ಈಶ್ವರಮಂಗಲ ಹಿಂದೂ ಸಂಘಟನೆ ಕಾರ್ಯಕರ್ತ ಜೀವನ್ ಮಯ್ಯಾಳ ನೇಣು ಬಿಗಿದು ಆತ್ಮಹತ್ಯೆ.

ಈಶ್ವರಮಂಗಲ: ಈಶ್ವರಮಂಗಲ ಸಮೀಪ ಮಯ್ಯಾಳ ನಿವಾಸಿ ಜೀವನ್ (23 ವರ್ಷ) ಇವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಜೀವನ್ ಸೌಂಡ್ಸ್ ಮತ್ತು ಲೈಟಿಂಗ್ಸ್ ಕೆಲಸ ನಿರ್ವಹಿಸುತ್ತಿದ್ದು , ದೇಲಂಪಾಡಿ ಹಿಂದೂ ಐಕ್ಯವೇದಿಕೆ ಘಟಕದ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೃತರು ತಂದೆ ಮಹಾಲಿಂಗ ಪಾಟಾಳಿ , ತಾಯಿ ಬೇಬಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪುತ್ತೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿ ಕೇಸು ದಾಖಲಿಸಿದ್ದಾರೆ.

Related Posts

Leave a Reply

Your email address will not be published.

How Can We Help You?