ಕೋವಿಡ್ ಕರ್ತವ್ಯದಿಂದಾಗಿ ನೀಟ್ ಪರೀಕ್ಷೆಯಿಂದ ವಂಚಿತರಾಗಲಿದ್ದಾರೆ 5,000 ಇಂಟರ್ನ್‌ಗಳು

ಕೇರಳ, ಜಮ್ಮು ಮತ್ತು ಕಾಶ್ಮೀರ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ 5,000ಕ್ಕೂ ಹೆಚ್ಚು ವೈದ್ಯಕೀಯ ಇಂಟರ್ನ್‌ಗಳು – ಕೊರೊನಾ ತುರ್ತು ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಅವರು 2022ರ ನೀಟ್ ಪಿಜಿ ಪರೀಕ್ಷೆಯನ್ನು ಬರೆಯಲು ಹಿಂದೆ ಸರಿದಿದ್ದಾರೆ.

ಕೇರಳದಲ್ಲಿ 3,500 ಕ್ಕೂ ಹೆಚ್ಚು ಇಂಟರ್ನಿಗಳು ಕೋವಿಡ್ ವಿರುದ್ಧ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಾವು ಪಿಜೆಗೆ ಪ್ರವೇಶ ಪಡೆಯಲು ನಮ್ಮ ಮೊದಲ ಪ್ರಯತ್ನವನ್ನು ಕಳೆದುಕೊಳ್ಳುವುದು ಕಳವಳಕಾರಿ ಸಂಗತಿ ಎಂದು ಕೇರಳದ ಐಎಂಎ-ಮೆಡಿಕಲ್ ಸ್ಟೂಡೆಂಟ್ಸ್ ನೆಟ್ವರ್ಕ್‌ನ ಸಂಚಾಲಕ ವಿಷ್ಣು ಗೋಪನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಗಳು ನೀಟ್‌-ಪಿಜಿ 2022 ಪರೀಕ್ಷೆ ಬರೆಯಲು ಇಂಟರ್ನ್‌ಶಿಪ್ ಪೂರ್ಣಗೊಳಿಸಿರಬೇಕು. ಆದರೆ, ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಇಂಟರ್ನ್‌ಶಿಪ್ ಪೂರ್ಣಗೊಳಿಸುವ ಕಟ್-ಆಫ್ ದಿನಾಂಕವನ್ನು ಜುಲೈ 31ಕ್ಕೆ ವಿಸ್ತರಿಸಿದೆ. ಹೀಗಾಗಿ, ಪರೀಕ್ಷೆಗೂ ಮುನ್ನವೇ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಮುಗಿಯುವುದಿಲ್ಲವಾದ್ದರಿಂದ ಈ ಇಂಟರ್ನ್‌ಗಳು ಪರೀಕ್ಷೆ ಬರೆಯಲು ಅನರ್ಹರಾಗುತ್ತಾರೆ.

“5,000 ಕ್ಕೂ ಹೆಚ್ಚು ಇಂಟರ್ನಿಗಳು ನೀಟ್‌-ಪಿಜಿ 2022 ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುವುದಿಲ್ಲ. ಭಾರತದ ಇತಿಹಾಸದಲ್ಲಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಶೂನ್ಯ ವರ್ಷವೇ ಇರಲಿಲ್ಲ” ಎಂದು ಐಎಂಎ – ಜೂನಿಯರ್ ಡಾಕ್ಟರ್ಸ್ ನೆಟ್ವರ್ಕ್ನ ರಾಷ್ಟ್ರೀಯ ಕಾರ್ಯದರ್ಶಿ ಡಾ. ಕರಣ್ ಜುನೇಜಾ ಹೇಳಿದ್ದಾರೆ.

ಕೇರಳ ಆರೋಗ್ಯ ಸೇವೆಗಳ ವಿಶ್ವವಿದ್ಯಾಲಯದ ಅಡಿಯಲ್ಲಿ 25 ವೈದ್ಯಕೀಯ ಕಾಲೇಜುಗಳಿವೆ. ಇಂಟರರ್ನ್‌ಶಿಪ್ ಅರ್ಹತೆಯನ್ನು ವಿಸ್ತರಿಸುವ ನಿರ್ಧಾರವನ್ನು ಗುಜರಾತ್ ಇಂಟರ್ನ್ ವೈದ್ಯರ ಸಂಘದ ಅಧ್ಯಕ್ಷ ಡಾ ಮೀತ್‌ ಘೋನಿಯಾ ಅವರು ಸ್ವಾಗತಿಸಿದ್ದಾರೆ.

“ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರವು ಅವರನ್ನು ಉದ್ಯೋಗಿಗಳಾಗಿ ಬಳಸಿಕೊಂಡಿದೆ ಎಂಬ ಏಕೈಕ ಕಾರಣದಿಂದ ಅವರು ಪರೀಕ್ಷೆಗೆ ಅರ್ಹರಾಗುವುದಿಲ್ಲ. ಅವರು ಕೊರೊನ ವಿರುದ್ದದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅವರ ಇಂಟರ್ನ್‌ಶಿಪ್ ತಡವಾಗಿ ಪ್ರಾರಂಭವಾಗಿದೆ. ಈಗ ಅವರು ಪರೀಕ್ಷೆಗೆ ಅರ್ಹತೆ ಪಡೆಯುವುದಿಲ್ಲ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಸರ್ಕಾರವನ್ನು ವಿನಂತಿಸುತ್ತೇವೆ” ಎಂದು ಘೋನಿಯಾ ಹೇಳಿದ್ದಾರೆ.

ಈ ಇಂಟರ್ನ್‌ಗಳು ತಮ್ಮ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಅವರು ಒಂದು ವರ್ಷದವರೆಗೆ ಅವಕಾಶಗಳಿಂದ ವಂಚಿತರಾಗುತ್ತಾರೆ. ಜೂನಿಯರ್ ವೈದ್ಯರು ಆರೋಗ್ಯ ಕ್ಷೇತ್ರದಲ್ಲಿ ಬೆನ್ನೆಲುಬಾಗಿದ್ದಾರೆ. ಇಂಟರ್ನ್‌ಗಳು ಪರೀಕ್ಷೆಯನ್ನು ತಪ್ಪಿಸಿಕೊಳ್ಳುವುದು ನಮ್ಮ ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚು ಪರಿಣಾಮ ಬೀರುವುದಲ್ಲದೆ, ಜನರಿಗೂ ಸಮಸ್ಯೆಯಾಗಲಿದೆ ಎಂದು ಡಾ ಜುನೇಜಾ ಹೇಳಿದ್ದಾರೆ.

Related Posts

Leave a Reply

Your email address will not be published.

How Can We Help You?