ಪೈಯಾರು ಶ್ರೀ ಕಾಂತಾನಧಿಕಾರಿ ಧೂಮಾವತಿ ದೈವಸ್ಥಾನ : ವಿಜೃಂಭಣೆಯಿಂದ ನಡೆದ ವಾರ್ಷಿಕ ನೇಮೋತ್ಸವ

ಪೈಯಾರು ಶ್ರೀ ಕಾಂತಾನಧಿಕಾರಿ ಧೂಮಾವತಿ ದೈವಸ್ಥಾನದ ವಾರ್ಷಿಕ ನೇ ಮೋತ್ಸವ ವಿಜೃಂಭಣೆಯಿಂದ ನಡೆಯಿತು. ನೇಮೋತ್ಸವದ ಪೂರ್ವಬಾವಿಯಾಗಿ ಭಂಡಾರ ಇಳಿದು, ಬಳಿಕ ಅನ್ನಸಂತರ್ಪಣೆ ನೆರವೇರಿತು.

ರಾತ್ರಿ ಧೂಮವತಿ ಹಾಗೂ ಬಂಟ ದೈವಗಳ ನೇಮೋತ್ಸವ ಜರುಗಿತು. ನೇಮೋತ್ಸವದ ಅಂಗವಾಗಿ ವಿಶೇಷ ಪುಷ್ಪ ಹಾಗೂ ವಿದ್ಯುತ್ ದೀಪ ಅಲಂಕಾರದಿಂದ ದೈವಸ್ಥಾನವು ಕಂಗೊಳಿಸುತ್ತಿದ್ದು, ನೂರಾರು ಭಕ್ತರು ನೇಮೋತ್ಸವದಲ್ಲಿ ಪಾಲ್ಗೊಂಡು ಗಂಧ ಪ್ರಸಾದ ಸ್ವೀಕರಿಸಿದರು.