ರಾಜ್ಯ ಬಜೆಟ್‌-2022 | ಕಳಸಾ – ಬಂಡೂರಿ: ತಂದೆಯ ಯೋಜನೆಗೆ ಬಲ ತುಂಬಿದ ಬೊಮ್ಮಾಯಿ

ರಾಜ್ಯ ಬಜೆಟ್‌-2022 | ಕಳಸಾ – ಬಂಡೂರಿ: ತಂದೆಯ ಯೋಜನೆಗೆ ಬಲ ತುಂಬಿದ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ತಂದೆಯ ಕನಸಿನ ಯೋಜನೆಯನ್ನು ಬಜೆಟ್‌ಗೆ ಸೇರಿಸಿದ್ದು, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಉತ್ತರ ಕರ್ನಾಟಕದ ಕಳಸಾ-ಬಂಡೂರಿ ಯೋಜನೆಗೆ ಒಂದು ಸಾವಿರ ಕೋಟಿ ರೂ. ಅನುದಾನ ಘೋಷಿಸಿದ್ದಾರೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ 2022-23ನೇ ಸಾಲಿನ ಬಜೆಟ್‌ನಲ್ಲಿ ಜಲಸಂಪನ್ಮೂಲ ಇಲಾಖೆಗೆ ರೂ. 20,106 ಕೋಟಿ ಅನುದಾನ ನೀಡಿದ್ದು, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಉತ್ತರ ಕರ್ನಾಟಕದ ಕಳಸಾ-ಬಂಡೂರಿ ಯೋಜನೆಗೆ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.

ಮಹಾದಾಯಿಯಿಂದ ರಾಜ್ಯಕ್ಕೆ 52.60 ಟಿಎಂಸಿ ಅಡಿ ನೀರು ಸಿಗುತ್ತಿದೆ. ಗೋವಾ ರಾಜ್ಯದ ಮೂಲಕ 159.07 ಟಿಎಂಸಿ ಅಡಿ ನೀರು ಅರಬ್ಬಿ ಸಮುದ್ರ ಪಾಲಾಗುತ್ತದೆ. ಹೀಗೆ ರಾಜ್ಯದ ಮೂಲಕ ಸಮುದ್ರಕ್ಕೆ ಪೋಲಾಗುವ ನೀರನ್ನು ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಉಪಯೋಗವಾಗಲೆಂದು ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರು ಎಸ್ ಆರ್ ಬೊಮ್ಮಾಯಿ ನೇತೃತ್ವದಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದರು.

ಸಿಎಂ ಬೊಮ್ಮಾಯಿ ಅವರು ಉತ್ತರ ಕರ್ನಾಟಕದವರೇ ಆಗಿದ್ದರಿಂದ ಸಹಜವಾಗಿಯೇ ಆ ಭಾಗದ ಜನತೆಗೆ ಪ್ರಸಕ್ತ ಸಾಲಿನ ಬಜೆಟ್‌ ಮೇಲೆ ನಿರೀಕ್ಷೆಯಿತ್ತು. ಬೊಮ್ಮಾಯಿ ಕೂಡ ಸ್ಪಂದಿಸಿ, ಕಳಸಾ ಬಂಡೂರಿ ಯೋಜನೆಗೆ ಒಂದು ಸಾವಿರ ಕೋಟಿ ರೂ. ಅನುದಾನ ಘೋಷಿಸಿದ್ದಾರೆ.

ಆಗಿನ ಗುಂಡೂರಾವ್ ಸರ್ಕಾರದಲ್ಲಿ ಎಸ್.ಆರ್. ಬೊಮ್ಮಾಯಿ ಆಯೋಗದಿಂದ 1980ರಲ್ಲಿ ಈ ಯೋಜನೆ ಜಾರಿಗೆ ಸಲಹೆ ನೀಡಲಾಗಿತ್ತು. ಸದ್ಯ ಅವರ ಮಗ ಬಸವರಾಜ್ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ತಂದೆಯ ಯೋಜನೆಗೆ ಶಕ್ತಿ ತುಂಬಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಮಹದಾಯಿ ಯೋಜನೆಯನ್ನು 1978ರಲ್ಲಿ ಸಿದ್ಧ ಪಡಿಸಿ, ಎಸ್.ಆರ್. ಬೊಮ್ಮಾಯಿ ಆಯೋಗದಿಂದ 1980ರಲ್ಲಿ ಯೋಜನೆ ಜಾರಿಗೆ ಸಲಹೆ ನೀಡಲಾಯಿತು. ಕರ್ನಾಟಕ ಸರ್ಕಾರ 1988ರಲ್ಲಿ ಅನುಮೋದನೆ ನೀಡಿತು. ಆದರೆ ಗೋವಾ ಸರ್ಕಾರ ಆಗ ಈ ಯೋಜನೆ ವಿರೋಧಿಸಿತು.

