ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ  ಕ್ಯಾನ್ಸರ್  ಮಕ್ಕಳಿಗೆ ಆರ್ಥಿಕ  ಸಹಾಯ ಹಸ್ತ ನೀಡುತ್ತಿರುವ ಪ್ರತಿಷ್ಠಾನಗಳಿಗೆ ಸನ್ಮಾನ

ಮಣಿಪಾಲ, 26ನೇ  ಫೆಬ್ರವರಿ 2022: ಸರಿಯಾದ ಸಮಯದಲ್ಲಿ ಸರಿಯಾದ ತಂಡದಿಂದ ಸರಿಯಾದ ಚಿಕಿತ್ಸೆಯೊಂದಿಗೆ ನೀಡಿದರೆ ಬಾಲ್ಯದ ಕ್ಯಾನ್ಸರ್ ಕಾಯಿಲೆಯು  ಹೆಚ್ಚು ಗುಣಪಡಿಸಲ್ಪಡುತ್ತವೆ. ಚಿಕಿತ್ಸೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು, ಶ್ರೀ ಅರ್ಜುನ್ ಭಂಡಾರ್ಕರ್ ಸ್ಥಾಪಿಸಿದ ಸೇವ್ ಲೈಫ್ ಚಾರಿಟಬಲ್ ಟ್ರಸ್ಟ್ ಮತ್ತು ಶ್ರೀಮತಿ ಅಮಿತಾ ಪೈ ಸ್ಥಾಪಿಸಿದ ಒನ್ ಗುಡ್ ಸ್ಟೆಪ್ ಫೌಂಡೇಶನ್ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ  ಮತ್ತು ಆಂಕೊಲಾಜಿ ವಿಭಾಗಕ್ಕೆ ಬರುವ ಮಕ್ಕಳಿಗೆ ಹಣಕಾಸಿನ ನೆರವು ನೀಡಲು ಪಟ್ಟುಬಿಡದೆ ಕೆಲಸ ಮಾಡುತ್ತಿದೆ. ಅವರ ನಿಸ್ವಾರ್ಥ  ಸೇವೆ ಮತ್ತು ಪ್ರಯತ್ನಗಳನ್ನು ಶ್ಲಾಘಿಸಲು, ಫೆಬ್ರವರಿ 24, 2022 ರಂದು ಆಚರಿಸಲಾದ ಅಂತರರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ದಿನದ ಆಚರಣೆಯ ಸಂದರ್ಭದಲ್ಲಿ ಇವರಿಬ್ಬರನ್ನು  ಸನ್ಮಾನಿಸಲಾಯಿತು.

ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಭಟ್ ಕೆ ಅವರು ತಮ್ಮ ಅವಲೋಕನದಲ್ಲಿ, “ಕ್ಯಾನ್ಸರ್ ಹೊಂದಿರುವ ಮಕ್ಕಳಲ್ಲಿ ಸಮಗ್ರ ಚಿಕಿತ್ಸಾ ವಿಧಾನದೊಂದಿಗೆ ಗರಿಷ್ಠ ಯಶಸ್ಸು ಸಾಧಿಸಲು ಬಹಳಷ್ಟು ಸಮಾನ ಮನಸ್ಕರು ಒಟ್ಟಿಗೆ ಕೆಲಸ ಮಾಡಬೇಕು ಇದರಲ್ಲಿ ಸರ್ಕಾರೇತರ ಸೇವಾ ಸಂಸ್ಥೆಗಳ ಪಾಲು ದೊಡ್ಡದಿದೆ ಎಂದರು ”. ಕಾರ್ಯಕ್ರಮದ  ಮುಖ್ಯ ಅತಿಥಿಗಳಾಗಿದ್ದ  ಕೆಎಂಸಿ ಡೀನ್ ಡಾ.ಶರತ್ ಕುಮಾರ್ ರಾವ್ ಅವರು ” ಕ್ಯಾನ್ಸರ್ ಪೀಡಿತ ಮಕ್ಕಳಿಗೆ  ಸಮಗ್ರ ಚಿಕಿತ್ಸೆ ನೀಡುವ  ಕೆಲವೇ ಕೇಂದ್ರಗಳು ಭಾರತದಲ್ಲಿದ್ದು , ಅದರಲ್ಲಿ ಮಣಿಪಾಲವು ಒಂದಾಗಿದೆ” ಎಂದರು .   ಕ್ಯಾನ್ಸರ್ ಪೀಡಿತರಿಗೆ ಮತ್ತು ಅವರ ಆರೈಕೆದಾರರಿಗೆ  ಯಾವುದೇ ಶುಲ್ಕವಿಲ್ಲದೆ  ವಸತಿ ಸೌಲಭ್ಯ ನೀಡುವ ಮುಂಬರುವ ಯೋಜನೆ  ಬಗ್ಗೆ ಅವರು ಮಾತನಾಡಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ  ಡಾ.ಅವಿನಾಶ ಶೆಟ್ಟಿ ಮತ್ತು ನರ್ಸಿಂಗ್ ಸೇವೆಗಳ ಮಖ್ಯಸ್ಥರಾದ  ಡಾ.ಪಿ.ಸುಬಾ ಸೂರಿಯಾ  ಉಪಸ್ಥಿತರಿದ್ದು, ಈ ಎರಡು ಪ್ರತಿಷ್ಠಾನಗಳ ಪ್ರಯತ್ನವನ್ನು ಶ್ಲಾಘಿಸಿದರು. ಸನ್ಮಾನದ ನಂತರ ನಡೆದ  ಮನರಂಜನಾ ಕಾರ್ಯಕ್ರಮದಲ್ಲಿ  ಚಿತ್ರಕಲೆ ಸ್ಪರ್ಧೆ, ಮಕ್ಕಳು ಮತ್ತು ಅವರ ಆರೈಕೆ ಮಾಡುವವರಿಗೆ ರೀಲ್ಸ್ ಸ್ಪರ್ಧೆ ಮತ್ತು ದಾದಿಯರಿಗೆ ಪೋಸ್ಟರ್ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ  ಡಾ ಅರ್ಚನಾ ಎಂ ವಿ ಸ್ವಾಗತಿಸಿ  ಮತ್ತು ಡಾ ವಿನಯ್ ಎಂ ವಿ  ಅತಿಥಿಗಳನ್ನು ಪರಿಚಯಿಸಿದರು. ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲಾಜಿಯಲ್ಲಿ ಫೆಲೋ ಡಾ.ಚಂದನಾ ಪೈ ಕಾರ್ಯಕ್ರಮ ನಿರೂಪಿಸಿದರು. 

Jayanth Ithal
+91 97437 80016

Related Posts

Leave a Reply

Your email address will not be published.

How Can We Help You?