ಸಂತಕಟ್ಟೆಯಲ್ಲಿ ಭೀಕರ ಅಫಘಾತ : ಪೊಲೀಸ್ ಅಧಿಕಾರಿ ಹಾಗೂ ಮಗಳು ಸಾವು

ಉಡುಪಿ: ಸಂತಕಟ್ಟೆ ಬಳಿ ರಸ್ತೆ ದಾಟುತ್ತಿದ್ದ ಮೊಪೈಡ್ ವಾಹನಕ್ಕೆ‌ ಕೇರಳ ಟ್ರಾನ್ಸ್ ಪೋರ್ಟ್ ವೋಲ್ವೋ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೊಪೈಡ್ ನಲ್ಲಿದ್ದ  ಪೊಲೀಸ್ ಅಧಿಕಾರಿ ಹಾಗೂ ಅವರ ಮಗಳು  ಸಾವನ್ನಾಪ್ಪಿರುವ ಘಟನೆ ಇಂದು ಮುಂಜಾನೆ 4.30 ಸುಮಾರಿಗೆ ನಡೆದಿದೆ.

ಗರಡಿ ಮಜಲು ಮೂಲದ  ಕರಾವಳಿ ಕಾವಲು ಪಡೆಯಲ್ಲಿ  ಎ ಎಸ್ ಐ ಕಾರ್ಯನಿರ್ವಹಿಸುತ್ತಿರುವ  ಗಣೇಶ್ ಪೈ(59)  ಹಾಗೂ ಅವರ ಮಗಳು ಗಾಯತ್ರಿ (27) ಎನ್ನುವವರೇ  ಸಾವನ್ನಾಪ್ಪಿರುವ ದುರ್ದೈವಿಗಳಾಗಿದ್ದಾರೆ.

ಹುಬ್ಬಳಿಯಿಂದ ಬಸ್ಸಿನಲ್ಲಿ ಅಗಮಿಸಿದ್ದ  ಮಗಳು ಗಾಯತ್ರಿ ಯನ್ನು  ಮನೆಗೆ ಕರೆದುಕೊಂಡು ಹೋಗಲು  ಗಣೇಶ್ ಪೈ ಸಂತಕಟ್ಟೆಗೆ ಅಗಮಿಸಿದ್ದರು.
ಬಸ್ಸಿನಿಂದ ಇಳಿದ ಮಗಳನ್ನ ತಮ್ಮ ಮೊಪೈಡ್ ವಾಹನದಲ್ಲಿ ಕುಳ್ಳಿರಿಸಿ ಹೆದ್ದಾರಿ ದಾಟಲು ಪ್ರಯತ್ನಸುವಾಗಲೇ ಕೇರಳದಿಂದ  ಕೊಲ್ಲೂರಿಗೆ ತೆರಳುತ್ತಿದ್ದ ವೊಲ್ವೋ ಬಸ್ ಡಿಕ್ಕಿ‌ ಹೊಡೆದಿದೆ.ಡಿಕ್ಕಿ ರಭಸಕ್ಕೆ ನೆಲಕ್ಕೆ ಬಿದ್ದ ಗಾಯತ್ರಿ  ಸ್ಥಳದಲ್ಲೇ ಸಾವನ್ನಾಪ್ಪಿದರೆ,ಗಣೇಶ್ ಪೈ ಅಸ್ಪತ್ರೆಯಲ್ಲಿ ಸಾವನ್ನಾಪ್ಪಿದ್ದಾರೆ‌ ಎಂದು ತಿಳಿದು ಬಂದಿದೆ.

59 ವರುಷದ ಗಣೇಶ್ ಪೈ ಇನ್ನೊಂದು ವರುಷದಲ್ಲಿ ನಿವೃತ್ತಿ ಹೊಂದಲಿದ್ದರು.ಗಣೇಶ್ ಪೈ ಅಗಲಿಕೆಗೆ ಉಡುಪಿ ಪೊಲೀಸ್ ಇಲಾಖೆ ಸಂತಾಪ ವ್ಯಕ್ತಪಡಿಸಿದೆ.

ಸ್ಥಳಕ್ಕೆ ಉಡುಪಿ ನಗರ  ಟ್ರಾಫಿಕ್ ಪೊಲೀಸ್ ರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Related Posts

Leave a Reply

Your email address will not be published.

How Can We Help You?