ತಾ.ಪಂ.ಮಾಜಿ ಸದಸ್ಯ ಪುರುಷೋತ್ತಮ ಗಟ್ಟಿ ನಿಧನ

ಬಂಟ್ವಾಳ ತಾಲೂಕು ಪಂಚಾಯತ್ನ ಮಾಜಿ ಸದಸ್ಯ ಹಾಗೂ ಸಜಿಪ ಮುನ್ನೂರು ಮಂಡಲ ಪಂಚಾಯತ್ನ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಮಾರ್ನಬೈಲು ಎಂ.ಪುರುಷೋತ್ತಮ ಗಟ್ಟಿ (60) ಅವರು ಫೆ.25ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ತಾಯಿ,ಪತ್ನಿ, ಸಹೋದರ, ಸಹೋದರಿಯರನ್ನು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.ಪುರುಷೋತ್ತಮ ಗಟ್ಟಿ ಅವರು ಸ್ಥಳೀಯ ಮಾರ್ನಬೈಲ್ ಕರಾವಳಿ ಫ್ರೆಂಡ್ಸ್ ಸರ್ಕಲ್ನ ಸ್ಠಾಪಕಾಧ್ಯಕ್ಷರಾಗಿ, ಮಾರನ ಗುಳಿಗ ಸೇವಾ ಸಮಿತಿ ಹಾಗೂ ಸಜಿಪಮುನ್ನೂರು ಯುವಕ ಸಂಘದಲ್ಲಿ ಸಕ್ರಿಯರಾಗಿದ್ದರು. ಸಾಮಾಜಿಕ ಕಾರ್ಯಕರ್ತ, ಉದ್ಯಮಿಯಾಗಿ ಹೆಸರು ಗಳಿಸಿದ್ದ ಅವರು ಮಾರ್ನಬೈಲಿನಲ್ಲಿ ವಿಘ್ನೇಶ್ವರ ಅಕಿ ್ಕಗಿರಣಿ, ಮೆಲ್ಕಾರಿನಲ್ಲಿ ಗಣೇಶ್ ಟಂಬರ್ಸ್ ಉಧ್ಯಮ ಹೊಂದಿದ್ದರು. ಗಟ್ಟಿ ಸಮಾಜದ ಮೊನೆಪು ಕೈಯರಣ್ಣಾಯ ಕುಟುಂಬ ಟ್ರಸ್ಟ್ನ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಮೃತರ ಮನೆಗೆ ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತುಂಬೆ ಚಂದ್ರ ಪ್ರಕಾಶ್ ಶೆಟ್ಟಿ, ಆರ್.ಎಸ್.ಎಸ್ ಮುಂದಾಳು ಡಾ| ಪ್ರಭಾಕರ ಭಟ್ ಕಲ್ಲಡ್ಕ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.