ಎಸ್.ಆರ್.ಬೊಮ್ಮಾಯಿ ಅವರೇ ಸಿಎಂ ಆಗಿದ್ದಾಗ 1989ರಲ್ಲಿ ಗೋವಾ ಸಿಎಂ ಪ್ರತಾಪ್‌ ಸಿಂಗ್ ರಾಣೆ ಜತೆ ಮಾತುಕತೆ ನಡೆಸಿದ್ದರ ಫಲವಾಗಿ, 45 ಟಿಎಂಸಿ ನೀರು ಬಳಸಲು ರಾಣೆ ಅನುಮತಿ ನೀಡಿದ್ದರು. ಕಳಸಾ-ಬಂಡೂರಿ ನಾಲೆಗಳ ಯೋಜನೆಗೆ ರಾಜ್ಯ ಅರಣ್ಯ ಇಲಾಖೆಯಿಂದ 2000ರ ಜು.10 ರಲ್ಲಿ ಪರಿಸರ ಕುರಿತು ಅನುಮತಿ ಕೂಡ ಪಡೆಯಲಾಯಿತು.

ಎಸ್.ಎಂ. ಕೃಷ್ಣ ಆಡಳಿತದಲ್ಲಿ, 2002ರ ಏಪ್ರಿಲ್ 30 ರಲ್ಲಿ ಕಳಸಾ ಬಂಡೂರಿ ಕಣಿವೆಯಿಂದ 7.56 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಹರಿಸುವ ಕರ್ನಾಟಕದ ಯೋಜನೆಗೆ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆ ತಾತ್ವಿಕ ಒಪ್ಪಿಗೆ ಕೊಟ್ಟಿತ್ತು. ಆದರೆ, ಅಂದಿನ ಗೋವಾದ ಬಿಜೆಪಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಈ ಯೋಜನೆಯಿಂದ ಗೋವಾದ ಸಸ್ಯಗಳಿಗೆ ಹಾನಿಯಾಗುವುದೆಂದು ಹಾಗೂ ಪ್ರಾಣಿಗಳು ತೊಂದರೆಗೊಳಗಾಗಬಹುದು ಎಂದು ಆರೋಪಿಸಿ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು.

ಮೂರು ದಶಕದ ಹೋರಾಟ

ಗೋವಾದ ಜೀವನದಿಯಾದ ಮಾಂಡೋವಿ-ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಮೂರು ದಶಕಗಳಿಗೂ ಹೆಚ್ಚಿನ ನೋವಿನ ಹೋರಾಟದ ಇತಿಹಾಸವಿದೆ. ಮಹದಾಯಿ ನದಿಯಿಂದ ಮಲಪ್ರಭಾ ನದಿಗೆ ನೀರು ಹರಿಸುವಂತೆ ಕೋರಿದ್ದ ರಾಜ್ಯದ ಮಧ್ಯಂತರ ಅರ್ಜಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿದ ನಡೆ ಕಂಡು ಉತ್ತರ ಕರ್ನಾಟಕದಾದ್ಯಂತ ೨೦೧೬ರಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯೇ ನಡೆಯಿತು. ಸರ್ಕಾರಿ ಕಚೇರಿ, ವಾಹನ, ಕಡತಕ್ಕೆ ಬೆಂಕಿ ಹಚ್ಚುವ ಮೂಲಕ ಹೋರಾಟ ಹಿಂಸಾರೂಪಕ್ಕೆ ತಿರುಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ ಪರಿಣಾಮ ನವಲಗುಂದದಲ್ಲಿ ಸಾಕಷ್ಟು ಜನರಿಗೆ ಗಂಭೀರ ಗಾಯಗಳಾದವು. ಅದೇ ಪ್ರತಿಭಟನೆ ವೇಳೆ ಮೂವರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನರಗುಂದದಲ್ಲಿ ಕೂಡ ನಡೆದಿತ್ತು. ಮುಂದೆ ಸತತವಾಗಿ ಉಪವಾಸ, ಧರಣಿ, ಮರವಣಿಗೆ ವರ್ಷಗಳ ಕಾಲ ನಡೆಯಿತು.

