ಅಂಧ ಮಹಿಳೆಯರ ಕ್ರಿಕೆಟ್ ಟೂರ್ನಿ: ಫೈನಲ್ ಪ್ರವೇಶಿದ ಕರ್ನಾಟಕ

ಬೆಂಗಳೂರು: ಆಂಧ್ರಪ್ರದೇಶ ಅಂಧ ಮಹಿಳೆಯರ ಕ್ರಿಕೆಟ್ ತಂಡದ ವಿರುದ್ಧ ನಡೆದ ಸೆಮಿಫೈನಲ್ನಲ್ಲಿ ಕರ್ನಾಟಕ 62 ರನ್ಗಳಿಂದ ಜಯ ಗಳಿಸುವ ಮೂಲಕ ಇಂಡಸ್ಇಂಡ್ ಬ್ಯಾಂಕ್ ಅಂಧ ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ಗೆ ಪ್ರವೇಶಿಸಿದೆ.
ಶನಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ಒಡಿಶಾ ತಂಡವು ಮುಖಾಮುಖಿಯಾಗಲಿದೆ. ಬೆಂಗಳೂರಿನ ಅಲ್ಟಾಯರ್ ಕ್ರಿಕೆಟ್ ಅಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು,15 ಓವರ್ಗಳಲ್ಲಿ 7 ವಿಕೆಟ್ಗೆ 161 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಆಂಧ್ರಪ್ರದೇಶ ಮಹಿಳೆಯರ ತಂಡ 15 ಓವರ್ಗಳು ಮುಕ್ತಾಯಗೊಂಡಾಗ 2 ವಿಕೆಟ್ ನಷ್ಟಕ್ಕೆ 99 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.
ಕರ್ನಾಟಕ ತಂಡದ ಪರ ಗಂಗಾ (41 ರನ್), ವರ್ಷಾಯು. (32) ಮತ್ತು ಸುನೀತಾ (44 ರನ್) ಸಿಡಿಸಿ ಮಿಂಚಿದರು. ಆಂಧ್ರ ಪ್ರದೇಶ ಪರ ರವಣಿ (ಔಟಾಗದೆ 30) ಮತ್ತು ಕೆ. ಲಲಿತಾ (28) ರನ್ ಬಾರಿಸಿದರು .
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ದೆಹಲಿ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಒಡಿಶಾ ತಂಡವು 15 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 187 ರನ್ ಗಳಿಸಿತ್ತು, ಈ ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ದೆಹಲಿ 11.2 ಓವರ್ಗಳಲ್ಲಿ 58 ರನ್ಗಳಿಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿತು. ಒಡಿಶಾ ಪರ ರಚನಾ ಜನಾ ಅಜೇಯ 82 ರನ್ ಗಳಿಸಿದರೆ, ಝಿಲಿ ಬಿರುಹಾ ಔಟಾಗದೆ 93 ರನ್ ಗಳಿಸಿದರು. ದೆಹಲಿ ಪರ ಗುಲ್ಶನ್ ನಾಜ್ (12) ಹೊರತುಪಡಿಸಿದರೆ ಯಾರೂ ಕೂಡ ಹೆಚ್ಚಿನ ರನ್ ಗಳಿಸಲಿಲ್ಲ.
ಸಂಕ್ಷಿಪ್ತ ಸ್ಕೋರ್ :
ಕರ್ನಾಟಕ : 15 ಓವರ್ಗಳಲ್ಲಿ 7 ವಿಕೆಟ್ಗೆ 161
(ಗಂಗಾ 41, ವರ್ಷಾಯು. 32, ಸುನಿತಾ ಔಟಾಗದೆ 44)
ಆಂಧ್ರಪ್ರದೇಶ ಪರ ಲೊಲ್ಲ ವಂದನಾ 24ಕ್ಕೆ2
ಆಂಧ್ರಪ್ರದೇಶ: 15 ಓವರ್ಗಳಲ್ಲಿ 2 ವಿಕೆಟ್ಗೆ 99 (ರವಣಿ ಔಟಾಗದೆ 30, ಕೆ. ಲಲಿತಾ 28;
ಕರ್ನಾಟಕ ಪರ ವರ್ಷಾಯು 19ಕ್ಕೆ1).
ಫಲಿತಾಂಶ: ಕರ್ನಾಟಕ ತಂಡಕ್ಕೆ 62 ರನ್ಗಳ ಜಯ