“ಸನ್ ಆಫ್ ಇಂಡಿಯಾ” ವಿರೋಧಿಸುವವರ ಮೇಲೆ ಕಾನೂನು ಕ್ರಮ!

ನಟ ಮತ್ತು ನಿರ್ಮಾಪಕ ಮಂಚು ವಿಷ್ಣು ಅವರ ‘ಸನ್ ಆಫ್ ಇಂಡಿಯಾ’ ಸಿನಿಮಾ ಬಗ್ಗೆ ಸಾಕಷ್ಟು ಟ್ರೋಲ್, ಮಿಮ್ ಗಳು ಹೆಚ್ಚಾಗಿವೆ. ಈ ಎಲ್ಲಾ ರೀತಿಯ ಟೀಕೆಗಳಿಂದ ಕಂಗೆಟ್ಟಿರುವ ಹಿರಿಯ ನಟ ಮೋಹನ್ ಬಾಬು ಕುಟುಂಬವು ತಮ್ಮ ಸಿನಿಮಾ ವಿರುದ್ದ ಟ್ರೋಲ್ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.
ಸನ್ ಆಫ್ ಇಂಡಿಯಾ ಸಿನಿಮಾ ವಿರುದ್ದ ಸಾಮಾಜಿಕ ಮಾಧ್ಯಮದ ಟ್ರೋಲ್ ಮತ್ತು ಮಿಮ್ಗಳನ್ನು ಮಾಡುತ್ತಿರುವ ಖಾತೆಗಳು ಮತ್ತು ಯೂ ಟ್ಯಾಬ್ ಚಾನೆಲ್ ಗಳ ವಿರುದ್ದ ಹಾಗೂ ಕೆಲವು ಸ್ಟಾರ್ ನಟರ ವಿರುದ್ದ ಕಾನೂನು ಕ್ರಮಕ್ಕೆ ಕೈಗೊಳ್ಳುವುದಾಗಿ ಮೋಹನ್ ಬಾಬು ಹೇಳಿದ್ದಾರೆ.

ಈಗಾಗಲೇ ಟ್ರೋಲರ್ಗಳಿಗೆ, ಮಿಮರ್ ಗಳಿಗೆ, ಯೂ ಟ್ಯಾಬ್ ಚಾನೆಲ್ ಗಳಿಗೆ ನೋಟಿಸ್ ನೀಡಲಾಗಿದೆ. ನಟ ಮೋಹನ್ ಬಾಬು ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಲಾಗಿದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದ್ದು, ತಮ್ಮನ್ನು ಟ್ರೋಲ್ ಮಾಡುತ್ತಿರುವವರಿಂದ ಸುಮಾರು 10 ಕೋಟಿ ಪರಿಹಾರ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಟ್ರೋಲ್ ತಂಡದ ಹಿಂದೆ ಇಬ್ಬರು ಸ್ಟಾರ್ ನಟರ ಕೈವಾಡವಿದೆ ಎಂದು ಹಿರಿಯ ನಟ ಮೋಹನ್ ಬಾಬು ಮತ್ತು ಅವರ ಪುತ್ರ, ನಟ ವಿಷ್ಣು ಆರೋಪಿಸುತ್ತಿದ್ಧಾರೆ.

ಹಿರಿಯ ನಟ ಚಿರಂಜೀವಿ ಮತ್ತು ನಟ ನಾಗಾರ್ಜುನ ಇಬ್ಬರೂ ಜೊತೆಗೂಡಿ ಸುಮಾರು 50 -100 ಜನರನ್ನು ನೇಮಿಸಿಕೊಂಡು, ನಮ್ಮ ಕುಟುಂಬ ವಿರುದ್ದ ಟ್ರೋಲ್ ಮಾಡುವ ಹುನ್ನಾರವನ್ನು ಎಣೆದಿದ್ದಾರೆ. ಇತ್ತೀಚೆಗೆ ನಡೆದ ತೆಲುಗು ಚಿತ್ರರಂಗದ ಕಲಾವಿದರ ಸಂಘ (ಮಾ)ದ ಚುನಾವಣೆಯಲ್ಲಿ ಈ ಇಬ್ಬರೂ ನಟ ಪ್ರಕಾಶ್ ರಾಜ್ ಅವರನ್ನು ಬೆಂಬಲಿಸಿದ್ದರು. ಪ್ರಕಾಶ್ ರಾಜ್ ವಿರುದ್ದ ನಟ ಮಂಚು ವಿಷ್ಣು ಸ್ಪರ್ಧಿಸಿದ್ದರು. ಇದೆ ಕಾರಣದಿಂದ ತಮ್ಮನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡುತ್ತಿದ್ದಾರೆ ಎಂದು ನಟ ಮೋಹನ್ ಬಾಬು ಆರೋಪಿಸಿದ್ದಾರೆ.

ಸದ್ಯ ಮೋಹನ್ ಬಾಬು ನಟನೆಯ ‘ಸನ್ ಆಫ್ ಇಂಡಿಯಾ’ ಸಿನಿಮಾ ಭಾರಿ ದೊಡ್ಡ ಹಿನ್ನೆಡೆಯನ್ನು ಕಂಡಿದೆ. ಇದಕ್ಕೆ ಕಾರಣ ಸಿನಿಮಾ ಕಥೆ ಎಂಬುದು ವಿರ್ಮಶಕರ ಮಾತು.

ಈ ಸಿನಿಮಾವನ್ನು ಡೈಮೆಂಡ್ ರತ್ನ ಬಾಬು ಅವರು ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ನಟ ಮೋಹನ್ ಬಾಬು, ಮೊಹಮ್ಮದ್ ಅಲಿ, ತಂಟಿಕೇಲ ಭರಣಿ, ಪ್ರಜ್ಞ್ಯಾ ಜೈಸ್ವಾಲ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಆದರೆ ಸಿನಿಮಾ ಮಾತ್ರ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗುವಲ್ಲಿ ಸೋತಿದೆ.

Related Posts

Leave a Reply

Your email address will not be published.

How Can We Help You?