ರಾಜಕೀಯದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಬೇಕು: ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ವಿದ್ಯಾರ್ಥಿಗಳ ಅಭಿಪ್ರಾಯ

ಅಂತಿಮ ಹಂತದ ಚುನಾವಣೆಗೆ ಉತ್ತರ ಪ್ರದೇಶ ರಾಜ್ಯವು ಸಜ್ಜಾಗುತ್ತಿದೆ. ಏಳನೇ ಹಂತದ ಚುನಾವಣೆ ಮಾರ್ಚ್ 07ರಂದು ನಡೆಯಲಿದೆ. ಚುನಾವಣೆಯ ಬಗ್ಗೆ ಮಾತನಾಡುತ್ತಿರುವ ವಿದ್ಯಾರ್ಥಿಗಳು, ವಿಶೇಷವಾಗಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು, “ಯುವಕರು ವಿದ್ಯಾವಂತರಾದರೆ ದೇಶದ ಭವಿಷ್ಯವೂ ಉಜ್ವಲವಾಗುತ್ತದೆ. ಶಿಕ್ಷಣವು ಎಲ್ಲರಿಗೂ ಕೈಗೆಟಕಿದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ರಾಜಕೀಯ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಭಾಗಿಯಾಗಬೇಕು” ಎಂದು ಹೇಳುತ್ತಾರೆ.

ಉತ್ತರ ಪ್ರದೇಶದ ಅಜಂಗಢ್ ಬಳಿ ಇರುವ ಮಿರ್ಜಾ ಸ್ಟಡಿ ಸೆಂಟರ್ನ ಹಲವಾರು ಪದವಿ ವಿದ್ಯಾರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ. ಅವರೆಲ್ಲರೂ, ತಮ್ಮ ಮತದಾನವು ಶಿಕ್ಷಣ ಮತ್ತು ಅಭಿವೃದ್ದಿಯ ಚರ್ಚೆಯೊಂದಿಗೆ ಕೂಡಿರುತ್ತದೆ ಎಂದು ಹೇಳುತ್ತಾರೆ.

“ಸರ್ಕಾರವು ಆರೋಗ್ಯ ರಕ್ಷಣೆಯತ್ತ ಗಮನಹರಿಸಬೇಕು. “ಕೋವಿಡ್ ಸಮಯದಲ್ಲಿ ಏನಾಯಿತು ಎಂದು ನಾವೆಲ್ಲರೂ ನೋಡಿದ್ದೇವೆ. ಸಾಮಾನ್ಯ ಜನರ ಜೀವ ಉಳಿಸಲು ಸರ್ಕಾರಗಳು ಮತ್ತು ವ್ಯವಸ್ಥೆ ವಿಫಲವಾಗಿದೆ. ಆ ಸಂದರ್ಭವು ದೇಶದ ಆರೋಗ್ಯ ಕ್ಷೇತ್ರವು ಹೇಗಿದೆ ಎಂಬುದನ್ನು ಬಹಿರಂಗಪಡಿಸಿತು” ಎಂದು ವಿದ್ಯಾರ್ಥಿನಿ ಸಾನುಬಿ ಇಮ್ತಿಯಾಜ್ ಹೇಳುತ್ತಾರೆ.

