ಮಂಗಳೂರು ಲೇಡಿಸ್ ಬ್ಯೂಟಿ ಅಸೋಸಿಯೇಷನ್ : ರಿಯಾ ಫೌಂಡೇಷನ್ಗೆ ದಿನ ಬಳಕೆಯ ಸಾಮಾಗ್ರಿ ವಿತರಣೆ

ಮಂಗಳೂರು ಲೇಡೀಸ್ ಬ್ಯೂಟಿ ಅಸೋಸಿಯೇಷನ್ ಅವರು ಕುಲಶೇಖರ ಕೋಟಿಮುರದಲ್ಲಿರುವ “ರಿಯಾ ಫೌಂಡೇಷನ್” ಗೆ ಭೇಟಿನೀಡಿ ಮಕ್ಕಳ ಸಂತೋಷದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಅಸೋಸಿಯೇಷನ್ ಎಲ್ಲಾ ಸದಸ್ಯರು ನೀಡಿದ ದಿನ ಬಳಕೆಯ ದಿನಸಿ ಸಾಮಾಗ್ರಿಗಳನ್ನು ರಿಯಾ ಫೌಂಡೇಷನ್ಗೆ ನೀಡಲಾಯಿತು.
ಈ ವೇಳೆ ಅಧ್ಯಕ್ಷರಾದ ಬಬಿತಾ. ಯು ಶೆಟ್ಟಿ, ಕಾರ್ಯದರ್ಶಿ ಫರ್ಝಾನ, ಉಪಾಧ್ಯಕ್ಷೆ ಸುಲತ ಪೂಜಾರಿ ,ಜೊತೆ ಕಾರ್ಯದರ್ಶಿ ಸುಹಾನ, ಕೋಶಾಧಿಕಾರಿ ಝೀನ, ಸದಸ್ಯರಾದ ಸುಜಯ, ಸಪ್ರೀನ, ಅಮಿತ, ರೇಣುಕ, ಸುಮ,ಸವಿನ ಉಪಸ್ಥಿತರಿದ್ದರು.
ರಿಯಾ ಫೌಂಡೇಷನ್ ವ್ಯವಸ್ಥಾಪಕರಾದ ಕೀರ್ತನ ಮಕ್ಕಳ ಆರೋಗ್ಯದ ಮಾಹಿತಿ ನೀಡಿ ಎಲ್ಲರಿಗೂ ಧನ್ಯವಾದ ತಿಳಿಸಿದರು.