ವಿಟ್ಲ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ : ನೋಡ ನೋಡುತ್ತಿದ್ದಂತೆ ಸುಟ್ಟು ಕರಕಲಾದ ಕಾರು

ವಿಟ್ಲ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಘಟನೆ ವಿಟ್ಲ ಸಮೀಪದ ಕೋಡಪದವು ಸರಾವು ಎಂಬಲ್ಲಿ ನಡೆದಿದೆ.
ಕೆಲಿಂಜ ನಿವಾಸಿ ಸಿಟ್ರೀನ್ ಪಾಯಸ್ ಅವರಿಗೆ ಸೇರಿದ ಸಂಪೂರ್ಣವಾಗಿ ಸುಟ್ಟು ಕರಲಾಗಿದೆ. ಇವರು ಬೋಳಂತೂರು ಕಡೆಯಿಂದ ಕೋಡಪದವು ಮೂಲಕ ವಿಟ್ಲ ಕಡೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಶಬ್ದ ಕೇಳಿಸಿದ್ದು, ದಿಢೀರನೆ ಕಾರನ್ನು ಬದಿಗೆ ಬಂದು ನಿಲ್ಲಿಸಿದ್ದಾರೆ. ಈ ಸಂದರ್ಭ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅವರು ಕಾರಿನಿಂದ ಹೊರಗಡೆ ಬಂದು ಬಚವಾಗಿದ್ದಾರೆ.ನಿನ್ನೆಯಷ್ಟೇ ಕಾರಿನ ದುರಸ್ತಿ ಕಾರ್ಯ ನಡೆದಿತ್ತು. ಎನ್ನಲಾಗಿದೆ.