ಆಸ್ಕರ್ನ ಎಂಟು ಪ್ರಶಸ್ತಿಗಳ ಲೈವ್ ಪ್ರಸಾರವಿಲ್ಲ, ವಿಜೇತರ ಭಾಷಣಕ್ಕೆ ಮಾತ್ರ ಅವಕಾಶ

94ನೇ ಆಸ್ಕರ್ – 2022 ಲೈವ್ ಪ್ರಸಾರದಲ್ಲಿ ಮಾಡಿರುವ ಕೆಲವು ಪ್ರಯೋಗಗಳು ವಿಶ್ವಾದ್ಯಂತ ಚರ್ಚೆಯಾಗುತ್ತಿದೆ.
ಕಾರ್ಯಕ್ರಮದ ಕೆಲವರ್ಗಗಳಾದ ಕಿರು ಸಾಕ್ಷ್ಯಚಿತ್ರ , ಪ್ರೊಡಕ್ಷನ್ ಡಿಸೈನ್, ಚಿತ್ರ ಸಂಕಲನ, ಲೈವ್ ಆಕ್ಷನ್ ಶಾರ್ಟ್, ಒರಿಜಿನಲ್ ಸ್ಕೊರ್, ಅನಿಮೆಟೆಡ್ ಶಾರ್ಟ್, ಸೌಂಡ್, ಮೇಕಪ್, ಕೇಶವಿನ್ಯಾಸ, ಸಂಗೀತ ಮತ್ತು 3 ಕಿರುಚಿತ್ರಗಳಿಗೆ ನೀಡುವ ಪ್ರಶಸ್ತಿಯನ್ನು ನೇರ ಪ್ರಸಾರ ಮಾಡದಿರಲು ತೀರ್ಮಾನಿಸಲಾಗಿದೆ. ಪ್ರಶಸ್ತಿ ವಿಜೇತರ ಗೆಲುವಿನ ಭಾಷಣಕ್ಕೆ ಮಾತ್ರ ನೇರ ಪ್ರಸಾರದ ವೇಳೆ ಅವಕಾಶವಿರುತ್ತದೆ ಎಂದು ಆಕಾಡೆಮಿ ಅಧ್ಯಕ್ಷ ಡೇವಿಡ್ ರುಬಿನ್ ಹೇಳಿದ್ದಾರೆ. ಕಳೆದ ವರ್ಷದ ಆಸ್ಕರ್ ಸಮಾರಂಭದ ನೇರ ಪ್ರಸಾರದ ರೇಟಿಂಗ್ಸ್ ಕುಸಿದಿರುವುದಕ್ಕೆ ಈ ಬದಲಾವಣೆ ಮಾಡಲಾಗಿದೆ.
ಈ ಬಾರಿ 3 ಮಂದಿ ನಿರೂಪಕರಾದ ವಂಡಾ ಸೈಕ್ಸ್, ಆಮಿ ಶುಮರ್ ಮತ್ತು ರೆಜಿನಾ ಹಾಲ್ ಸಮಾರಂಭದ ನಿರೂಪಣೆ ಮಾಡಲಿದ್ಧಾರೆ ಎಂದು ಆಸ್ಕರ್ ಸಂಸ್ಥೆ ತಿಳಿಸಿದೆ. ಇದರಿಂದ ಆಸ್ಕರ್ ಪ್ರಶಸ್ತಿ ವೀಕ್ಷಿಸುವವರಿಗೂ ಸಂತೋಷವಾಗುವ ನಿರೀಕ್ಷೆಯಿದೆ.
“ಚಲನಚಿತ್ರ ಸಮುದಾಯ, ನಮ್ಮ ನೆಟ್ವರ್ಕ್ ಸಹಭಾಗಿಗಳು ಮತ್ತು ಆಸ್ಕರ್ ಪ್ರೀತಿಸುವ ಎಲ್ಲರಿಂದಲೂ ಬಂದಿರುವ ಅಭಿಪ್ರಾಯಗಳ ನಂತರ ಭವಿಷ್ಯದ ನಮ್ಮ ಕಾರ್ಯಕ್ರಮ ಮತ್ತು ಸಂಸ್ಥೆಯ ಹಿತಾಸಕ್ತಿ ಗಮನಿಸಿ ನಾವು ನೇರಪ್ರಸಾರಕ್ಕೆ ಸಂಬಂಧಿಸಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ಡೇವಿಡ್ ರೂಬಿನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.