ದಶಕಗಳ ಹೋರಾಟಕ್ಕೆ ಜಯ

ಕಳಸಾ – ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಜಲವಿವಾದ ನ್ಯಾಯಮಂಡಳಿಯು 2018ರ ಆಗಸ್ಟ್‌ 14ರಂದು ನೀಡಿದ ತೀರ್ಪನ್ನು ಆಧರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತು. ಆ ಮೂಲಕ ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕದ ಜನರು ದಶಕಗಳ ಕಾಲ ನಡೆಸಿದ ಹೋರಾಟಕ್ಕೆ ಫಲ ದೊರೆತಿದೆ. ಕುಡಿಯುವ ಉದ್ದೇಶದಿಂದ 5.40 ಟಿಎಂಸಿ ಅಡಿ ಹಾಗೂ ಜಲ ವಿದ್ಯುತ್‌ ಉತ್ಪಾದನೆಗೆ 8.02 ಟಿಎಂಸಿ ಅಡಿ ಸೇರಿ ನ್ಯಾಯಮಂಡಳಿಯು ರಾಜ್ಯಕ್ಕೆ 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ.

ಮಹದಾಯಿಯ ಒಟ್ಟು 36.55 ಟಿಎಂಸಿ ಅಡಿ ನೀರಿಗೆ ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿತ್ತು. ಅದರಲ್ಲಿ ಬಳಕೆ ಉದ್ದೇಶದಿಂದ ತಿರುವು ಯೋಜನೆ ಮೂಲಕ ಮಲಪ್ರಭಾ ನದಿಗೆ 7.56 ಟಿಎಂಸಿ ಅಡಿ ಹಾಗೂ ಕಣಿವೆ ವ್ಯಾಪ್ತಿಯಲ್ಲಿ 1.50 ಟಿಎಂಸಿ ಅಡಿ ಸೇರಿದಂತೆ ಒಟ್ಟು 9.06 ಟಿಎಂಸಿ ಅಡಿ ನೀರಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ದೊರೆತಿದ್ದು 13.42 ಟಿಎಂಸಿ ಅಡಿ. ಅದೇ ರೀತಿ, ಗೋವಾಗೆ 24 ಟಿಎಂಸಿ ಅಡಿ. ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ.

ಮೂರು ಜಿಲ್ಲೆಗಳಿಗೆ ಕುಡಿಯುವ ನೀರು

ಕಳಸಾ-ಬಂಡೂರಿ ಯೋಜನೆ ಮೂಲಕ ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ. ಮಹಾದಾಯಿ ನದಿಯ ಉಪನದಿಗಳಾದ ಕಳಸ ಮತ್ತು ಬಂಡೂರಿಯ 7.56 ಟಿಎಂಸಿ ನೀರನ್ನು ತಿರುಗಿಸಿ, ಮಲಪ್ರಭಾ ನದಿಗೆ ಸೇರಿಸಲು ಕಳಸ ಮತ್ತು ಬಂಡೂರಿಗೆ ಅಡ್ಡಲಾಗಿ ಕಟ್ಟೆ ಕಟ್ಟುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ಕಳಸಾ-ಬಂಡೂರಿ ಎಂಬ ಎರಡು ನಾಲೆಗಳ ಮೂಲಕ ಜಲಾಶಯಕ್ಕೆ ನೀರು ಹರಿಸುವುದರಿಂದ ಇದನ್ನು ಕಳಸಾ-ಬಂಡೂರಿ ಯೋಜನೆ ಎಂದು ಕರೆಯಲಾಗಿದೆ. ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಮಹದಾಯಿ ನದಿಯು ಕರ್ನಾಟಕದಲ್ಲಿ 35 ಕಿ.ಮೀ ಹರಿದು, ಮುಂದೆ ಚಿಕ್ಕ ರಾಜ್ಯ ಗೋವಾದಲ್ಲಿ 45 ಕಿ.ಮೀ ಹರಿಯುವ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. ಗೋವಾದಲ್ಲಿ ಇದನ್ನು ಮಾಂಡೋವಿ ನದಿ ಅಂತಲೂ ಕರೆಯುತ್ತಾರೆ.
[20:39, 04/03/2022] Mass Media Bangalore: ಮಧ್ಯಪ್ರದೇಶ: ದಲಿತ ಮಹಿಳೆ ದೇವಸ್ಥಾನ ಪ್ರವೇಶಕ್ಕೆ ಅಡ್ಡಿ; ಅರ್ಚಕನ ಬಂಧನ!

