‘ಶಿವ 143’ ಚಿತ್ರದ ‘ಮಳೆ ಹನಿಯೇ’ ಹಾಡು ರಿಲೀಸ್

ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಬ್ಬ ಸದಸ್ಯ ಕನ್ನಡ ಸಿನಿಮಾ ರಂಗಕ್ಕೆ ಕಾಲಿಸುತ್ತಿದ್ದಾರೆ. ಅವರೇ ಡಾ.ರಾಜ್ ಕುಮಾರ್ ಮೊಮ್ಮಗ ಧೀರೇನ್ ರಾಮ್ ಕುಮಾರ್. ‘ಶಿವ 143’ ಮುಖಾಂತರ ಧೀರೇನ್ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಸಿನಿಮಾದ ಚಿತ್ರಿಕರಣ ಶುರುವಾಗಿ ಬಹಳ ಸಮಯವಾಗಿದ್ದು, ಕಾರಣಾಂತರಗಳಿಂದ ಬಿಡುಗಡೆ ತಡವಾಗಿದೆ.
ಸದ್ಯ ಈ ಚಿತ್ರದ ‘ಮಳೆ ಹನಿಯೇ’ ಹಾಡಿಗೆ ಯೂಟ್ಯೂಬ್ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಮಿಗಳ ದಿನದಂದು ಫೆಬ್ರವರಿ 14ಕ್ಕೆಈ ಹಾಡು ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ನಾಯಕ ಧೀರೇನ್ ರಾಮ್ ಕುಮಾರ್ಗೆ ನಾಯಕಿಯಾಗಿ ನಟಿ ಮಾನ್ವಿತಾ ಕಾಮತ್ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ನಟಿ ಮಾನ್ವಿತಾ ತುಂಬ ಬೋಲ್ಡ್ ಆಗಿ ನಟಿಸಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಬಿಡುಗಡೆಯಾಗಿರುವ ‘ಮಳೆ ಹನಿಯೇ’ ಹಾಡಿನಲ್ಲಿ ಚುಂಬನದ ದೃಶ್ಯಗಳೊಂದಿಗೆ ಮಾದಕ ನಟನೆಯ ದೃಶ್ಯಗಳು ತುಂಬಿಕೊಂಡಿವೆ. ಚಿತ್ರದಲ್ಲಿನ ಚುಂಬನದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ.
ನಟ ಧೀರೇನ್ ರಾಮ್ ಕುಮಾರ್ ಮತ್ತು ನಟಿ ಮಾನ್ವಿತಾ ಕಾಮತ್ ಈ ಸಿನಿಮಾದಲ್ಲಿ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ಕೆಮಿಸ್ಟ್ರಿ ಸಿನಿಮಾದಲ್ಲಿ ಚೆನ್ನಾಗಿ ಮೂಡಿಬಂದಿದೆ.
ಪ್ರೇಮಿಗಳ ದಿನಕ್ಕೆ ವಿಶೇಷವಾಗಿ ಬಿಡುಗಡೆಯಾದ ‘ಮಳೆ ಹನಿಯೇ’ ಗೀತೆಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ಈ ಹಾಡಿಗೆ ಕ್ರಾಂತಿ ಕುಮಾರ್ ಸಾಹಿತ್ಯವಿದೆ. ನಟ ಧೀರೇನ್ ರಾಮ್ ಕುಮಾರ್ ಅಭಿನಯದ ‘ಶಿವ 143’ ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶನವಿದೆ.
‘ಮಳೆ ಹನಿಯೇ’ ಗೀತೆಯಲ್ಲಿನ ನಟ ಧೀರೇನ್ ರಾಮ್ ಕುಮಾರ್ ಮತ್ತು ನಟಿ ಮಾನ್ವಿತಾ ಕಾಮತ್ರ ಅಭಿನಯ ಕಂಡ ಪ್ರೇಕ್ಷಕರು ಅಚ್ಚರಿ ಪಟ್ಟಿದ್ದಾರೆ.