ನಿಂತ ಲಾರಿಗೆ ಕಾರು ಡಿಕ್ಕಿ ಮಹಿಳೆ ಮಹಿಳೆ ಮೃತ್ಯು

ಊಟಕ್ಕಾಗಿ ರಸ್ತೆಯಂಚಿನಲ್ಲಿ ನಿಲ್ಲಿಸಿದ ಲಾರಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ದಾರುಣಾವಾಗಿ ಮೃತ ಪಟ್ಟಿದ್ದಾರೆ.
ಮೃತ ಮಹಿಳೆ ಉಡುಪಿ ನಿವಾಸಿ ನಿವೃತ್ತ ಇನ್ಸ್ ಪೆಕ್ಟರ್ ಶ್ರೀನಿವಾಸ್ ಎಂಬವರ ಪತ್ನಿ ಭವಾನಿ(58). ಇವರ ತನ್ನ ಮಗನೊಂದಿಗೆ ಮಂಗಳೂರು ಕಡೆಗೆ ಹೋಗಿ ಮರಳುತ್ತಿದ್ದಾಗ ಎರ್ಮಾಳು ತೆಂಕ ಜಂಕ್ಷನ್ ಸಮೀಪ ಹೋಟೆಲೊಂದರ ಪಕ್ಕ ನಿಲ್ಲಿಸಿದ ಲಾರಿಯನ್ನು ಕಂಡ ಆಲ್ಟೋ ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದ್ದು, ಆ ಕ್ಷಣ ನಿಯಂತ್ರಣ ಕಳೆದುಕೊಂಡ ಕಾರು ಲಾರಿಗೆ ಸವರಿಕೊಂಡು ಹೋಗಿ ಪಲ್ಟಿಯಾಗಿದೆ. ಕಾರಿನ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ತಲೆಗೆ ಗಂಭೀರ ಹೊಡೆತ ಬಿದ್ದ ಪರಿಣಾಮ ಮಹಿಳೆ ಮೃತ ಪಟ್ಟಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.