ಮಾರ್ಚ್ 1 ರಂದು ಮಹಾಶಿವರಾತ್ರಿಯ ಸಂದರ್ಭದಲ್ಲಿ ಪೂಜೆ ಸಲ್ಲಿಸಲು ತೆರಳಿದ್ದ ದಲಿತ ಮಹಿಳೆಯನ್ನು ದೇವಸ್ಥಾನಕ್ಕೆ ಪ್ರವೇಶಿಸದಂತೆ ಅಲ್ಲಿನ ಅರ್ಚಕ ತಡೆದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಇತರ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಮಧ್ಯಪ್ರದೇಶದದ ಖಾರ್ಗೋನ್ ಜಿಲ್ಲೆಯ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಪೂಜಾ ಖಂಡೆ ಎಂಬ ದಲಿತ ಮಹಿಳೆ ತೆರಳಿದ್ದರು. ಅವರನ್ನು ದೇವಸ್ಥಾನದ ಹೊರಗೆ ತಡೆಯಲಾಗಿದೆ. ನಂತರ, ಆಕೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಅರ್ಚಕ ಮತ್ತು ಕೆಲವು ಜನರನ್ನು ಒತ್ತಾಯಿಸಿದ್ದಾರೆ. ಆದರೆ, ಆಕೆಗೆ ಪ್ರವೇಶ ನೀಡಲಾಗಿಲ್ಲ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ, ಪ್ರಕರಣ ಬೆಳಕಿಗೆ ಬಂದಿದೆ. ಸೇರಿದಂತೆ ಜನರನ್ನು ಒತ್ತಾಯಿಸುತ್ತಿರುವ ವೀಡಿಯೊ ಹೊರಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ಅರ್ಚಕ ಕಾಣಿಸಿಕೊಂಡಿದ್ದಾರೆ. ತನನ್ನು ದೇವಾಲಯದ ಒಳಗೆ ಬಿಡದಿದ್ದರೆ ಪೊಲೀಸರಿಗೆ ತಿಳಿಸುವುದಾಗಿ ಆಕೆ ಹೇಳುತ್ತಿರುವುದೂ ವಿಡಿಯೋದಲ್ಲಿ ಸೆರೆಯಾಗಿದೆ.

“ನಾನು ಅರ್ಚಕರಿಗೆ ಏನನ್ನೂ ಹೇಳಲಿಲ್ಲ, ಆದರೆ ಅವರು ಇದ್ದಕ್ಕಿದ್ದಂತೆ ಎದ್ದುನಿಂತು, ‘ದಲಿತರು ದೇವಾಲಯವನ್ನು ಪ್ರವೇಶಿಸುವಂತಿಲ್ಲ. ದಲಿತರು ಹೊರಗಿನಿಂದ ಮಾತ್ರ ಪೂಜೆ ಸಲ್ಲಿಸಬೇಕು; ಅವರಿಗೆ ದೇವಾಲಯ ಒಳಗೆ ಪೂಜೆ ಸಲ್ಲಿಸುವ ಹಕ್ಕಿಲ್ಲ ಎಂದು ಹೇಳಿದರು. ಆದರೆ, ನಾನು ಒಂದು ವಿಚಾರವನ್ನು ಕೇಳಬಯಸುತ್ತೇನೆ – ನಾವು ಏಕೆ ಪೂಜೆ ಸಲ್ಲಿಸಬಾರದು – ನಾವು ಪೂಜೆ ಸಲ್ಲಿಸುವಂತಿಲ್ಲ ಎಂದು ಕಾನೂನಿನಲ್ಲಿ ಅಥವಾ ಸಂವಿಧಾನದಲ್ಲಿ ಬರೆಯಲಾಗಿದೆಯೇ?” ಎಂದು ಪೂಜಾ ಖಂಡೆ ಪ್ರಶ್ನಿಸಿದ್ದಾರೆ.

