ಕಾರ್ಕಳ ಉತ್ಸವ : ಚಲನಚಿತ್ರೋತ್ಸವಕ್ಕೆ ಪ್ಲಾನೆಟ್ಗೆ ಚಾಲನೆ

ಕಾರ್ಕಳ ಉತ್ಸವದ ಎರಡನೇ ದಿನವಾದ ಅಂಗವಾಗಿ ಚಲನಚಿತ್ರೋತ್ಸವಕ್ಕೆ ಪ್ಲಾನೆಟ್ ಚಿತ್ರಮಂದಿರದಲ್ಲಿ ತುಳು ನಿರ್ದೇಶಕ ಹಾಗೂ ಚಿತ್ರನಟ ದೇವದಾಸ್ ಕಾಪಿಕಾಡ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಚಿವರಿಗೆ ಸರಕಾರ ಯೋಗ್ಯತೆ ತಕ್ಕ ಪಟ್ಟವನ್ನು ನೀಡಿದೆ.

ಜಿಲ್ಲೆಯ ತುಳು ಚಿತ್ರ ಬಿಡುಗಡೆಗೆ ಉಭಯ ಜಿಲ್ಲೆಗಳಲ್ಲಿ ತುಳು ಚಿತ್ರಗಳಿಗಾಗಿ 10, 20 ಕೇಂದ್ರಗಳನ್ನು ಮಾಡಿಕೊಡಬೇಕಾಗಿ ಸಚಿವರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು.
ನಂತರ ಮಾತನಾಡಿದ ಸಚಿವ ಸುನಿಲ್ ಕುಮಾರ್ ಹಲವು ಸಂಗತಿಗಳು ಜೋಡಿಸಿ ದಂತಹ ಕಾರ್ಕಳ ಉತ್ಸವವು ನಾವು ಕಷ್ಟಪಟ್ಟು 11 ಚಿತ್ರಗಳನ್ನು ಉಚಿತವಾಗಿ ಪ್ರದರ್ಶಿಸುತ್ತಿದ್ದೇವೆ. ಚಲನಚಿತ್ರಗಳು ಮನರಂಜನೆಯ ಜೊತೆಯಲ್ಲಿ ಸಾಮಾಜಿಕ ಜಾಗೃತಿಯನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು

ವೇದಿಕೆಯಲ್ಲಿ ಸುಮಾ ಕೇಶವ್ ಚಿತ್ರಮಂದಿರ ಮಾಲೀಕರು ಉಪಸ್ಥಿತರಿದ್ದರು.