ಉಕ್ರೇನ್ ಮೇಲೆ ಯುದ್ದ ಘೋಷಿಸಿದ ರಷ್ಯಾ: ಭಾರತ ಮತ್ತು ರಷ್ಯಾ ಸಂಬಂಧಗಳು ಮುಂದುವರೆಯುತ್ತವೆ!

ಉಕ್ರೇನ್ ವಿರುದ್ದ ಯುದ್ದ ಮಾಡುವುದಾಗಿ ರಷ್ಯಾ ಘೋಷಿಸಿದೆ. ರಷ್ಯಾ-ಉಕ್ಕೇನ್ ಬಿಕ್ಕಟ್ಟು ಆರಂಭವಾಗುತ್ತಿದ್ದಂತೆಯೇ ಯುಎಸ್, ಯುರೋಪಿಯನ್ ಯೂನಿಯನ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳು ರಷ್ಯಾದ ಮೇಲೆ ವ್ಯಾಪಾರ-ವಹಿವಾಟಿನ ನಿರ್ಬಂಧಗಳನ್ನು ವಿಧಿಸುವುದಾಗಿ ಹೇಳಿದ್ದವ. ಇದೆಲ್ಲರ ನಡುವೇಯೂ ರಷ್ಯಾ ಮತ್ತು ಭಾರತದ ನಡುವಿನ ಪಾಲುದಾರಿಕೆ ಸಂಬಂಧ ಮುಂದುವರಿಯುತ್ತದೆ ಎಂದು ರಷ್ಯಾದ ರಾಯಭಾರಿ ಕಚೇರಿಯ ಉಸ್ತುವಾರಿ ರೋಮನ್ ಬಾಬುಶ್ಕಿನ್ ಹೇಳಿದ್ದಾರೆ.
ಇಂದು ಬೆಳಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ ವಿರುಯದ್ದ ಯುದ್ದ ಘೋಷಿಸಿದ ಬೆನ್ನಲ್ಲೇ ಉಕ್ರೇನ್‌ನ ಹಲವು ಭಾಗಗಲ್ಲಿ ಸ್ಪೋಟಗಳ ಸದ್ದು ಕೇಳಿಸಿದೆ. ಈಗಾಗಲೇ ಉಕ್ರೇನ್‌ನಲ್ಲಿ 07 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದು ಯುದ್ದ ಆರಂಭವಾಗಿದೆ ಎಂದು ಸೂಚಿಸುತ್ತಿದೆ.

“ರಾಷ್ಯಾ ಮತ್ತು ಭಾರತವು ಪರಸ್ಪರ ದೊಡ್ಡ ಯೋಜನೆಗಳನ್ನು ಹೊಂದಿದ್ದೇವೆ. ನಮ್ಮ ಪಾಲುದಾರಿಕೆಯು ಈಗ ಯಾವ ಮಟ್ಟದ್ದಲ್ಲಿದೆಯೋ, ಮುಂದೆಯೂ ಹಾಗೆಯೇ ಇರುತ್ತದೆ ಎಂದು ನಾವು ಭಾವಿಸುತ್ತೇವೆ. ಉಕ್ರೇನ್ ಜೊತೆಗಿನ ಬಿಕ್ಕಟ್ಟು ರಕ್ಷಣಾ ಕ್ಷೇತ್ರಗಳನ್ನು ಒಳಗೊಂಡಂತೆ ಭಾರತ-ರಷ್ಯಾ ಸಂಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ. ಮುಂದಿನ ತಿಂಗಳು ಗುಜರಾತ್ನಲ್ಲಿ ನಡೆಯಲಿರುವ ಡೆಫ್ ಎಕ್ಸ್ಪೋದಲ್ಲಿ ರಷ್ಯಾದ ಭಾಗವಹಿಸುತ್ತದೆ” ಎಂದು ಹೇಳಿದ್ದಾರೆ.

ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಾರತವು ತಟಸ್ಥ ನಿಲುವನ್ನು ಹೊಂದಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ಪಾಶ್ಚಿಮಾತ್ಯ ನಿರ್ಬಂಧಗಳು S-400 ಕ್ಷಿಪಣಿ ವ್ಯವಸ್ಥೆಗಳ ಪೂರೈಕೆ ಸೇರಿದಂತೆ ಭಾರತ-ರಷ್ಯಾ ರಕ್ಷಣಾ ಸಹಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಎಲ್ಲಾ ಯೋಜನೆಗಳು ಮುಂದುವರೆಯುತ್ತವೆ ಎಂದು ಅವರು ಹೇಳಿದ್ದಾರೆ.

. “ನಾವು ಭಾರತದೊಂದಿಗೆ ಅತ್ಯಂತ ಬಲವಾದ ಮತ್ತು ವಿಶ್ವಾಸಾರ್ಹ ಸಹಕಾರವನ್ನು ಹೊಂದಿದ್ದೇವೆ. ಪಾಶ್ಚಿಮಾತ್ಯ ನಿರ್ಬಂಧಗಳು ರಷ್ಯಾದ ಆರ್ಥಿಕತೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ ಮತ್ತು ಇಂತಹ ದಂಡನಾತ್ಮಕ ಕ್ರಮಗಳು ಜಾಗತಿಕ ಆರ್ಥಿಕತೆಯಲ್ಲಿ ಅಸ್ಥಿರತೆಯನ್ನು ಸೃಷ್ಟಿಸುತ್ತವೆ” ಎಂದು ಅವರು ಹೇಳಿದ್ದಾರೆ.

ಭಾರತವು ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಭಾರತವು ವಿಶ್ವ ವ್ಯವಹಾರಗಳಿಗೆ “ಸ್ವತಂತ್ರ ಮತ್ತು ಸಮತೋಲಿತರ” ನಿರ್ಧಾರಗಳನ್ನು ತೆಗೆದುಕೊಳ್ಳತ್ತದೆ ಎಂದು ಬಾಬುಶ್ಕಿನ್ ಹೇಳಿದ್ದಾರೆ.

ಪಾಶ್ಚಿಮಾತ್ಯ ಶಕ್ತಿಗಳು ಉಕ್ರೇನ್ಅನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ. “ನ್ಯಾಟೋ ಈ ಅಸ್ಥಿರತೆಯ ಮೂಲವಾಗಿದೆ. ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಹೆಚ್ಚಿನ ಒತ್ತಡವನ್ನು ಬೀರಲು ಪ್ರಯತ್ನಿಸುತ್ತಿವೆ” ಎಂದು ಅವರು ಆರೋಪಿಸಿದ್ದಾರೆ.

ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಖಂಡಿಸಿದ್ದು, ಯುದ್ದಿವು ದುರಂತಮಯ ಜೀವಹಾನಿ ಮತ್ತು ಸಂಕಟವನ್ನು ತರುತ್ತದೆ ಎಂದು ಹೇಳಿದ್ದಾರೆ.

ಉಕ್ರೇನ್‌ ವಿರುದ್ದ ರಷ್ಯಾ ಯುದ್ದ ಘೋಷಿಸುತ್ತಿದ್ದಂತೆಯೇ ಉಕ್ರೇನ್ನಲ್ಲಿರುವ ಭಾರತೀಯರನ್ನು ಕರೆತರಲು ಭಾರತದ ಸರ್ಕಾರ ಉಕ್ರೇನ್‌ಗೆ ಏರ್‍‌ ಇಂಡಿಯಾ ವಿಮಾನವನ್ನು ಕಳಿಸಿತ್ತು. ಆದರೆ, ಉಕ್ರೇನ್‌ನ ವಾಯು ಪ್ರವೇಶವನ್ನು ಮುಚ್ಚಲಾಗಿರುವುದಿಂದ ವಿಮಾನ ಖಾಲಿಯಾಗಿಯೇ ಭಾರತಕ್ಕೆ ಹಿಂದಿರುಗಿದೆ.

Related Posts

Leave a Reply

Your email address will not be published.

How Can We Help You?