ಶೋಷಣಾಮುಕ್ತ ಸಮಾಜ ನಿರ್ಮಾಣದ ಕನಸು ಕಂಡಿದ್ದ ಚಂದ್ರಶೇಖರ ಆಜಾದ್ – ಡಾ.ವಸಂತ ಕುಮಾರ್

ಸ್ವಾತಂತ್ರ್ಯ ಚಳುವಳಿಯಲ್ಲಿ ಧ್ರುವತಾರೆಯಾಗಿ ಮಿನುಗಿದ ಅಪ್ರತಿಮ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ರವರು ಎಳೆಯ ಪ್ರಾಯದಲ್ಲೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬ್ರಿಟಿಷರಿಂದ ಛಡಿಯೇಟು ತಿಂದವರು.ಮಾತ್ರವಲ್ಲದೆ ಬ್ರಿಟಿಷರಿಗೆ ಸದಾ ಸಿಂಹಸ್ವಪ್ನರಾಗಿ ಕಾಡಿದ ಚಂದ್ರಶೇಖರ ಅಜಾದ್ ರವರ ಕ್ರಾಂತಿಕಾರಿ ಚಟುವಟಿಕೆಗಳು ಸ್ವಾತಂತ್ರ್ಯ ಚಳುವಳಿಗೆ ಅಪಾರ ಕೊಡಗೆ ನೀಡಿದೆ.ಪ್ರತಿಯೊಬ್ಬರ ಬದುಕಿನ ಬಗ್ಗೆ ಸದಾ ಚಿಂತಿಸುತ್ತಿದ್ದ ಅಜಾದ್ ರವರು ಶೋಷಣಾಮುಕ್ತ ಸಮಾಜದ ಕನಸು ಕಂಡಿದ್ದರು ಎಂದು ಕುದ್ರೋಳಿ ನಾರಾಯಣಗುರು ಪ್ರಥಮ ದರ್ಜೆ ಕಾಲೇಜ್ ನ‌ ಪ್ರಾಂಶುಪಾಲರಾದ ಡಾ.ವಸಂತ ಕುಮಾರ್ ರವರು ಅಭಿಪ್ರಾಯಪಟ್ಟರು.

ಸಮಾನ ಮನಸ್ಕರು, ಮಂಗಳೂರು ಇದರ ಆಶ್ರಯದಲ್ಲಿ ನಗರದ ವಿಕಾಸ ಕಚೇರಿಯಲ್ಲಿ ಜರುಗಿದ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ರವರ 91ನೇ ಹುತಾತ್ಮ ದಿನಾಚರಣೆಯ ಅಂಗವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ರಾಂತಿಕಾರಿಗಳ ಪಾತ್ರ ಎಂಬ ವಿಷಯದ ಬಗ್ಗೆ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ,ಈ ಮಾತುಗಳನ್ನು ಹೇಳಿದರು .

ಸಭೆಯ ಅಧ್ಯಕ್ಷತೆ ವಹಿಸಿದ DYFI ದ.ಕ.ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಮಾತನಾಡುತ್ತಾ, ಚಂದ್ರಶೇಖರ ಆಜಾದ್ ರವರ ತತ್ವಾದರ್ಶಗಳನ್ನು ಇಂದಿನ ಯುವಪೀಳಿಗೆ ಮೈಗೂಡಿಸಿಕೊಂಡು ನವಸಮಾಜದ ನಿರ್ಮಾಣದತ್ತ ದಾಪುಗಾಲನ್ನು ಇಡಬೇಕಾಗಿದೆ. ಆಜಾದ್ ಬದುಕಿದ್ದು ಕೇವಲ 24 ವರ್ಷ, ಆದರೆ ಹುತಾತ್ಮರಾಗಿ 91 ಕಳೆದರೂ ಇಂದಿಗೂ ಜನಮಾನಸದಲ್ಲಿ ಅಜರಾಮರವಾಗಿ ನೆಲೆಯೂರಿದ್ದಾರೆ ಎಂದು ಹೇಳಿದರು.

ಪ್ರಾರಂಭದಲ್ಲಿ ಸುನಿಲ್ ಕುಮಾರ್ ಬಜಾಲ್ ರವರು ಸ್ವಾಗತಿಸಿದರೆ, ಕೊನೆಯಲ್ಲಿ ಸುನಿಲ್ ತೇವುಲರವರು ವಂದಿಸಿದರು.

Related Posts

Leave a Reply

Your email address will not be published.

How Can We Help You?