ಮಂತ್ರಿ, ಶಾಸಕರಿಗೆ ವೇತನ ಹೆಚ್ಚಳ ಯಾಕೆ? : ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಪ್ರಶ್ನೆ

ಚುನಾವಣಾ ಸಂದರ್ಭದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಆದಾಯ ವನ್ನಾಗಿ ತೋರಿಸುವ ಶಾಸಕರು ಮಂತ್ರಿಗಳು ಮುಖ್ಯಮಂತ್ರಿಗಳಿಗೆ ಆದಾಯವನ್ನು ಏರಿಸುವ ಅಗತ್ಯವೇನಿತ್ತು.ಕಾರ್ಮಿಕರು ಇಂದಿಗೂ ಕನಿಷ್ಠ ಕೂಲಿಯಲ್ಲಿ ಜೀವನವನ್ನು ನಡೆಸುತ್ತಿದ್ದು ಅವರಿಗೂ ಕೂಡ ದುಪ್ಪಟ್ಟಾಗಿ ಏರಿಕೆ ಮಾಡಿ ಎಂದು ಕಾರ್ಮಿಕ ಸಂಘಟನೆಯಾದ ಇಂಟಕ್ ದ.ಕ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದ್ದಾರೆ.

ತಮ್ಮ ವೇತನ ಭತ್ಯೆಯನ್ನು ಏರಿಸುವಾಗ ಯಾವುದೇ ಶಾಸಕರು ವಿರೋಧ ಮಾಡುವ ಮನಸ್ಸು ಮಾಡಿಲ್ಲ. ಇಲ್ಲಿ ಯಾವುದೇ ರಾಜಕೀಯವನ್ನು ಶಾಸಕರುಗಳು ಮಂತ್ರಿಗಳು ಯಾಕೆ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಸಮಾಜಸೇವೆಗಾಗಿ ಇರುವ ರಾಜಕೀಯ ಇದೀಗ ವೃತ್ತಿಪರ ಉದ್ಯೋಗವನ್ನಾಗಿ ಮಾಡುವತ್ತ ರಾಜ್ಯ ಸರಕಾರ ಮುಂದಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಆಪಾದಿಸಿರುವ ಅವರು ಪೆÇಲೀಸ್ ಇಲಾಖೆ, ಶಿಕ್ಷಕರು,ಅತಿಥಿ ಉಪನ್ಯಾಸಕರು ಕಾರ್ಮಿಕ ವಲಯ ಮತ್ತಿತರ ದುಡಿಯುವ ವರ್ಗದವರನ್ನು ಕಡೆಗಣಿಸುತ್ತಿರುವ ಸರ್ಕಾರ ಅವರಿಗೆ ವೇತನ ಆಯೋಗ ನೀಡುವ ವೇತನವನ್ನು ಕೂಡಲು ಸರ್ಕಾರದಲ್ಲಿ ದುಡ್ಡಿಲ್ಲ ಎಂದು ತಳ್ಳಿ ಹಾಕಲಾಗುತ್ತಿದೆ.

ಮೊದಲು ಕೊರೊನಾದಿಂದ ಉದ್ಯೋಗ ಕಳೆದುಕೊಂಡವರಿಗೆ ಉದ್ಯಮದಲ್ಲಿ ನಷ್ಟ ಹೊಂದಿರುವವರಿಗೆ ಬಡಜನತೆಗೆ ಮೊದಲು ನೆರವಾಗಬೇಕು ಕರ್ನಾಟಕದ ರಾಜ್ಯಪಾಲರು ಮದ್ಯ ಪ್ರವೇಶಿಸಿ ಈ ವೇತನ ಹೆಚ್ಚಳ ವನ್ನು ತಡೆ ಹಿಡಿಯಲು ಸರಕಾರಕ್ಕೆ ಸೂಚಿಸಬೇಕು.ನಮ್ಮ ಸಮಾನ ಮನಸ್ಕ ಕಾರ್ಮಿಕ ಸಂಘಟನೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published.

How Can We Help You?