ತಲಪಾಡಿಯ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ : ಚಂಡಿಕಾ ಯಾಗ ಮತ್ತು ಬ್ರಹ್ಮರಥ ಕಲಶಾಭಿಷೇಕ

ಬ್ರಹ್ಮರಥ ನಿರ್ಮಾಣ ಸಮಿತಿ ಅಧ್ಯಕ್ಷ ರಾಮ್ ಮನೋಹರ್ ರೈ ಮಾಧ್ಯಮ ಜೊತೆ ಮಾತನಾಡಿ
ನಿರೀಕ್ಷೆಗಿಂತಲೂ ಮಿಗಿಲಾದ ರೀತಿಯಲ್ಲಿ ಶ್ರೀ ಕ್ಷೇತ್ರಕ್ಕೆ ಬ್ರಹ್ಮರಥ ಸಮರ್ಪಣೆ ಕಾರ್ಯ ಅದ್ಧೂರಿಯಾಗಿ ನೆರವೇರಿದ್ದು, ಮಾರ್ಚ್ 17ಕ್ಕೆ ಮಹಾ ರತೋತ್ಸವ ನಡೆಯಲಿದೆ
ದೇವಸ್ಥಾನ ಹಳೆಯದ್ದಾಗಿದ್ದ ಹಿನ್ನೆಲೆಯಲ್ಲಿ ನೂತನ ರಥ ನಿರ್ಮಾಣ ನಿಟ್ಟಿನಲ್ಲಿ ಸಮಿತಿ ರಚಿಸಿ, ಮುಂದಿನ ವರ್ಷ ಕ್ಷೇತ್ರಕ್ಕೆ ಬ್ರಹ್ಮರಥ ಸಮರ್ಪಿಸಲು ಯೋಜಿಸಲಾಗಿತ್ತು. ಆದರೆ ಕೇವಲ ಆರು ತಿಂಗಳಲ್ಲೇ ಬ್ರಹ್ಮರಥ ನಿರ್ಮಾಣಗೊಂಡು ಕ್ಷೇತ್ರಕ್ಕೆ ಸಮರ್ಪಿಸಲಾಗಿದೆ. ಇದು ದೇವನಾನುಗ್ರಹ ಮತ್ತು ಊರವರ ಸಹಕಾರದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ ನೆತ್ತಿಲಬಾಳಿಕೆ ಮಾತನಾಡಿ, ಕ್ಷೇತ್ರಕ್ಕೆ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ನಿರೀಕ್ಷೆಗಿಂತಲೂ ನಾಲ್ಕು ಪಟ್ಟು ಹೆಚ್ಚು ಜನ ಸೇರಿದ್ದಾರೆ. ಸಹಸ್ರಾರು ಜನರು ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿದ್ದಾರೆ ಎಂದರು.

ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಾಳ ಮಾತನಾಡಿ, ಕ್ಷೇತ್ರದ ಬ್ರಹ್ಮರಥ ವರ್ಷಕ್ಕೆ ಮೊದಲೇ ಸಮರ್ಪಣೆಯಾಗಿದ್ದು ಶ್ರೀ ದೇವಿಯೇ ಮಾಡಿಸಿರುವುದಕ್ಕೆ ಸಾಕ್ಷಿ ಎಂದು ತಿಳಿಸಿದರು.
ಈ ಸಂದರ್ಭ ಬ್ರಹ್ಮರಥ ನಿರ್ಮಾಣ ಸಮಿತಿಯ ಕೋಶಾಧಿಕಾರಿ ಪ್ರದೀಪ್ ಕಿಲ್ಲೆ, ಕಾರ್ಯದರ್ಶಿ ವಸಂತ ದೇವಾಡಿಗ, ಸದಸ್ಯರಾದ ಸುರೇಶ್ ಆಳ್ವ ಸಾಂತ್ಯಗುತ್ತು, ಗೋಪಾಲಕೃಷ್ಣ ಮೇಲಾಂಟ ಇನ್ನಿತರರು ಉಪಸ್ಥಿತರಿದ್ದರು.