ಭಾರತ v/s ವೆಸ್ಟ್ ಇಂಡೀಸ್: 317 ರನ್ ಸಿಡಿಸಿದ ಭಾರತ ಮಹಿಳಾ ತಂಡ!

ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂದಾನ ಮತ್ತು ಹರ್ಮನ್ಪ್ರೀತ್ ಕೌರ್ ಅವರ ಶತಕಗಳ ನೆರವಿನೊಂದಿಗೆ ಭಾರತ ತಂಡ 50 ಓವರ್ಗಳಲ್ಲಿ 2 ವಿಕೆಟ್ಗಳನ್ನು ಉಳಿಸಿಕೊಂಡು 317 ರನ್ ಕಲೆಹಾಕಿದೆ.
ಇಂಗ್ಲೆಂಡ್ನ ಆಮಿಲ್ಟೆನ್ನಲ್ಲಿರುವ ಸೆಡನ್ ಪಾರ್ಕ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ತಂಡದ ನಾಯಕಿ ಮಿಥಾಲಿ ರಾಜ್, ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂದಾನ ಮತ್ತು ಯಸ್ತಿಕಾ ಭಾಟಿಯಾ ಜೊತೆಯಾಟದಲ್ಲಿ 49 ರನ್ ಗಳಿಸಿದರು.
ಯಸ್ತಿಕಾ, 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಸ್ಕ್ರೀಜ್ಗೆ ಇಳಿದ ತಂಡದ ನಾಯಕಿ ಮಿಥಾಲಿ ಕೇವಲ 5 ರನ್ ಗಳಿಸಿ ಔಟ್ ಆದರು. ನಾಲ್ಕನೇ ವಿಕೆಟ್ ಕಳೆದುಕೊಂಡ ಬಳಿಕ ಜೊತೆಯಾದ ಸ್ಮೃತಿ ಮಂದಾನ ಮತ್ತು ಹರ್ಮನ್ಪ್ರೀತ್ ಕೌರ್ ಜೋಡಿ ಆಟದಲ್ಲಿ 196 ರನ್ಗಳನ್ನು ಬಾರಿಸಿ ದೊಡ್ಡ ಮೊತ್ತ ಗಳಿಸಲು ನೆರವಾದರು.
119 ಎಸೆತಗಳನ್ನು ಎದುರಿಸಿದ ಸ್ಮೃತಿ ಮಂದಾನ 2 ಸಿಕ್ಸರ್ ಮತ್ತು 13 ಬೌಂಡರಿಗೊಂದಿಗೆ 123 ರನ್ ಸಿಡಿಸಿದರು. ತಮ್ಮ ವೃತಿ ಜೀವನದ ಐದನೇ ಶತಕ ಇದಾಗಿತ್ತು.
ಉತ್ತಮವಾಗಿ ಬ್ಯಾಟ್ ಬೀಸಿದ ಕೌರ್ 10 ಬೌಂಡರಿ 2 ಸಿಕ್ಸರ್ ಜೊತೆಗೆ 107 ಎಸೆತಗಳಲ್ಲಿ 109 ರನ್ ಸಿಡಿಸಿದರು.
ವಿಂಡೀಸ್ ಪರವಾಗಿ ಬೌಲಿಂಗ್ ಮಾಡಿದ ಅನಿಸಾ ಮೊಹಮ್ಮದ್ ಎರಡು ವಿಕೆಟ್ ಗಳಿಸಿದರೆ, ಶಮಿಲಿಯಾ ಕಾನ್ನೆಲ್, ಹೀಲಿ ಮ್ಯಾಥ್ಯೂಸ್, ಶಕೇರಾ ಸೆಲ್ಮನ್, ಡಿಯಾಂಡ್ರಾ ದೊತ್ತಿನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
ವೆಸ್ಟ್ ಇಂಡೀಸ್ ತಂಡವು ಟೀಂ ಇಂಡಿಯಾ ನೀಡಿರುವ ಗುರಿಯ ಬೆನ್ನತ್ತಿದೆ.

Related Posts

Leave a Reply

Your email address will not be published.

How Can We Help You?