ಶ್ರೀದೇವಿ ದ್ವಿತೀಯ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ

ನಟಿ ಶ್ರೀದೇವಿ ಅವರ ದ್ವಿತೀಯ ಪುತ್ರಿ ಖುಷಿ ಕಪೂರ್ ತಮ್ಮ ಮೊದಲ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಶೂಟಿಂಗ್ ಏಪ್ರಿಲ್‌ನಿಂದ ಶುರುವಾಗಲಿದೆ ಎಂದು ಖುಷಿ ತಂದೆ ಹಾಗೂ ನಿರ್ಮಾಪಕ ಬೋನಿ ಕಪೂರ್ ತಿಳಿಸಿದ್ದಾರೆ.

ಈಗಾಗಲೇ ಖುಷಿ ಝೋಯಾ ಅಕ್ತರ್ ಅವರ ಹಾಸ್ಯ ಶೋ ಒಂದರಲ್ಲಿ ಪಾಲ್ಗೊಂಡಿದ್ದರು. ಶಾರುಖ್ ಮಕ್ಕಳಾದ ಸುಹಾನಾ ಖಾನ್, ಆರ್ಯನ್ ಖಾನ್ ಮತ್ತು ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯನಂದ ಅವರೂ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಹರಡಿದೆ.

ಖುಷಿ ಕಪೂರ್ ವಿದೇಶದಲ್ಲಿ ನಟನೆಗೆ ಸಂಬಂಧಿಸಿದ ಕೋರ್ಸ್ ಅನ್ನು ಮುಗಿಸಿದ್ದಾರೆ. ಅವರ ಸಹೋದರಿ ಜಾಹ್ನವಿ ಕಪೂರ್ ಈಗಾಗಲೇ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. “ಇತರ ಮಕ್ಕಳಾದ ಅರ್ಜುನ್ ಕಪೂರ್ ಮತ್ತು ಜಾಹ್ನವಿಗೆ ಚಿತ್ರರಂಗದಲ್ಲಿ ಕಾಲಿಡಲು ನೆರವಾದಂತೆ, ಖುಷಿ ಕಪೂರ್‌ಗೂ ನೆರವಾಗಲಿದ್ದೇನೆ” ಎಂದು ಬೋನಿ ಕಪೂರ್ ಹೇಳಿದ್ಧಾರೆ.

ಖುಷಿ ನಟನೆಯ ಸಿನಿಮಾದ ಶೀರ್ಷಿಕೆಯನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ

Related Posts

Leave a Reply

Your email address will not be published.

How Can We Help You?