ಭಾರತದ ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಮುಖ್ಯ. ಭವಿಷ್ಯದಲ್ಲಿ ಮಹಿಳೆಯರ ನೇತೃತ್ವದ ಪಕ್ಷವೊಂದು ಉತ್ತಮ ಪರ್ಯಾಯವಾಗಿ ಹೊರಹೊಮ್ಮಿದರೆ, ನಾನು ನನ್ನ ಮತದಾನದ ಆದ್ಯತೆಯನ್ನು ಬದಲಾಯಿಸುತ್ತೇನೆ. ಉತ್ತರ ಪ್ರದೇಶದಲ್ಲಿ ಸಮಾನವಾದಿ ಪಕ್ಷವು ವಿದ್ಯಾರ್ಥಿಗಳಿಗೆ ಸಾಕಷ್ಟು ಕೆಲಸ ಮಾಡಿದೆ. ಆದರೆ ಅಖಿಲೇಶ್ ಯಾದವ್ ಅವರ ಜಾತಿ ರಾಜಕಾರಣವನ್ನು ನಾನು ಒಪ್ಪುವುದಿಲ್ಲ. ಎಐಎಂಐಎಂ ಮತ್ತು ಬಿಜೆಪಿ ನಡುವೆ ಅಖಿಲೇಶ್ ಅವರು ರಾಜ್ಯಕ್ಕೆ ಉತ್ತಮ ನಾಯಕರಾಗಿ ಕಾಣುತ್ತಿದ್ದಾರೆ. ಅವರು ಕಟ್ಟಾ ಮುಸಲ್ಮಾನರೂ ಅಲ್ಲ, ಬಿಜೆಪಿಯವರಂತೆ ಹಿಂದುತ್ವವಾದಿಯೂ ಅಲ್ಲ. ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅಭಿವೃದ್ಧಿಯಾಗಲಿದೆ. ನಾನು ಮುಸ್ಲಿಂ ಎಂಬ ಕಾರಣಕ್ಕೆ ನಾನು ಕೇವಲ ಮುಸ್ಲಿಮರ ಅಭಿವೃದ್ಧಿಯ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಜಾತಿ, ಧರ್ಮದ ಭೇದವಿಲ್ಲದೆ ಅಭಿವೃದ್ಧಿ ಎಲ್ಲರಿಗೂ ತಲುಪಬೇಕು’ ಎಂದು ಅವರು ವಿವರಿಸಿದ್ದಾರೆ.

“ಜಾತೀಯತೆಯನ್ನು ಮತ್ತಷ್ಟು ಹೆಚ್ಚಿಸಲು ಬಿಜೆಪಿ ಕೆಲಸ ಮಾಡುತ್ತಿದೆ. ಬಿಜೆಪಿಗರು ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡುತ್ತಾರೆ. ಯೋಗಿ ಅವರು ‘ಮಾರ್ಚ್ 10 ಕೆ ಬಾದ್ ದೇಖ್ ಲೇಂಗೆ’ ಎಂದು ಹೇಳುತ್ತಾರೆ. ಅವರು 80 ವರ್ಸಸ್ 20 ಎಂದು ಮಾತನಾಡುತ್ತಾರೆ. ಮುಸ್ಲಿಂ ಸಮುದಾಯದ ವಿರುದ್ದ ಮಾತನಾಡದೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಅವರು ಇಷ್ಟೆಲ್ಲ ಹೇಳುತ್ತಾರೆ” ಎಂದು ಮತ್ತೊಬ್ಬ ವಿದ್ಯರ್ಥಿ ಸದಾಫ್ ಸಿದ್ದಿಕಿ ಹೇಳುತ್ತಾರೆ.

ಮಹಿಳೆಯರಿಗೆ 40% ರಷ್ಟು ಟಿಕೆಟ್ಗಳನ್ನು ಕಾಂಗ್ರೆಸ್ ಮೀಸಲಿಡಲು ನಿರ್ಧರಿಸಿದೆ. ನಾನು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ನಿಜವಾಗಿಯೂ ಇಷ್ಟಪಡುತ್ತೇನೆ. ಆದರೆ ಕಾಂಗ್ರೆಸ್ ನಮ್ಮ ಕ್ಷೇತ್ರಕ್ಕೆ ಬರಲು ತಡವಾಯಿತು. ಚುನಾವಣೆಗೂ ಮುನ್ನ ಪ್ರಿಯಾಂಕಾ ಅವರು ಅಜಂಗಢಕ್ಕೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ? ಎಂದು ರಾಜಕೀಯ ಸೇರಲು ಬಯಸುವ ಅಲಿಜಾ ರಯೀಸ್ ಪ್ರಶ್ನಿಸಿದ್ದಾರೆ.

