ಖಾಸಗಿ ರಸ್ತೆಯಲ್ಲಿ ಗೇಟ್ ತೆರವುಗೊಳಿಸಬೇಕು- ಸಂತ್ರಸ್ತ ರೈತನ ದೂರಿನ ಮೇರೆಗೆ ರೈತ ಸಂಘದ ಪದಾಧಿಕಾರಿಗಳ ಭೇಟಿ

ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಗಲೋಡಿ ಎಂಬಲ್ಲಿನ ರೈತ ರಮೇಶ್ ನಾಯ್ಕ್ ಅವರ ಮನೆ ಹಾಗೂ ತರವಾಡು ಮನೆಗೆ ಸಂಪರ್ಕಿಸುವ ಖಾಸಗಿ ರಸ್ತೆಯಲ್ಲಿ ಹಾಕಿರುವ ಗೇಟನ್ನು ತೆರವುಗೊಳಿಸಬೇಕು ಎಂದು ಕಂದಾಯ ಅಧಿಕಾರಿಗಳು ನೋಟಿಸ್ ನೀಡಿರುವ ಹಿನ್ನಲೆಯಲ್ಲಿ ಸಂತ್ರಸ್ತ ರೈತನ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಪರಿಸೀಲನೆ ನಡೆಸಿದ್ದಾರೆ.

ಈ ಸಂದರ್ಭ ಸುದ್ದಿಗಾರರೊಂದಿಗೆ ರವಿಕಿರಣ್ ಪುಣಚ ಮಾತನಾಡಿ ರಮೇಶ್ ನಾಯ್ಕ್ ಅವರು ತಂದೆಯಿಂದ ಬಂದ ಪಿತ್ರಾರ್ಜಿತ ಆಸ್ತಿ 2 ಎಕರೆ ಜಮೀನು ಇದ್ದು1.45 ಎಕರೆ ಜಮೀನನ್ನು ಖರೀದಿ ಮಾಡಿದ್ದಾರೆ, ೩೫ ಸೆಂಟ್ಸ್ ಕುಮ್ಕಿ ಜಾಗ ಇದೆ. ಮನೆ ಕಟ್ಟಿಕೊಂಡು ವಾಸ್ತವ್ಯ ಇದ್ದು ಅಡಿಕೆ, ತೆಂಗು ಗಿಡಗಳನ್ನು ನೆಟ್ಟು ಜೀವನ ನಡೆಸುತ್ತಿದ್ದಾರೆ. ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದು 2 ಎಕರೆಗೆ ಫಾರಂ ಸಂಖ್ಯೆ ೫೭ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದೀಗೆ ಪಂಚಾಯತಿಯ ಕಂದಾಯ ಅಧಿಕಾರಿಗಳು ಯಾವುದೋ ದುರುದ್ದೇಶದಿಂದ ಗೇಟ್ ತೆರವುಗೊಳಿಸಬೇಕು ಎಂದು ನೋಟೀಸ್ ನೀಡಿರುವುದು ಈ ಜಮೀನನ್ನು ಸೈಟ್ಗಳಾಗಿ ಹಂಚಲು ನಡೆಸುತ್ತಿರುವ ಹುನ್ನಾರ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದರು. ರೈತನ ಖಾಸಗಿ ರಸ್ತೆಯನ್ನು ಸಾರ್ವಜನಿಕಗೊಳಿಸುವುದು ಸರಿಯಲ್ಲ. ರೈತನಿಗೆ ಅನ್ಯಾಯ ಆಗಲು ಬಿಡುವುದಿಲ್ಲ, ಈ ಬಗ್ಗೆ ಗ್ರಾ.ಪಂ. ಹಾಗೂ ತಹಸೀಲ್ದಾರ್ ಅವರನ್ನು ಭೇಟಿ ಮಾಡುವುದಾಗಿ ರವಿ ಕಿರಣ್ ಪುಣಚ ತಿಳಿಸಿದರು


ಈ ಸಂದರ್ಭ ರೈತ ಸಂಘದ ಜಿಲ್ಲಾ ಅಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಡೀಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಪ್ರೇಮನಾಥ ಶೆಟ್ಟಿ ಬಾಳ್ತಿಲ,ಬಾಳ್ತಿಲ ಘಟಕದ ಅಧ್ಯಕ್ಷ ಸುರೇಂದ್ರ ಕೋರ್ಯ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಹಾಜರಿದ್ದರು.

Related Posts

Leave a Reply

Your email address will not be published.

How Can We Help You?