ಶಿವಮೊಗ್ಗದಲ್ಲಿ ಹರ್ಷ ಕೊಲೆ : ಪುತ್ತೂರಿನಲ್ಲಿ ವಿಹಿಂಪ, ಬಜರಂಗದಳ ಪ್ರತಿಭಟನೆ

ಶಿವಮೊಗ್ಗದಲ್ಲಿ ಬಜರಂಗದಳ ಮುಖಂಡ ಹರ್ಷ ಅವರ ಬರ್ಬರ ಹತ್ಯೆಯನ್ನು ಖಂಡಿಸಿ ಸೋಮವಾರ ಸಂಜೆ ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿಯಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಅವರು ಜಿಹಾದಿ ಮನೋಸ್ಥಿತಿಯ ನೀಚರು ದೇಶಭಕ್ತ ಹರ್ಷ ಅವರನ್ನು ಅಟ್ಟಾಡಿಸಿ ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯವಾಗಿದೆ. ಹಿಂದೂ ಕಾರ್ಯಕರ್ತರನ್ನು ಹತ್ಯೆ ನಡೆಸಿ, ಹಿಂದೂ ವಿರೋಧಿ ಚಟುವಟೆಕೆಗಳನ್ನು ನಡೆಸಿಕೊಂಡು ಹಿಂದೂಗಳ ನಾಶವನ್ನು ಮಾಡುತ್ತೇವೆ ಎಂದು ಜಿಹಾದಿಗಳು ಭ್ರಮೆಯಲ್ಲಿದ್ದಾರೆ. ಹರ್ಷ ಅವರ ಹತ್ಯೆ ಹಿಂದಿನ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಘೋರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ ಅಖಂಡವಾಗಿದ್ದ ಭಾರತವನ್ನು ಬೇರೆ ಬೇರೆ ಸಂದರ್ಭದಲ್ಲಿ ತುಂಡು ಮಾಡಲಾಯಿತು. ಇದೀಗ ಗಾಂಧೀಜಿಯ ಸತ್ಯ ಅಹಿಂಸೆಯ ಚಿಂತನೆ ನಡೆಯುವುದಿಲ್ಲ. ಕೈ ಎತ್ತಿದವರ ಕೈ ಕಡಿಯುವ ತಾಖತ್ತು ಹಿಂದೂ ಸಮಾಜಕ್ಕಿದೆ ಎಂಬುದನ್ನು ತೋರಿಸಬೇಕಾಗಿದೆ. ಪ್ರತ್ಯೇಕತಾವಾದವನ್ನು ಎಂದೂ ಒಪ್ಪಿಕೊಳ್ಳಲು ಬಜರಂಗದಳ, ವಿಶ್ವಹಿಂದೂ ಪರಿಷತ್ ಸಿದ್ದವಿಲ್ಲ. ಹರ್ಷ ಅವರ ಹತ್ಯೆಯ ಹಿಂದಿರುವ ಶಕ್ತಿಯನ್ನು ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ನಿರತರು ಪ್ರತಿಭಟನಾ ಸಭೆಗೆ ಮೊದಲು ಪುತ್ತೂರಿನ ವಿಹಿಂಪ ಕಚೇರಿಯಿಂದ ಅಮರ್ ಜವಾನ್ ಜ್ಯೋತಿ ತನಕ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.

ವಿಹಿಂಪ, ಬಜರಂಗದಳ ಮುಖಂಡರಾದ ಸತೀಶ್ ಬಿ.ಎಸ್, ನ್ಯಾಯವಾದಿ ಮಾಧವ ಪೂಜಾರಿ, ಹರೀಶ್ ಬೊಳ್ಳಾಡಿ, ವಿಶಾಕ್ ಸಸಿಹಿತ್ಲು, ಸಂಕಪ್ಪ ಗೌಡ, ಶ್ರೀಧರ್ ತೆಂಕಿಲ, ಅನಿಲ್ ತೆಂಕಿಲ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?