ಪೊಲೀಸರು ಒತ್ತಡಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು: ನ್ಯಾಯಾಧೀಶ ಜೆ.ಎನ್ ಸುಬ್ರಮಣ್ಯ

ಉಡುಪಿಪೊಲೀಸರು ಕರ್ತವ್ಯ ನಿರ್ವಹಣೆ ಸಮಯದಲ್ಲಿ, ಯಾವುದೇ ಮಾನಸಿಕ ಮತ್ತು ದೈಹಿಕ ಒತ್ತಡಗಳಿಗೆ ಒಳಗಾಗದ ಕಾರ್ಯ ನಿರ್ವಹಿಸಬೇಕು, ಇದಕ್ಕಾಗಿ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಜಿಲ್ಲಾ, ಮತ್ತು ಸತ್ರ ನ್ಯಾಯಾಧೀಶ ಜೆ.ಎನ್ ಸುಬ್ರಮಣ್ಯ ಹೇಳಿದರು.

ಅವರು ಇಂದು ಉಡುಪಿಯ ಚಂದು ಮೈದಾನದಲ್ಲಿ ಉಡುಪಿ ಪೊಲೀಸ್ ತರಬೇತಿ ಶಾಲೆಯ 13 ನೇ ತಂಡದ ಸಶಸ್ತ್ರ ಪೊಲೀಸ್ ಕಾನೆ-ಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

udupi

ಪೊಲೀಸರು ಯಾವುದೇ ಒತ್ತಡ ಪ್ರಲೋಭನೆಗಳಿಗೆ ಒಳಗಾಗದೇ ಸಂಯಮದಿಸಿದ ಕಾನೂನಿನಡಿಯಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುವಂತೆ ಹೇಳಿದ ಜಿಲ್ಲಾ ನ್ಯಾಯಾಧೀಶರು, ಸೇವಾವಧಿಯಲ್ಲಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ, ಉನ್ನತ ಗುರಿ ಇಟ್ಟುಕೊಂಡು ಪರಿಶ್ರಮದಿಂದ ಕಾರ್ಯನಿರ್ವಹಿಸಿ, ಬಿಡುವಿನ ವೇಳೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಪ್ರಯತ್ನಿಸುವಂತೆ ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಉಡುಪಿ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದ 13 ನೇ ತಂಡದಲ್ಲಿ 100 ಪ್ರಶಿಕ್ಷಣಾರ್ಥಿಗಳಿದ್ದು, ಅದರಲ್ಲಿ ಎಸ್.ಎಸ್.ಎಲ್.ಸಿ 4, ಪಿಯುಸಿ 20, ಡಿಪ್ಲೋಮ1, ಪದವೀಧರರು 49, ಸ್ನಾತಕ ಪದವೀಧರರು 8 ಮತ್ತು 18 ಮಂದಿ ಎಂಜಿನಿಯರಿಂಗ್ ವಿದ್ಯಾರ್ಹತ ಪಡೆದಿದ್ದು, ಇದರ 11 ಮಂದಿ ಮಾಜಿ ಸೈನಿಕರು ಇದ್ದಾರೆ,

ತರಬೇತಿ ಅವಧಿಯಲ್ಲಿ ಹೊರಾಂಗಣ, ಗುರಿ ಅಭಾಸ ಒಳಾಂಗಣ ತರಬೇತಿಯಲ್ಲಿ ಉತ್ತಮ ಸಾಧನೆ ತೋರಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು, ಆಕಾಶ ಎನ್.ಎಸ್, ಡಿ.ಎ.ಆರ್. ಮಂಡ್ಯ ಜಿಲ್ಲೆ, ಅವರು ಆಲ್‍ರೌಂಡರ್ ಪ್ರಶಸ್ತಿ ಪಡೆದರು, “

ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪರೇಡ್ ನಡೆಯಿತು, ನಂತರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ಉಡುಪಿಯಲ್ಲಿ ಇದುವರೆಗೆ ನಡೆದ ತರಬೇತಿಯಲ್ಲಿ, 6 ಸಶಸ್ತ್ರ ಮೀಸಲು, 5 ಸಿವಿಲ್ 1 ಮತ್ತು 1 ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ತಂಡಗಳ ಒಟ್ಟು 1218 ಮಂದಿಗೆ ತರಬೇತಿ ನೀಡಲಾಗಿದೆ.

Jayanth Ithal
+91 97437 80016

Related Posts

Leave a Reply

Your email address will not be published.

How Can We Help You?