ಮೂಡುಬಿದಿರೆಯ ಜೈನ ಮಠಕ್ಕೆ ಭೇಟಿ ನೀಡಿದ ರಾಜ್ಯಪಾಲರು

ಮೂಡುಬಿದಿರೆ: ಜಗತ್ತಿನಲ್ಲಿ ಪ್ರೇಮಭಾವವಿದ್ದಾಗ ಮಾತ್ರ ವಿಶ್ವಶಾಂತಿ ಕಲ್ಯಾಣ ಸಾಧ್ಯವಾಗುತ್ತದೆ. ‘ವಸುದೈವ ಕುಟುಂಬಕಂ’ ಎನ್ನುವುದು ನಮ್ಮ ಸಂಸ್ಕøತಿಯಾಗಿದ್ದು ಭಾರತ ಈ ನಿಟ್ಟಿನಲ್ಲಿ ಮುನ್ನಡೆದಿದ್ದು ನಮ್ಮೆಲ್ಲರ ಮೇಲೆ ಜಾಗತಿಕವಾಗಿ ಬಹಳಷ್ಟು ನಿರೀಕ್ಷೆಗಳಿವೆ. ಹಾಗಾಗಿ ಬದುಕು ಬದುಕಲು ಬಿಡು, ಅಹಿಂಸೆಯೇ ಪರಮಧರ್ಮ, ಪರೋಪಕಾರವೇ ಸೇವೆ ಎನ್ನುವ ಮನೋಧರ್ಮದೊಂದಿಗೆ ನಾವು ಜೀವನದಲ್ಲಿ ಸಫಲತೆ ಕಾಣಬೇಕಾಗಿದೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.


ಅವರು ಕಾರ್ಕಳ ಉತ್ಸವಕ್ಕೆ ತೆರಳುವ ಹಾದಿಯಲ್ಲಿ ಜೈನಕಾಶಿ ಮೂಡುಬಿದಿರೆಗೆ ಪ್ರಥಮ ಭಾರಿಗೆ ಭೇಟಿ ನೀಡಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಗೌರವ ಸ್ವೀಕರಿಸಿ, ಬಸದಿಗಳ ನಾಮಫಲಕವನ್ನು ಸಾಂಕೇತಿಕವಾಗಿ ಅನಾವರಣಗೊಳಿಸಿ ಮಾತನಾಡಿದರು. ಶ್ರೀ ಜೈನಮಠ, ಸಾವಿರ ಕಂಬದ ಬಸದಿಯನ್ನು ಸಂದರ್ಶಿಸಿ, ಪಾಶ್ರ್ವನಾಥ ಸ್ವಾಮಿ, ಕೂಷ್ಮಾಂಡಿನಿ ದೇವಿಗೆ ಆರತಿ, ಅಘ್ರ್ಯ ಅರ್ಪಿಸಿದರು. ಬಳಿಕ ಧವಲತ್ರಯ ಮೂಲ ಗ್ರಂಥಗಳು, ಅಮೂಲ್ಯ ಜಿನಬಿಂಬಗಳ ಸಿದ್ಧಾಂತ ದರ್ಶನಗೈದರು.ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತಾ ಶಶಿಕಿರಣ್, ಮುಖ್ಯಾಧಿಕಾರಿ ಇಂಧು ರಾಜ್ಯಪಾಲರನ್ನು ಗೌರವಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಎಂಸಿಎಸ್. ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಎಪಿಎಂಸಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ಪಂಡಿತ್ ರೆಸಾರ್ಟ್‍ನ ಲಾಲ್ ಗೋಯೆಲ್, ಚೌಟರ ಅರಮನೆಯ ಕುಲದೀಪ್, ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್, ಆದರ್ಶ್ ಚೌಟರ ಅರಮನೆ , ಜೈನ್ ಮಿಲನ್ ಅಧ್ಯಕ್ಷ ನಮಿರಾಜ್ ಜೈನ್, ಮಾಜಿ ಅಧ್ಯಕ್ಷೆ ಶ್ವೇತಾ ಜೈನ್ ಮತ್ತಿತತರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?