ಸಿದ್ದಕಟ್ಟೆಯ ಕುದ್ಕೋಳಿ ಪಾದೆ ಎಂಬಲ್ಲಿ ಶಾಲಾ ಬಸ್ ಮತ್ತು ಬೈಕ್ ನಡುವೆ ಅಪಘಾತ : ಬೈಕ್ ಸವಾರ ಸಾವು

ಬಂಟ್ವಾಳ: ಶಾಲಾ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ದಾರುಣ ಘಟನೆ ಬಂಟ್ವಾಳ ಮೂಡುಬಿದಿರೆ ರಸ್ತೆಯ ಸಿದ್ದಕಟ್ಟೆ ಸಮೀಪದ ಕುದ್ಕೋಳಿ ಪಾದೆ ಎಂಬಲ್ಲಿ ಸಂಭವಿಸಿದೆ.
ಮೂಡುಮಾರ್ನಾಡು ಕುಕ್ಕುದಪಲ್ಕೆ ನಿವಾಸಿ, ಗಣೇಶ್ ಪೂಜಾರಿ ( 36) ಅವರು ಮೃತಪಟ್ಟವರಾಗಿದ್ದಾರೆ.
ಗಣೇಶ್ ಅವರು ಮೆಸ್ಕಾಂ ಬಿಲ್ ರೀಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಬಂಟ್ವಾಳ ಸಮೀಪ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದರು.ಅದೇ ವೇಳೆ
ಮೂಡುಬಿದಿರೆ ರೋಟರಿ ಶಾಲಾ ಬಸ್ ಮೂಡುಬಿದಿರೆಯಿಂದ ಕುದ್ಕೋಳಿ ಕಡೆಗೆ ಬರುತ್ತಿದ್ದು ಕುದ್ಕೋಳಿ ಪಾದೆ ಎಂಬಲ್ಲಿ ಗಣೇಶ್ ಅವರ ಬೈಕ್ ಗೆ ಢಿಕ್ಕಿಹೊಡೆದಿತ್ತು. ಘಟನೆಯಿಂದ ಗಣೇಶ್ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಅಂಬ್ಯುಲೆನ್ಸ್ ನಲ್ಲಿ ಮಂಗಳೂರು ಆಸ್ಪತ್ರೆ ಗೆ ಸಾಗಿಸಲಾಯಿತಾದರೂ ಅಲ್ಲಿ ಮೃತ ಪಟ್ಟಿದ್ದಾರೆ. ಪುಂಜಾಲಕಟ್ಟೆ ಪೆÇಲೀಸರು ಸ್ಥಳಕ್ಕಾಗಮಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.
ಗಣೇಶ್ ಪೂಜಾರಿ ಅವರು ಅವಿವಾಹಿತರಾಗಿದ್ದರು.ಮೂಡು ಮಾರ್ನಾಡ್ ವಿಘ್ನೇಶ್ವರ ಯುವಕ ಮಂಡಲದಅಧ್ಯಕ್ಷರಾಗಿದ್ದರು ಎಂದು ತಿಳಿದು ಬಂದಿದೆ.