ಉಡುಪಿ : ಭೀಮಾ ಜ್ಯುವೆಲ್ಲರ್ಸ್ ವತಿಯಿಂದ ಆ್ಯಂಬುಲೆನ್ಸ್ ಕೊಡುಗೆ

ಉಡುಪಿ: ಪ್ರಸಿದ್ಧ ಚಿನ್ನದ ಮಳಿಗೆಯಾದ ಭೀಮಾ ಜ್ಯುವೆಲ್ಲರ್ಸ್ ಉಡುಪಿ ಶಾಖೆಯ ವತಿಯಿಂದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಆಂಬುಲೆನ್ಸ್ ಕೊಡುಗೆಯಾಗಿ ನೀಡಲಾಯಿತು.
ಉಡುಪಿಯ ಮಳಿಗೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ಜುವೆಲ್ಲರ್ಸ್ ನ ಮಾಲಕ ವಿಷ್ಣು ಶರಣ್ ಭಟ್ ಅವರು ಕೀ ಹಸ್ತಾಂತರಿಸುವ ಮೂಲಕ ಆಂಬುಲೆನ್ಸ್ ನೀಡಿದರು. ಅಶಕ್ತರು ಮತ್ತು ಅಸಹಾಯಕರಿಗೆ ಸಂಪೂರ್ಣ ಉಚಿತ ಆಂಬುಲೆನ್ಸ್ ಸೇವೆ ನೀಡುತ್ತಿರುವ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಅವರ ಸಮಾಜ ಸೇವೆಯನ್ನು ಗುರುತಿಸಿ ಈ ಕೊಡುಗೆ ನೀಡಲಾಗಿದೆ ಎಂದು ವಿಷ್ಣು ಶರಣ್ ಭಟ್ ಹೇಳಿದರು.
ಭೀಮ ಜ್ಯುವೆಲ್ಲರ್ಸ್ನ ಡೆಪ್ಯುಟಿ ಮೆನೇಜರ್ ರಾಘವೇಂದ್ರ ಭಟ್ ಅವರು ಮಾತನಾಡಿ, ನಿತ್ಯಾನಂದ ಒಳಕಾಡು ಅವರ ಸಮಾಜಸೇವೆ ನಿರಂತರವಾಗಿ ನಡೆಯಲಿ ಎಂದು ಹೇಳಿದರು.

ಈ ಕೊಡುಗೆ ಹಸ್ತಾಂತರ ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್, ಎಡಿಸಿ ಸದಾಶಿವ ಪ್ರಭು, ಉಡುಪಿ ಸರ್ಕಲ್ ಇನ್ಸ್ಪೆಕ್ಟರ್ ಪ್ರಮೋದ್, ಸಂಚಾರಿ ಉಪನಿರೀಕ್ಷಕ ಅಬ್ದುಲ್ ಖಾದರ್, ಜಿಲ್ಲಾ ಸರ್ಜನ್ ಮಧುಸೂದನ ನಾಯಕ್ ಉಪಸ್ಥಿತರಿದ್ದರು.

1925 ರಲ್ಲಿ ಉಡುಪಿ ಮೂಲದ ಭೀಮ ಭಟ್ ಅವರು ಆರಂಭಿಸಿರುವ ಭೀಮಾ ಜ್ಯುವೆಲ್ಲರ್ಸ್, ಇಂದು ದೇಶದ ನಾನಾ ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ, ತನ್ನ ಸಿಎಸ್ಆರ್ ಫಂಡ್ ಮೂಲಕ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಉಡುಪಿಯಲ್ಲೂ ದೇವಾಲಯ, ಗೋಶಾಲೆ, ಅಸಹಾಯಕರಿಗೆ ನೆರವಾಗುವುದರ ಜೊತೆಗೆ ಇದೀಗ ನೂತನ ಯೋಜನೆಯಾಗಿ ಆಂಬುಲೆನ್ಸ್ ನೀಡಲಾಗುತ್ತಿದೆ.
ಜಯಂತ್ ಐತಾಳ್ ಉಡುಪಿ : 97437 80016