“ಹಿಜಾಬ್ ನಮ್ಮ ವೈಯಕ್ತಿಕ ಆಯ್ಕೆಯಾಗಿದೆ. ಅದರಿಂದ ಬೇರೆಯವರಿಗೆ ಯಾವ ರೀತಿಯಲ್ಲಿ ಸಮಸ್ಯೆಯಾಗುತ್ತದೆ. ಅವರು ಹೇಳುವ ಕಾರಣಕ್ಕೆ ನಾವು ಅದನ್ನು ಹೇಗೆ ತೆಗೆದುಹಾಕಬಹುದು? ನಾವು ವಿರೋಧಿಸಿದರೆ ಯೋಗಿಜಿಯವರು ಕೇಸರಿ ಬಟ್ಟೆ ತೊಡುವುದನ್ನು ಬಿಡುತ್ತಾರೆಯೇ ಅಥವಾ ಮೋದಿಜಿಯವರು ಟಿಕಾ ಧರಿಸುವುದನ್ನು ನಿಲ್ಲಿಸುತ್ತಾರೆಯೇ? ಅವರವರ ಉಡುಪು ಅವರಿಗೆ ಬಿಟ್ಟ ಆಯ್ಕೆ. ನಾವು ಉಡುಪಿನ ಬಗ್ಗೆ ಮಾಡುವುದಿಲ್ಲ ಮತ್ತು ಅವರೂ ಮಾಡಬಾರದು” ಎಂದು ಅರಿಶಾ ಹೇಳುತ್ತಾರೆ.

ಹಿಜಾಬ್ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಯತ್ನಿಸುತ್ತಿರುವ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಜನರು ನಿರುದ್ಯೋಗ, ಅಭಿವೃದ್ದಿ ಮತ್ತು ಹಣದುಬ್ಬರಗಳಂತಹ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಜನರು ಅಸಲಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತದಾನ ಮಾಡುತ್ತಾರೆ ಎಂದು ಕಾಲೇಜಿನ ವಿದ್ಯಾರ್ಥಿಗಳು ಹೇಳುತ್ತಾರೆ.

2017ರ ಚುನಾವಣೆಯಲ್ಲಿ, ಅಜಂಗಢ ಜಿಲ್ಲೆಯ 10 ಸ್ಥಾನಗಳಲ್ಲಿ ಎಸ್ಪಿ ಐದು, ಬಿಎಸ್ಪಿ ನಾಲ್ಕು ಮತ್ತು ಬಿಜೆಪಿ ಒಂದು ಸ್ಥಾನವನ್ನು ಗೆದ್ದಿತ್ತು. 2012ರಲ್ಲಿ ಎಸ್ಪಿ ಒಂಬತ್ತು ಮತ್ತು ಬಿಎಸ್ಪಿ ಒಂದರಲ್ಲಿ ಗೆಲುವು ಸಾಧಿಸಿತ್ತು.

ಶಿಬ್ಲಿ ಕಾಲೇಜು ಕೂಡು ಅಜಂಗಢದ ಸದರ್ ಕ್ಷೇತ್ರದಲ್ಲಿದೆ. ಆ ಕ್ಷೇತ್ರದಲ್ಲಿ ಎಂಟು ಬಾರಿ ಶಾಸಕರಾಗಿದ್ದ ದುರ್ಗಾ ಪ್ರಸಾದ್ ಯಾದವ್ ಅವರು ಮತ್ತೊಮ್ಮೆ ಎಸ್ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅದೇ ಕ್ಷೇತ್ರದಲ್ಲಿ ಬಿಎಸ್ಪಿಯ ಸುಶೀಲ್ ಕುಮಾರ್ ಸಿಂಗ್ ಮತ್ತು ಕಾಂಗ್ರೆಸ್ನ ಪ್ರವೀಣ್ ಕುಮಾರ್ ಸಿಂಗ್ ಸ್ಪರ್ಧಿಸಿದ್ದಾರೆ. ಈ ಇಬ್ಬರೂ ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಾರೆ. ಕಳೆದ ಚುನಾವಣೆಯಲ್ಲಿ ದುರ್ಗಾ ಪ್ರಸಾದ್ ಯಾದವ್ ವಿರುದ್ಧ 26,262 ಮತಗಳಿಂದ ಸೋಲು ಕಂಡಿದ್ದ ಅಖಿಲೇಶ್ ಮಿಶ್ರಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಕೃಪೆ: ಇಂಡಿಯನ್ ಎಕ್ಸ್ಪ್ರೆಸ್

Related Posts

Leave a Reply

Your email address will not be published.

How Can We Help You?