ಫ್ಯಾಸಿಸಂ ಅಪಾಯದಿಂದ ಜಗತ್ತನ್ನು ಕಾಪಾಡಿದ ಸ್ಟಾಲಿನ್ – ಸುಕುಮಾರ್

 ಎರಡನೆಯ ಮಹಾಯುದ್ಧದ ಕಾಲಾವಧಿಯಲ್ಲಿ ಫ್ಯಾಸಿಸಂನ ಅಪಾಯದಿಂದ ಕಂಗೆಟ್ಟ ಇಡೀ ಜಗತ್ತನ್ನು ಕಾಪಾಡಿದ ಮಹಾನ್ ನಾಯಕ ಸ್ಟಾಲಿನ್ ರವರ ನಾಯಕತ್ವವನ್ನು ಇಡೀ ಜಗತ್ತೇ ಕೊಂಡಾಡಿದೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುಕುಮಾರ್ ರವರು ಅಭಿಪ್ರಾಯಪಟ್ಟರು.

 ಅವರು ಯುದ್ದ ಫ್ಯಾಸಿಸಂ ಅಪಾಯದ ಪ್ರಸ್ತುತ ಸಂದರ್ಭದಲ್ಲಿ ಸ್ಟಾಲಿನ್ ಒಂದು ನೆನಪು ಎಂಬ ವಿಷಯದ ಬಗ್ಗೆ ನಗರದ ವಿಕಾಸ ಕಚೇರಿಯಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸುತ್ತಾ ಮಾತುಗಳನ್ನು ಹೇಳಿದರು.

ಮುಂದುವರಿಸುತ್ತಾ ಅವರು, ಅತ್ಯಂತ ಕಡು ಬಡತನದಲ್ಲಿ ಶೋಷಿತ ಸಮುದಾಯದಿಂದ ಹುಟ್ಟಿ ಬೆಳೆದ ಸ್ಟಾಲಿನ್ ಎಳೆಯ ಪ್ರಾಯದಲ್ಲೇ ಪ್ರತಿಭಾನ್ವಿತರಾಗಿದ್ದರು. ಕಾರ್ಮಿಕ ವರ್ಗದ ಬಗ್ಗೆ ಸದಾ ಚಿಂತಿತರಾಗಿದ್ದ ಸ್ಟಾಲಿನ್ ಅವರಿಗಾಗಿ ದುಡಿಯಲು ತೀರ್ಮಾನಿಸಿದ್ದರು.ಲೆನಿನ್ ಮರಣಾನಂತರ ರಷ್ಯಾದ ಸಮಾಜವಾದಿ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಲು ಪ್ರಯತ್ನಿಸಿದ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ಧ ಪ್ರಬಲವಾಗಿ ನಿಂತು ಸಮಾಜವಾದಿ ವ್ಯವಸ್ಥೆಯನ್ನು ಮುನ್ನಡೆಸಿ ಜಗತ್ತಿಗೆ ಮಾದರಿಯಾದ ಸ್ಟಾಲಿನ್ ನಾಯಕತ್ವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು

ಪೂರಕ ಮಾತುಗಳನ್ನಾಡಿದ ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿಯವರು ಸೋವಿಯತ್ ರಷ್ಯಾದಲ್ಲಿ ಕ್ರಷಿ ಹಾಗೂ ಕೈಗಾರಿಕೆಯಲ್ಲಿ ಅದ್ಭುತ ಸಾಧನೆ ಮಾಡಿ ಸಾಮ್ಯಾಜ್ಯಶಾಹಿ ಅಮೇರಿಕಾಕ್ಕೆ ಸಡ್ಡು ಹೊಡೆದು ನಿಲ್ಲುವಲ್ಲಿ ಮಾಡಿದ ಕೀರ್ತಿ ಸ್ಟಾಲಿನ್ ಗೆ ಸಲ್ಲುತ್ತದೆ ಎಂದು ಹೇಳಿದರು

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮಾಜಿ ಕಾರ್ಪೋರೇಟರ್ ದಯಾನಂದ ಶೆಟ್ಟಿ ಯವರು ಮಾತನಾಡುತ್ತಾ, ಪ್ರಸ್ತುತ ಕಾಲಘಟ್ಟದಲ್ಲಿ ರಷ್ಯಾ ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ದ ಸ್ವಪ್ರತಿಷ್ಠೆಗಾಗಿ ನಡೆಯುತ್ತಿದೆಯೇ ಹೊರತು ಜನಸಾಮಾನ್ಯರ ಉತ್ತಮವಾಗಿ ಬದುಕಿಗಾಗಿ ಅಲ್ಲ ಎಂಬುದನ್ನು ಅರಿಯಬೇಕಾಗಿದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಸುನಿಲ್ ಕುಮಾರ್ ಬಜಾಲ್ ರವರು ಸ್ವಾಗತಿಸಿದರೆ, ಕೊನೆಯಲ್ಲಿ ಪದ್ಮನಾಭ ಕೊಂಚಾಡಿ ಯವರು ವಂದಿಸಿದರು.

Related Posts

Leave a Reply

Your email address will not be published.

How Can We Help You?