ಮುಕ್ಕದ ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿಅಗ್ನಿ ಮತ್ತು ಸುರಕ್ಷತೆ ಒಂದು ದಿನದ ಕಾರ್ಯಾಗಾರ

ಮುಕ್ಕಾದ ಶ್ರೀನಿವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ “ಆಗ್ನಿ ಮತ್ತು ಸುರಕ್ಷತೆ” ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿದ್ದರು.

ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಕಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ (ಸಂಬಂಧಿತ ಆರೋಗ್ಯ ವಿಜ್ಞಾನ ಕಾಲೇಜಿನ), ವಿಧಿವಿಜ್ಞಾನ ಮತ್ತು ಅಪರಾಧಶಾಸ್ತ್ರ ವಿಭಾಗವು ದಿನದ ಕಾರ್ಯಗಾರವನ್ನು ಆಯೋಜಿಸಿತ್ತು. ಕಾರ್ಯಾಗಾರದಲ್ಲಿ ಸುಮಾರು 150ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕದ್ರಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಮದ್ ಜಲ್ಲಿಕ ನವಾಝ್ ಕೆ.ಪಿ, ಹಾಗೂ ಸಹಾಯಕ ಅಗ್ನಿಶಾಮಕ ಅಧಿಕಾರಿ ಸುನಿಲ್ ಕುಮಾರ್ ಆಗಮಿಸಿದ್ದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರವು ಘೋಷಿಸಿದ ಆಗ್ನಿ ಅವಘಡೆಗಳ ಅರಿವು ಮತ್ತು ಆಗ್ನಿ ಅನಾಹುತ ತಡೆಗಟ್ಟುವ ವಾರ” ಎಂದು ಗುರುತಿಸಲಾದ ಈ ವಾರದ ಮಹತ್ವವನ್ನು ವಿವರಿಸಿದರು.

srinivas university mukka

ಇಂದಿನ ಕಾರ್ಯಾಗಾರದ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು, ಮುಖ್ಯಾಧಿಕಾರಿ ಡಾ. ಉದಯ್ ಕುಮಾರ್ ರಾವ್, ಶ್ರೀನಿವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನ ಕೇಂದ್ರ ಶ್ರೀ ದೇವಲನ್, ಎಸ್. ಮುಖ್ಯಾಧಿಕಾರಿ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್, ವಿಧಿವಿಜ್ಞಾನ ವಿಭಾಗದ ಪ್ರಾದ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ವೃಂದಾ ಜೆ.ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಡಾ. ವೃಂದಾ ಜಿ. ಭಟ್ ಅವರು ಅಗ್ನಿ ಮತ್ತು ಅದರ ಪ್ರಭಾವದ ಮೇಲೆ ಬೆಳಕು ಚೆಲ್ಲಿದರು. ಹಾಗೆಯೇ ಆಗ್ನಿ ವಿಧಿ ವಿಜ್ಞಾನ ಮತ್ತು ವಿಧಿ ವಿಜ್ಞಾನದ ತನಿಖೆಯ ಕ್ಷೇತ್ರದಲ್ಲಿ ಇದರ ಅಗತ್ಯತೆಯ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಾಗಾರದ ಸಮಾಲೋಚನೆಯನ್ನು ಶ್ರೀ ಮಹಮ್ಮದ್ ಜುಲ್ಟಿಕರ್ ನವಾಜ್ ಕೆ.ಪಿ ಅವರು ಮಾಡಿದರು, ಈ ಸಂದರ್ಭದಲ್ಲಿ ಅವರು ಅಗ್ನಿ ಹಾಗೂ ವಿವಿಧ ರೀತಿಯ ಅಗ್ನಿಗಳು, ಆದರವರ್ಗೀಕರಣ ಮತ್ತು ಆಗ್ನಿಯನ್ನು

ನಂದಿಸುವ ಕೆಲವು ಸಾಧನಗಳನ್ನು ಪ್ರದರ್ಶಿಸಿದರು. ಚರ್ಚೆಯ ನಂತರ ತೆರದ ಮೈದಾನದಲ್ಲಿ ಪಾತ್ಯಕ್ಷಿಕೆ ಅಧಿವೇಶನವನ್ನು ಮಾಡಲಾಯಿತು. ಅಲ್ಲಿ ವಿವಿಧ ರೀತಿಯ ಅಗ್ನಿಶಾಮಕಗಳ ಬಳಕೆಯನ್ನು ಅದರ ಉಪಯುಕ್ತತೆಗಳನ್ನು ಪ್ರದರ್ಶಿಸಲಾಯಿತು, ಒದ್ದೆಯಾದ ಹೊದಿಕೆ, ನೀರಿನ ಜೆಟ್‍ಗಳು, ಫೆÇೀಮ್ ಆದಾರಿತ ಆಗ್ನಿಶಾಮಕಗಳು, ಒಣ ರಾಸಯನಿಕ ಮಡಿಗಳು ಇತ್ಯಾದಿಗಳ ಸಹಾಯದಿಂದ ಬೆಂಕಿಯನ್ನು ನಂದಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು ಹಾಗೆಯೇ ಅಲ್ಲಿ ನೆರೆದಿದ್ದಂತಹ ಸ್ವಯಂ ಸೇವಕರಿಗೂ ವಿವಿಧ ರೀತಿಯ ಆಗ್ನಿಶಾಮಕಗಳನ್ನು ಉಪಯೋಗಿಸಲು ಅವಕಾಶವನ್ನು ನೀಡಿದರು. ಅಧಿಕಾರಿಗಳು ವಿವಿಧ ರೀತಿಯ ಚಿಟ್ ನೀರು ಸಿಂಪಡಿಸುವ ಸಿಂಕ್ಲರ್‍ಗಳು, ಅಗ್ನಿ ಬೈಕ್‍ಗಳ ಬಳಕೆಯ ಅನುಕೂಲತೆಗಳನ್ನು ವಿವರಿಸಿದರು.

Related Posts

Leave a Reply

Your email address will not be published.

How Can We Help You?