ದಲಿತರರು ದೇವಾಲಯಕ್ಕೆ ಪ್ರವೇಶಿಸಬಾರದು ಎಂಬ ನಿಯಮಗಳನ್ನು ಮಾಡುವ ಅವರ ಸಮುದಾಯದ ಮುಖ್ಯಸ್ಥರು ಯಾರು ಎಂದು ಜನರು ಪ್ರಶ್ನಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಘಟನಾ ಸ್ಥಳದಲ್ಲಿ 100-200 ಜನರು ನಿಂತಿದ್ದರು, ಅವರೆಲ್ಲರೂ ವಿದ್ಯಾವಂತರಂತೆ ಕಾಣುತ್ತಿದ್ದರು. ಆದರೆ, ಅವರು ನನ್ನನ್ನು ಒಳಗೆ ಬಿಡಲಿಲ್ಲ ಎಂದು ಖಂಡೆ ಹೇಳಿದ್ದಾರೆ.

ಮೆಂಗಾವ್ ಪೊಲೀಸ್ ಠಾಣೆಯ ಟೌನ್ ಇನ್ಸ್ಪೆಕ್ಟರ್ ದಿನೇಶ್ ಖುಶ್ವಾನಾ, “ನಾವು ಘಟನೆ ನಡೆದ ದಿನ ಯಾವುದೇ ದೂರು ಸ್ವೀಕರಿಸಿರಲಿಲ್ಲ, ಆದರೆ ವೀಡಿಯೊ ವೈರಲ್ ಆದ ನಂತರ, ಪೊಲೀಸ್ ಸಿಬ್ಬಂದಿಯ ತಂಡವನ್ನು ಆಕೆಯ ಮನೆಗೆ ಕಳುಹಿಸಿದ್ದೆವು. ನಂತರ, ಸೆಕ್ಷನ್ 505 (ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಅಲ್ಲದೆ, SC/ST ಕಾಯಿದೆಯ ಸೆಕ್ಷನ್ಗಳ ಅಡಿಯಲ್ಲೂ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಅರ್ಚಕ ವಿಜಯ್ ಬಾರ್ವೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಘಟನೆ ಬೆಳಕಿಗೆ ಬಂದ ನಂತರ, ಕಂದಾಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯ ತಂಡವು ಆ ದಲಿತ ಮಳೆಯನ್ನು ಇತರರೊಂದಿಗೆ ದೇವಾಲಯದ ಒಳಗೆ ಕರೆದೊಯ್ದು ಪೂಜೆ ಸಲ್ಲಿಸಲು ಅವಕಾಶ ನೀಡಲಾಯಿತು. ನಂತರ, ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ.

ಇದೇ ರೀತಿಯ ಘಟನೆಗಳು ಕರ್ನಾಟಕದಲ್ಲೂ ವರದಿಯಾಗಿವೆ. ಕಳೆದ ವರ್ಷ ಹಾಸನ ಜಿಲ್ಲೆಯ ದಿಡಗೂರಿನಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅದೇ ರೀತಿ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಚೌಡೇಶ್ವರಿ ದೇವಾಲಯಕ್ಕೆ ದಲಿತರು ಪ್ರವೇಶಿಸಲು ಹೋದಾಗ, ಅವರನ್ನು ತಡೆಯಲಾಗಿತ್ತು. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬ್ಯಾಲದಹಳ್ಳಿಯಲ್ಲಿ ದಲಿತರಿಗೆ ದೇವಾಲಯ ಪ್ರವೇಶವನ್ನು ನಿರ್ಬಂಧಿಸಿದ ನಂತರ, ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಬಳಿಕ, ಪೊಲೀಸರ ಸಮ್ಮುಖದಲ್ಲಿ ದಲಿತರು ದೇವಾಲಯ ಪ್ರವೇಶ ಮಾಡಿದ್ದರು.

Related Posts

Leave a Reply

Your email address will not be published.

How Can We Help You?