‘ಏಕ್ ಲವ್ ಯಾ’ ಸಿನಿಮಾ ರಿಲೀಸ್; ಪ್ರೇಕ್ಷಕರ ಮೆಚ್ಚುಗೆ!

ಜೋಗಿ ಪ್ರೇಮ್ ನಿರ್ದೇಶನ ರೋಮ್ಯಾಂಟಿಕ್ ಸಿನಿಮಾ ‘ಏಕ್ ಲವ್ ಯಾ’ ಚಿತ್ರ ಫೆಬ್ರವರಿ 24ರ ಗುರುವಾರ ರಾಜ್ಯಾದಂತ ಬಿಡುಗಡೆಯಾಗಿದೆ. ಈ ಸಿನಿಮಾದ ಮೂಲಕ ನಿರ್ಮಾಪಕಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ, ನಟಿ ರೇಷ್ಮಾ ನಾಣಯ್ಯ ಮತ್ತು ಇನ್ನೂ ಇಬ್ಬರು ಹೊಸ ಕಲಾವಿದರು ಚಂದನವನಕ್ಕೆ ಕಾಲಿಟ್ಟಿದ್ದಾರೆ.
ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ನಟಿ ರಚಿತಾ ರಾಮ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ನಿರ್ದೇಶಕ ಜೋಗಿ ಪ್ರೇಮ್ ಅವರ ಪ್ರತಿಯೊಂದು ಸಿನಿಮಾಗಳೂ ಹಾಡುಗಳಿಂದಲೇ ದೊಡ್ಡ ಹಿಟ್ ಪಡೆಯುತ್ತಿದ್ದು, ಈ ಸಿನಿಮಾ ಕೂಡ ಆ ಪಟ್ಟಿಗೆ ಸೇರಿದೆ. ಏಕ್ ಲವ್ ಯಾ ಸಿನಿಮಾದಲ್ಲಿ 7 ಹಾಡುಗಳಿದ್ದು, ಎಲ್ಲಾ ಹಾಡುಗಳಿಗೂ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಎಲ್ಲಾ ಹಾಡುಗಳು ಸಿನಿ ಪ್ರೇಕ್ಷಕರ ಮನ ಗೆದ್ದಿವೆ.

“ಏಕ್ ಲವ್ ಯಾ ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ವಿಭಿನ್ನವಾಗಿದೆ ಮತ್ತು ಸವಾಲು ಒಡ್ಡುವಂಥಿದೆ. ಸಿನಿಮಾವನ್ನು ಪ್ರೇಕ್ಷಕರು ಮೆಚ್ಚುತ್ತಿದ್ದಾರೆ” ಎಂದು ನಟಿ ರಚಿತಾ ರಾಮ್ ಹೇಳಿದ್ದಾರೆ.

ಏಕ್ ಲವ್ ಯಾ ಸಿನಿಮಾ ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಅಲ್ಲದೆ, ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿಯೂ ತೆರೆ ಕಾಣಲು ಸಿದ್ದವಾಗಿದೆ. ಮುಂದಿನ ವಾರದಿಂದ ಎಲ್ಲಾ ಭಾಷೆಗಳಲ್ಲಿಯೂ ಸಿನಿಮಾ ತೆರೆಕಾಣಲಿದೆ.

‘ಏಕ್ ಲವ್ ಯಾ’ ಸಿನಿಮಾ ಆಸ್ಟ್ರೇಲಿಯಾ, ಕೆನಡಾ, ಅಮೆರಿಕ ದೇಶಗಳಲ್ಲೂ ಬಿಡುಗಡೆಯಾಗುತ್ತಿದೆ ಎಂದು ಈ ಚಿತ್ರದ ಪ್ರಸಿದ್ದ ಹಾಡು “ಮೀಟ್ ಮಾಡಣ-ಇಲ್ಲ ಡೇಟ್ ಮಾಡಣ” ಹಾಡಿನ ಸಾಹಿತ್ಯ ಬರೆದಿರುವ ವಿಜಯ್ ಈಶ್ವರ್ ತಿಳಿಸಿದ್ಧಾರೆ.

ಸಿನಿಮಾವನ್ನು ನಿರ್ಮಾಪಕಿ ರಕ್ಷಿತಾ ಪ್ರೇಮ್ ಅವರ ‘ರಕ್ಷಿತಾ ಫಿಲ್ಮ್ ಫ್ಯಾಕ್ಟರಿ” ಚಿತ್ರ ಸಂಸ್ಥೆ ನಿರ್ಮಾಣ ಮಾಡಿದೆ.

Related Posts

Leave a Reply

Your email address will not be published.

How Can We Help You?