ಮಧ್ಯರಾತ್ರಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿ : ಅಟ್ಟಾಡಿಸಿ ಹಿಡಿದ ಗಸ್ತಿನಲ್ಲಿದ್ದ ಪೊಲೀಸರು

ಕಡಬ: ರಸ್ತೆ ಬದಿ ಅನುಮಾನಸ್ಪದವಾಗಿ ವ್ಯಕ್ತಿಯೊಬ್ಬ ಇರುವುದನ್ನು ಗಮನಿಸಿದ ಗಸ್ತಿನಲ್ಲಿದ್ದ ಪೊಲೀಸರು ಆತನನ್ನು ಮಧ್ಯರಾತ್ರಿ ಅಟ್ಟಡಿಸಿದ ಘಟನೆ ಪೆರಾಬೆ ಗ್ರಾಮದ ಕುಂತೂರಿನಲ್ಲಿ ಫೆ.18 ರಾತ್ರಿ ನಡೆದಿದೆ.

ಎಸ್.ಐ ರುಕ್ಮ ನಾಯ್ಕ್ ಮತ್ತು ಸಿಬ್ಬಂದಿಗಳು ಕಡಬ-ಆಲಂಕಾರು ರಾಜ್ಯ ರಸ್ತೆಯಲ್ಲಿ ಕರ್ತವ್ಯದ ನಿಮಿತ್ತ ತೆರಳುತ್ತಿದ್ದ ವೇಳೆ ರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ವ್ಯಕ್ತಿಯೊಬ್ಬ ಮಾರ್ಗದ ಸಮೀಪ ಕಾಣಸಿಕ್ಕಿದ್ದಾನೆ. ಪೊಲೀಸರ ವಾಹನ ಕಂಡೊಡನೆ ವೇಗವಾಗಿ ಓಡಿದ್ದಾನೆ. ಅನುಮಾನಗೊಂಡ ಪೊಲೀಸರು ವಾಹನ ನಿಲ್ಲಿಸಿ ಆತನನ್ನು ಬೆನ್ನಟ್ಟಿದಾಗ ಪಕ್ಕದ ರಸ್ತೆಯತ್ತ ಓಡಿ ಹೋಗಿ ಕತ್ತಲೆಯಲ್ಲಿ ಮರೆಯಾಗಿದ್ದಾನೆ.

ಪೊಲೀಸರು ಈತನನ್ನು ಬೆನ್ನಟ್ಟಿ ಅಟ್ಟಾಡಿಸಿರುವ ಘಟನೆಯ ದೃಶ್ಯ ಸ್ಥಳೀಯ ಅಂಗಡಿಯೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಪೊಲೀಸರು ವಾಹನ ನಿಲ್ಲಿಸಿ ಟಾರ್ಚ್ ಬಳಸಿ ಆತನನ್ನು ಹುಡುಕುವ ಪ್ರಯತ್ನ ಮಾಡುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಬಾಗಿಲು ಮುರಿದು ಕಳ್ಳತನ ಮಾಡುತ್ತಿರುವುದು ಸುತ್ತಿಯಾಗುತ್ತಿದ್ದು ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣು ಇಟ್ಟಿರುವುದಕ್ಕೆ ಇದೊಂದು ಉದಾಹರಣೆಯಾಗಿದೆ.

Related Posts

Leave a Reply

Your email address will not be published.

How Can We Help You?