ಪಾಕಿಸ್ತಾನದ ವಿರುದ್ದ ಫ್ರಾನ್ಸ್ ನಲ್ಲಿ ಬೃಹತ್ ಪ್ರತಿಭಟನೆ

ಅಫ್ಘಾನ್, ಬಲೂಚಿಸ್ತಾನ ಮತ್ತು ಉಯಿಘರ್ ಸಮುದಾಯದ ಜನರು ಫ್ರಾನ್ಸ್ನಲ್ಲಿ ಪಾಕಿಸ್ತಾನದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಫ್ರಾನ್ಸ್ನಲ್ಲಿರುವ ‘ಫೈನಾನ್ಸಿಯಲ್ ಆಕ್ಷನ್ ಟಾಸ್ಕ್ ಪೋರ್ಸ್’ (ಎಫ್ಎಟಿಎಫ್) ಕಚೇರಿಯ ಹೊರಗೆ ಪ್ರತಿಭಟನಾನಿರತರು ಭಯೋತ್ಪಾದನೆಗೆ ಕುಮ್ಮಕ್ಕು ಮತ್ತು ಹಣ ಒದಗಿಸುತ್ತಿದೆ ಎಂದು ಆರೋಪಿಸಿ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಭಯೋತ್ಪಾದನೆ ಹರಡುವಲ್ಲಿ ಪಾಕಿಸ್ತಾನ ಬಹುದೊಡ್ಡ ಪಾತ್ರ ನಿರ್ವಹಿಸುತ್ತಿದೆ ಎಂದು ಫ್ರಾನ್ಸ್ನಲ್ಲಿ ನಡೆದಿರುವ ಪ್ರತಿಭಟನೆಗೆ ಸಂಬಂಧಿಸಿದ ವಿಡಿಯೋವೊಂದನ್ನು ಪಾಕಿಸ್ತಾನ ಪತ್ರಕರ್ತ ತಾಹಾ ಸಿದ್ದೀಖಿ ತಮ್ಮ ಟ್ಟಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನಾಕಾರರು ಬ್ಯಾನರ್ಗಳನ್ನು ಹಿಡಿದು ನಿಂತಿರುವುದು ಕಂಡು ಬಂದಿದೆ. ಪಾಕಿಸ್ತಾನ ಭಯೋತ್ಪಾದನೆಗೆ ಪ್ರಚೋದಿಸುತ್ತಿದೆ ಮತ್ತು ಪಾಕಿಸ್ತಾನ ಸೇನೆಯಿಂದ ಸಾಕಷ್ಟು ಮಂದಿ ಅನ್ಯಾಯಕ್ಕೊಳಗಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಪಾಕಿಸ್ತಾನಕ್ಕೆ ಈಗಾಗಲೇ ಎಫ್ಎಟಿಎಫ್ ತನ್ನ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಸಡಿಲಿಸಿ ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಳ್ಳುವ ನಿರೀಕ್ಷೆಯಿದೆ. “ಎಫ್ಎಟಿಎರ್ಫ ಸದಸ್ಯರು ರಾಜಕೀಯವಾಗಿ ಪಾಕಿಸ್ತಾನವನ್ನು ಪರಿಗಣಿಸಲಿದೆ. ನಾವು ವಿಶ್ವಾಸಾರ್ಹವಾಗಿ ಎಲ್ಲಾ ತಾಂತ್ರಿಕ ಅಗತ್ಯಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಸಕಾರಾತ್ಮಕ ದಿಶೆಯಲ್ಲಿ ಫಲಿತಾಂಶ ಸಿಗಲಿದೆ ಎನ್ನುವ ಭರವಸೆಯಿದೆ” ಎಂದು ಪಾಕಿಸ್ತಾನ ವಕ್ತಾರ ಆಸಿಮ್ ಇಫ್ತಿಕಾರ್ ತಮ್ಮ ವಾರದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ಯಾರಿಸ್ನಲ್ಲಿ ಎಫ್ಎಟಿಎಫ್ ಪ್ಲಾನರಿ ಮತು ವರ್ಕಿಂಗ್ ಗ್ರೂಪ್ನ ಸಭೆ ಫಬ್ರವರಿ 21ರಿಂದ ಮಾರ್ಚ್ 4ವರೆಗೆ ನಡೆಯಲಿದ್ದು, ಇದಕ್ಕೂ ಮುನ್ನ ಈ ಪ್ರತಿಭಟನೆ ನಡೆದಿದೆ. ಒಂದು ವೇಳೆ ಎಫ್ಎಟಿಎಫ್ ಸಂಸ್ಥೆ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಿದರೆ, ಆ ದೇಶದ ಆಮದು, ರಫ್ತು ಮತ್ತು ಅಂತಾರಾಷ್ಟ್ರೀಯ ಸಾಲದ ಮೇಲೆ ಪರಿಣಾಮ ಬೀರಲಿದೆ ಮತ್ತು ಆರ್ಥಿಕತೆಗೆ ದೊಡ್ಡ ನಷ್ಟ ಉಂಟಾಗಲಿದೆ ಎಂದು ವರದಿಯಾಗಿದೆ.