದೆ. ಚಿತ್ರದಲ್ಲಿ ನಟ ಲಿಖಿತ್ ಶೆಟ್ಟಿಗೆ ಜೋಡಿಯಾಗಿ ನಟಿ ಅಮೃತ ಅಯ್ಯಂಗಾರ್ ನಟಿಸಿದ್ದಾರೆ. ಸಿನಿಮಾದ ಹಾಡುಗಳು ಬಿಡುಗಡೆಯಾಗಿ ಯೂ ಟ್ಯೂಬ್‌ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಗಳಿಸಿದೆ. ಈ ಚಿತ್ರ ಫೆಬ್ರವರಿ 17ಕ್ಕೆ ಬಿಡುಗಡೆಯಾಗಲಿದೆ
  4. ಗಿಲ್ಕಿ : ‘ಗಿಲ್ಕಿ’ ಸಿನಿಮಾವನ್ನು ವೈ.ಕೆ ನಿರ್ದೇಶನ ಮಾಡಿದ್ದಾರೆ. ಸಮಾಜದಿಂದ ವಿಮುಖರಾದ ಮೂವರು ವ್ಯಕ್ತಿಗಳ ಕುರಿತಾದ ಕತೆಯನ್ನು ಸಿನಿಮಾ ಹೇಳುತ್ತದೆ. ಚಿತ್ರದಲ್ಲಿ ನಾಯಕ ಗಿಲ್ಕಿ, ನಾಯಕಿ ನ್ಯಾನ್ಸಿ ಹಾಗೂ ಷೇಕ್ಸ್ಫಿಯರ್ ಎಂಬ ಮೂರು ಮುಖ್ಯ ಪಾತ್ರಗಳಿವೆ. ನಾಯಕ ಅರೆ ಬುದ್ಧಿಮಾಂದ್ಯನಾಗಿದ್ದಾನೆ, ನಾಯಕಿ ಖಾಯಿಲೆಗೆ ತುತ್ತಾಗಿ ಕೈ-ಕಾಲು ಸ್ವಾಧೀನ ಕಳೆದುಕೊಂಡಿರುತ್ತಾಳೆ. ಈ ಮೂವರನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತದೆ, ಸಮಾಜವನ್ನೂ ಈ ಮೂವರು ನೋಡುವ ರೀತಿಯೇ ಚಿತ್ರದ ಕತೆಯಾಗಿದೆ. ಈ ಚಿತ್ರ ಫೆಬ್ರವರಿ 18ಕ್ಕೆ ಬಿಡುಗಡೆಯಾಗಲಿದೆ.
  5. ಭಾವಚಿತ್ರ : ಮಗಳು ಜಾನಕಿ ಧಾರವಾಹಿ ಖ್ಯಾತಿಯ ಗಾನವಿ ಲಕ್ಷ್ಮಣ್ ಮತ್ತು ಯಾನ ಸಿನಿಮಾದ ಚಕ್ರವರ್ತಿ ನಟನೆಯ ‘ಭಾವಚಿತ್ರ’ ಸಿನಿಮಾ ಫೆಬ್ರವರಿ 18ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಗಿರೀಶ್ ಕುಮಾರ್ ಬಿ ನಿರ್ದೇಶನವಿದೆ. ಭಾವಚಿತ್ರ ಸಿನಿಮಾ ಟೆಕ್ನೋ-ಥ್ರಿಲ್ಲರ್ ಮತ್ತು ಹವ್ಯಾಸಿ ಛಾಯಾಗ್ರಾಹಕನ ಪ್ರಯಾಣದ ಕಥೆಯಾಗಿದೆ.
  6. ಬಹುಕೃತ ವೇಷಂ : ‘ಆಗ್ನಿಸಾಕ್ಷಿ’ ಧಾರವಾಹಿ ಖ್ಯಾತಿಯ ಬಿಗ್ ಬಾಸ್ ಸ್ಫರ್ಧಿ ವೈಷ್ಣವಿ ಗೌಡ ನಟನೆಯ ‘ಬಹುಕೃತ ವೇಷಂ’ ಚಿತ್ರ ಫೆಬ್ರವರಿ 18ಕ್ಕೆ ಬಿಡುಗಡೆಯಾಗಲಿದೆ. ಇದು ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಕಿರುತೆರೆ ನಟಿ ವೈಷ್ಣವಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಿಲೇರಿಯಂ ಫೋಬಿಯಾ ಎನ್ನುವ ಖಾಯಿಲೆಯನ್ನು ಇಟ್ಟುಕೊಂಡು ಈ ಚಿತ್ರದ ಕತೆಯನ್ನು ರೂಪಿಸಲಾಗಿದೆ.

Related Posts

Leave a Reply

Your email address will not be published.

How Can We Help You?