ಶ್ರೀನಿವಾಸ ವಿಶ್ವವಿದ್ಯಾನಿಲಯ ಶಿಕ್ಷಣ ಮಹಾವಿದ್ಯಾಲಯದಲ್ಲಿಅಂತರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆ

ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 21/02/2022ರಂದು ಅಂತರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆಯನ್ನುವಿಜೃಂಭಣೆಯಿಂದಆಚರಿಸಲಾಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಡಾ. ಬಿ. ದೇವದಾಸ ಪೈ ಸಂಶೋಧನಾಉಪನ್ಯಾಸಕರು ಶ್ರೀನಿವಾಸ ವಿಶ್ವವಿದ್ಯಾನಿಲಯಇವರು“ಬಹುಭಾಷಾ ಕಲಿಕೆಗಾಗಿ ತಂತ್ರಜ್ಞಾನವನ್ನು ಬಳಸುವಲ್ಲಿನ ಸವಾಲುಗಳು ಮತ್ತು ಅವಕಾಶಗಳು” ಎಂಬ ವಿಷಯದ ಬಗ್ಗೆ ತಮ್ಮಚಿಂತನೆಯನ್ನು ಕೂಲಂಕುಷವಾಗಿ ಪ್ರಸ್ತಾಪಿಸಿದರು.ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದಂತ ಶ್ರೀನಿವಾಸ ಶಿಕ್ಷಣ ಮಹಾವಿದ್ಯಾಲಯದ ಮುಖ್ಯಸ್ಥೆಯಾದಡಾ.ಜಯಶ್ರೀ ಬೋಳಾರ್ ರವರು ಮಾತೃಭಾಷೆಯ ಪ್ರಾಮುಖ್ಯತೆ ಮತ್ತು ಮಾತೃಭಾಷೆಅಲ್ಲದೆ ವ್ಯವಹಾರಿಕ ಭಾಷೆಯಲ್ಲೂ ಪ್ರಭುತ್ವವನ್ನು ಸಾಧಿಸುವುದು ಇಂದಿನ ಪ್ರಮುಖ ಕಾಳಜಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿಕಾರ್ಯಕ್ರಮದ ಸಂಯೋಜಕಿಯಾದ ಹಾಗೂ ಸಹ ಪ್ರಾಧ್ಯಾಪಕರಾದ ಶ್ರೀಮತಿ ರೇಶ್ಮಾ ಎಂ.ವೈ ರವರುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅತಿಥಿಗಳನ್ನು ಸ್ವಾಗತಿಸಿದರು.ಬಿ.ಎಡ್ ನ ಪ್ರಥಮ ಮತ್ತು ದ್ವಿತೀಯ ವರ್ಷದ ವಿವಿಧ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಾದ ಹಿಂದಿ, ಕೊಡವ, ಬ್ಯಾರಿ, ಮಲಯಾಳಂ, ತುಳು, ಕೊಂಕಣಿ, ನವಾಯತ್, ತೆಲುಗು, ತಮಿಳು, ಮಿಜರಾಂ, ಮೇಘಾಲಯದ ಭಾಷೆಗಳ ಮಹತ್ವಗಳನ್ನು ತಿಳಿಸಿದರು. ವಿದ್ಯಾರ್ಥಿ ಶಿಕ್ಷಕಿ ಸಿಸ್ಟರ್ ಲಿಯೋನಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ವಿದ್ಯಾರ್ಥಿ ಶಿಕ್ಷಕಿ ರೇಶ್ಮಾರೊಕ್ಕೊ ವಂದನಾರ್ಪಣೆಯನ್ನು ಸಲ್ಲಿಸಿದರು.

Related Posts

Leave a Reply

Your email address will not be published.

How Can We Help You?