ಜನರ ಸಮಸ್ಯೆಗೆ ಸ್ಪಂದಿಸುವ ಬದಲು ಪ್ರತಿಯೊಂದಕ್ಕೂ ನೆಹರೂ ದೂಷಿಸಬೇಡಿ: ಪ್ರಧಾನಿ ಮೋದಿಗೆ ಮನಮೋಹನ್ ಸಿಂಗ್ ಬುದ್ಧಿವಾದ

ನವದೆಹಲಿ: ಪಂಜಾಬ್ ಚುನಾವಣೆಯ ವಿಚಾರವಾಗಿ ರಂಗಕ್ಕೆ ಇಳಿದಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಬುದ್ಧಿವಾದ ಹೇಳಿದ್ದಾರೆ.

ಬಹಳ ಸಮಯದ ಬಳಿಕ ಮಾತನಾಡಿರುವ ಮನಮೋಹನ್ ಸಿಂಗ್, ಪ್ರಧಾನಿ ಮೋದಿಯವರು ಪ್ರತಿಯೊಂದು ಸಮಸ್ಯೆಗೂ ಜವಾಹರಲಾಲ್ ನೆಹರೂರನ್ನು ದೂಷಿಸುತ್ತಿದ್ದಾರೆ. ಪ್ರಧಾನಿ ಸ್ಥಾನಕ್ಕೆ ವಿಶೇಷ ಮಹತ್ವವಿದೆ ಎಂದು ನಾನು ಭಾವಿಸುತ್ತೇನೆ. ಇತಿಹಾಸವನ್ನು ದೂಷಿಸುವ ಬದಲು ಘನತೆಯನ್ನು ಕಾಯ್ದುಕೊಳ್ಳಬೇಕು ಎಂದು ಕುಟುಕಿದ್ದಾರೆ.

ಕಾಂಗ್ರೆಸ್ ಎಂದಿಗೂ ರಾಜಕೀಯ ಲಾಭಕ್ಕಾಗಿ ದೇಶವನ್ನು ವಿಭಜಿಸಲಿಲ್ಲ ಅಥವಾ ಸತ್ಯವನ್ನು ಮರೆಮಾಚಲಿಲ್ಲ ಎಂದು ಹೇಳಿರುವ 89 ವರ್ಷದ ಮನಮೋಹನ್ ಸಿಂಗ್, “ಒಂದೆಡೆ ಜನರು ಹಣದುಬ್ಬರ ಹಾಗೂ ನಿರುದ್ಯೋಗದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮತ್ತೊಂದೆಡೆ, ಕಳೆದ ಏಳೂವರೆ ವರ್ಷಗಳಿಂದ ಅಧಿಕಾರದಲ್ಲಿರುವ ಈಗಿನ ಸರಕಾರವು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಸರಿಪಡಿಸುವ ಬದಲು ಜನರ ಸಮಸ್ಯೆಗಳಿಗೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂರವರನ್ನು ದೂಷಿಸುತ್ತಲೇ ಇರುವುದು ಆ ಸ್ಥಾನಕ್ಕೆ ಘನತೆ ತರುವುದಲ್ಲ” ಎಂದು ಕಾಂಗ್ರೆಸ್ ಪ್ರಸಾರ ಮಾಡಿರುವ ವೀಡಿಯೊ ಸಂದೇಶದಲ್ಲಿ ಅವರು ಹೇಳಿದ್ದಾರೆ.

“ಪ್ರಧಾನಿ ಸ್ಥಾನಕ್ಕೆ ವಿಶೇಷ ಮಹತ್ವವಿದೆ ಎಂದು ನಾನು ಭಾವಿಸುತ್ತೇನೆ. ಪ್ರಧಾನಿಯವರು ಇತಿಹಾಸವನ್ನು ದೂಷಿಸುವ ಬದಲು ಘನತೆಯನ್ನು ಕಾಯ್ದುಕೊಳ್ಳಬೇಕು. ನಾನು 10 ವರ್ಷಗಳ ಕಾಲ ಪ್ರಧಾನಿಯಾಗಿದ್ದಾಗ ನನ್ನ ಕೆಲಸದ ಮೂಲಕ ಮಾತನಾಡಿದ್ದೇನೆ. ಪ್ರಪಂಚದ ಮುಂದೆ ದೇಶವು ಪ್ರತಿಷ್ಠೆಯನ್ನು ಕಳೆದುಕೊಳ್ಳಲು ನಾನು ಎಂದಿಗೂ ಬಿಡಲಿಲ್ಲ. ನಾನು ಯಾವತ್ತೂ ಭಾರತದ ಹೆಮ್ಮೆಗೆ ಧಕ್ಕೆ ತಂದಿಲ್ಲ” ಎಂದು ಹೇಳಿದರು.

ನನ್ನ ವಿರುದ್ಧ ದುರ್ಬಲ, ಶಾಂತ ಹಾಗೂ ಭ್ರಷ್ಟ ಎಂಬ ಸುಳ್ಳು ಆರೋಪದ ಆನಂತರ ಬಿಜೆಪಿ ಹಾಗೂ ಅದರ ಬಿ ಮತ್ತು ಸಿ ಟೀಮ್ ದೇಶದ ಮುಂದೆ ಬಹಿರಂಗಗೊಳ್ಳುತ್ತಿದೆ ಎಂಬ ತೃಪ್ತಿ ನನಗಿದೆ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published.

How Can We Help You?