ತಡೆ ರಹಿತ ಬಸ್ ಗಳ ಪೈಪೋಟಿ.. ಅಪಾಯದಂಚಿನಲ್ಲಿ ಸಾರ್ವಜನಿಕರು

ಪೂರಕ ಬಸ್ ನಿಲ್ದಾಣದ ಸಮಸ್ಯೆ ಅನುಭವಿಸುತ್ತಿರುವ ಪಡುಬಿದ್ರಿಯಲ್ಲಿ ತಡೆ ರಹಿತ ಬಸ್ ಗಳು ಪೈಪೋಟಿ ನಡೆಸಿಕೊಂಡು ತಾತ್ಕಾಲಿಕ ಬಸ್ ನಿಲುಗಡೆ ತಾಣ ಸರ್ವಿಸ್ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ರಾಷ್ಟ್ರೀಯ ಹೆದ್ದಾರಿ ಗೂ ಅಡ್ಡಲಾಗಿ ನಿಲ್ಲುವ ಮೂಲಕ ಸಾರ್ವಜನಿಕ ಸಮಸ್ಯೆ ಹುಟ್ಟು ಹಾಕುತ್ತಿದೆ.

ಪಡುಬಿದ್ರಿಯಲ್ಲಿ ಬಸ್ ತಂಗುದಾಣಗಳು ಶಾಸಕರಿಂದ ಉದ್ಘಾಟನೆಗೊಂಡು ಇದೀಗ ಅದು ಜಾಹಿರಾತು ಬೋರ್ಡ್ ಗಳಿಗಷ್ಟೇ ಸೀಮಿತವಾಗಿದೆ. ಕಾರಣ ಹೆದ್ದಾರಿ ಇಲಾಖೆ ಟೋಲ್ ಪಡೆಯುತ್ತಿದ್ದರೂ ಹೆದ್ದಾರಿ ಸಹಿತ ಸರ್ವಿಸ್ ರಸ್ತೆಗಳನ್ನು ಸಂಚಾರಕ್ಕೆ ಯೋಗ್ಯವಾಗಿ ಮಾಡದಿರುವುದಾಗಿದೆ. ಈ ಬಗ್ಗೆ ತಂಗುದಾಣ ಉದ್ಘಾಟನಾ ದಿನದಂದೆ ಹೆದ್ದಾರಿ ಇಲಾಖಾ ಅಧಿಕಾರಿಯೊರ್ವರನ್ನು ಕರೆದು ಅವರಿಂದ ಕೆಲ ದಿನಗಳಲ್ಲಿ ಈ ಕಾಮಗಾರಿ ಸಂಪೂರ್ಣ ಗೊಳಿಸುವ ಭರವಸೆ ಪಡೆಯಲಾಗಿದೆ. ಅದು ಶೀಘ್ರ ಪೂರ್ಣ ಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಇಂಥಹ ಅವ್ಯವಸ್ಥೆಗಳ ಮಧ್ಯೆ ಈ ತಡೆರಹಿತ ಬಸ್ಗಳ ಆರ್ಭಟ ಸಾರ್ವಜನಿಕರ ಬದುಕನ್ನು ಕಸಿದುಕೊಳ್ಳುತ್ತದೋ ಎಂದೆನಿಸುತ್ತದೆ. ಇಂಥಹ ಬಸ್ ಗಳ ವಿರುದ್ಧ ಪಡುಬಿದ್ರಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಖುವ ಮೂಲಕ ಸಾರ್ವಜನಿಕರ ಪ್ರಾಣಕ್ಕೆ ಭದ್ರತೆ ಒದಗಿಸುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಾಯ ಒತ್ತಡಗಳು ಕೇಳಿ ಬರುತ್ತಿದೆ.