ಉಕ್ರೇನ್ ಬಿಕ್ಕಟ್ಟು: ಭಾರತದಲ್ಲಿ ಸೂರ್ಯಕಾಂತಿ ಎಣ್ಣೆ 50 ರೂ. ಏರಿಕೆ!

ಉಕ್ರೇನ್ ಮೇಲೆ ರಷ್ಯಾ ಯುದ್ದ ಘೋಷಿಸಿದ ನಂತರ ಉಕ್ರೇನ್ ಬಿಕ್ಕಟ್ಟಿಗೆ ಸಿಲುಕಿದ್ದು, ಆರ್ಥಿಕ ವಹಿವಾಟುಗಳು ಸ್ಥಗಿತಗೊಂಡಿವೆ. ಇದರ ಪರಿಣಾಮವಾಗಿ ವಿವಿಧ ರಾಷ್ಟ್ರಗಳಲೂ ಬೆಲೆ ಏರಿಕೆಯ ಬಿಸಿ ಹೆಚ್ಚಾಗಿದೆ.

ಉಕ್ರೇನ್ನ ವಾಯುನೆಲೆ ಮತ್ತು ಬಂದರುಗಳನ್ನು ಮುಚ್ಚಲಾಗಿದೆ. ಹೀಗಾಗಿ, ಉಕ್ರೇನ್ನಿಂದ ಭಾರತಕ್ಕೆ ಗರಿಷ್ಟ ಮಟ್ಟದಲ್ಲಿ ಆಮದಾಗುತ್ತಿದ್ದ ಕಚ್ಚಾ ಖಾದ್ಯ ತೈಲ ಭಾರತಕ್ಕೆ ಆಮದಾಗದ ಕಾರಣ, ಭಾರತದಲ್ಲಿ ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರುತ್ತಿದೆ.

ಭಾರತದ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆಯ ಬೆಲೆ ಲೀಟರ್ಗೆ 50 ರೂ. ಏರಿಕೆಯಾಗಿದೆ. ಹತ್ತಿಬೀಜ, ಸಾಸಿವೆ ಮತ್ತು ಕಡಲೆಕಾಯಿ ಎಣ್ಣೆಗಳಿಗೆ ಅನುಕ್ರಮವಾಗಿ 30 ರೂ., 10 ರೂ. ಮತ್ತು 40 ರೂ. ಏರಿಕೆಯಾಗಿದೆ.

ಸೂರ್ಯಕಾಂತಿ ಬೀಜಗಳ ಜಾಗತಿಕ ಉತ್ಪಾದನೆಯಲ್ಲಿ ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳ ಪಾಲು 90% ರಷ್ಟಿದೆ. ನಾವು ಎರಡೂ ದೇಶಗಳಿಂದ ವಾರ್ಷಿಕವಾಗಿ ಸುಮಾರು 5,00,000 ಟನ್ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತೇವೆ. ಅದರೆ, ಉಕ್ರೇನ್ ಮತ್ತು ರಷ್ಯಾ ನಡುವಿನ ಬಿಕ್ಕಟ್ಟಿನಿಂದಾಗಿ, ಅಲ್ಲಿಂದ ಆಮದು ಮಾಡಿಕೊಳ್ಳಲಾಗುತ್ತಿಲ್ಲ. ಹೀಗಾಗಿ, ಭಾರತದಾದ್ಯಂತ ಸೂರ್ಯಕಾಂತಿ ಎಣ್ಣೆಯ ಬೆಲೆ 20% ರಷ್ಟು ಏರಿಕೆಯಾಗಿದೆ ಎಂದು ಗುಜರಾತ್ ರಾಜ್ಯ ಖಾದ್ಯ ತೈಲಗಳು ಮತ್ತು ಎಣ್ಣೆ ಬೀಜಗಳ ಸಂಘದ ಅಧ್ಯಕ್ಷ ಸಮೀರ್ ಶಾ ಹೇಳಿದ್ದಾರೆ.

ಭಾರತವು ವಾರ್ಷಿಕವಾಗಿ ಸುಮಾರು 2.5 ಮಿಲಿಯನ್ ಟನ್ (mt) ಸೂರ್ಯಕಾಂತಿ ಎಣ್ಣೆಯನ್ನು ಬಳಸುತ್ತದೆ. ಅಲ್ಲದೆ, ಪಾಮ್ (8-8.5 mt), ಸೋಯಾಬೀನ್ (4.5 mt) ಮತ್ತು ಸಾಸಿವೆ/ರಾಪ್ಸೀಡ್ (3 mt) ಎಣ್ಣೆಗಳ ಬಳಕೆಯೂ ಪ್ರಮುಖವಾಗಿವೆ. ಆದರೆ, ಈ ಪೈಕಿ ಭಾರತವು 50,000 ಟನ್ ಸೂರ್ಯಕಾಂತಿ ಎಣ್ಣೆಯನ್ನು ಮಾತ್ರ ಉತ್ಪಾದಿಸುತ್ತಿದ್ದು, ಉಳಿದದ್ದನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲೂ ಉಕ್ರೇನ್ ಮತ್ತು ರಷ್ಯಾದಿಂದ ಅತಿ ಹೆಚ್ಚಾಗಿ ಅಡುಗೆ ಎಣ್ಣೆಯನ್ನು ಭಾರತವು ಆಮದುಮಾಡಿಕೊಳ್ಳುತ್ತದೆ.

ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2019-20 (ಏಪ್ರಿಲ್-ಮಾರ್ಚ್) ನಲ್ಲಿ ಒಟ್ಟು 2.5 mt (ಬೆಲೆ 1.89 ಶತಕೋಟಿ ಡಾಲರ್) ಮತ್ತು 2020-21 ರಲ್ಲಿ 2.2 mt (1.96 ಶತಕೋಟಿ ಡಾಲರ್) ಸೂರ್ಯಕಾಂತಿ ಎಣ್ಣೆಯನ್ನು ಭಾರತವು ಆಮದು ಮಾಡಿಕೊಂಡಿದೆ. ಭಾರತದ ಒಟ್ಟು ಆಮದಿನ ಪೈಕಿ, 2019-20ರಲ್ಲಿ ಉಕ್ರೇನ್ನಿಂದ 1.93 mt (ಮೌಲ್ಯ $1.47 ಶತಕೋಟಿ) ಮತ್ತು 2020-21 ರಲ್ಲಿ 1.74 mt (ಮೌಲ್ಯ $1.6 ಶತಕೋಟಿ) ಮತ್ತು ರಷ್ಯಾದಿಂದ 0.38 mt ($287 ಮಿಲಿಯನ್) ಮತ್ತು 0.238 mt ($235.89 ಮಿಲಿಯನ್) ಆಮದು ಮಾಡಿಕೊಂಡಿದೆ. ಅಲ್ಲದೆ, ಅರ್ಜೆಂಟೀನಾದಿಂದ 2019-20 ರಲ್ಲಿ 0.17 mt ಮತ್ತು 2020-21 ರಲ್ಲಿ 0.14 mt ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಂಡಿದೆ.

Related Posts

Leave a Reply

Your email address will not be published.

How Can We Help You?