ಬಹರೇನ್ ರಾಷ್ಟ್ರೀಯ ವನಿತಾ ಕ್ರಿಕೆಟ್ ತಂಡದಲ್ಲಿ ಹೆಮ್ಮೆಯ ಕನ್ನಡಿಗರು 

ಬಹರೈನ್ ;     ಒಮಾನ್ ನಲ್ಲಿ  ಆರಂಭಗೊಳ್ಳಲಿರುವ  “ಗಲ್ಫ್ ಕಪ್ ” ವನಿತಾ ಕ್ರಿಕೆಟ್ ಪಂದ್ಯಾಟಕ್ಕಾಗಿ ಬಹರೇನ್ ದ್ವೀಪ ರಾಷ್ಟ್ರದ ವನಿತಾ ಕ್ರಿಕೆಟ್ ತಂಡವು ಇಂದು ಒಮಾನ್ ಗೆ ತೆರಳಿದ್ದು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಶುಭ ಹಾರೈಸಿ ಬೀಳ್ಕೊಡಲಾಯಿತು . ಬಹರೈನ್ ,ಶ್ರೀಲಂಕ ಹಾಗು ಭಾರತೀಯ ಕ್ರೀಡಾಪಟುಗಳು ಬಹರೈನ್ ರಾಷ್ಟ್ರೀಯ ವನಿತಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದು , ಒಟ್ಟು 14 ಸದಸ್ಯರನ್ನು ಒಳಗೊಂಡ ಈ ತಂಡದಲ್ಲಿ  ಕರಾವಳಿಯ 6 ವನಿತೆಯರು ಈ ತಂಡದಲ್ಲಿರುವುದು ಇಲ್ಲಿನ ಕನ್ನಡಿಗರಲ್ಲಿ ಅತೀವ ಸಂತಸವನ್ನುಂಟು ಮಾಡಿದೆ ಮಾತ್ರವಲ್ಲ ಕನ್ನಡಿಗರಿಗೆ ಇದೊಂದು ಹೆಮ್ಮೆಯ ವಿಷಯವಾಗಿದೆ

Bahrain

. ತಂಡದಲ್ಲಿರುವ ಕರಾವಳಿಯ ವನಿತಾ ಸದಸ್ಯರ ವಿವರ ಹೀಗಿದೆ . ಮಂಗಳೂರು ಮೂಲದ ಪವಿತ್ರ ಶೆಟ್ಟಿ ,ಪ್ರಜ್ಞಾ ಜಗದೀಶ್ ,ಪೂರ್ವಜ ಜಗದೀಶ್ ,ದೀಪಿಕಾ ಅಡ್ಯನಡ್ಕ ಉಡುಪಿ ಮೂಲದ ಶಶಿಕಲಾ ಪ್ರಕಾಶ್ ,ವಿಲ್ಸಿಟ ಬಾರ್ಬೊಝ ಈ ರಾಷ್ಟ್ರೀಯ ತಂಡದಲ್ಲಿದ್ದಾರೆ . ಇಲ್ಲಿನ ಇಂಡಿಯನ್ ಸ್ಕೂಲಿನಲ್ಲಿ 11 ನೇ ಓದುತ್ತಿರುವ 16 ವಯಸ್ಸಿನ  ಪ್ರಜ್ಞಾ ಜಗದೀಶ್ ಈ ರಾಷ್ಟ್ರೀಯ ವನಿತಾ ಕ್ರಿಕೆಟ್ ತಂಡದ ಅತ್ಯಂತ ಕಿರಿಯ ಆಟಗಾರ್ತಿಯಾಗಿದ್ದಾಳೆ

ಇವಳ ಸಹೋದರಿಯಾದ ಪೂರ್ವಜ ಇಂಡಿಯನ್ ಸ್ಕೂಲಿನ 9ನೇ ತರಗತಿಯಲ್ಲಿ ಓದುತ್ತಿದ್ದು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೂ ಐ .ಸಿ .ಸಿ ನಿಯಮದ ಪ್ರಕಾರ ಇನ್ನೂ 15 ವಯಸ್ಸು ಪೂರ್ಣಗೊಳ್ಳದ ಕಾರಣ ಸದ್ಯಕ್ಕೆ ಒಮಾನ್ ಪ್ರವಾಸದಿಂದ ಹೊರಗುಳಿಯಬೇಕಾಗಿ ಬಂದಿದ್ದು ಮುಂಬರುವ ಜೂನ್ ನಲ್ಲಿ ಶ್ರೀಲಂಕಾದಲ್ಲಿ ಜರುಗಲಿರುವ ಪಂದ್ಯಾಟದಲ್ಲಿ ಪಾಲ್ಗೊಳ್ಳುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ

Bahrain

. ಕುವೈಟ್ ,ಕತಾರ್ ,ಓಮನ್ ,ಬಹರೈನ್ ಹಾಗು ಯು .ಎ .ಇ ತಂಡಗಳು ಗಲ್ಫ್ ಕಪ್ ಗಾಗಿ ಸೆಣಸಾಡಲಿದ್ದು ಈ ಪಂದ್ಯಾಟವು ಮಾರ್ಚ್ 21 ಚಾಲನೆಗೊಂಡು ಮಾರ್ಚ್ 26 ಕ್ಕೆ ಮುಕ್ತಾಯ ಕಾಣಲಿದೆ . ಈ ಪಂದ್ಯಾಟದಲ್ಲಿ ತಂಡವು ವಿಜೇತಗೊಂಡು ಬಹರೇನ್ ದ್ವೀಪ ರಾಷ್ಟ್ರಕ್ಕೆ ಇನ್ನಷ್ಟು ಕೀರ್ತಿ ತರಲಿ ಜೊತೆಜೊತೆಗೆ ಕನ್ನಡಿಗರಿಗೂ ಹೆಮ್ಮೆ ತರಲಿ ಎಂದು ಶುಭ ಹಾರೈಸೋಣ 

ಕಮಲಾಕ್ಷ ಅಮೀನ್ 

Related Posts

Leave a Reply

Your email address will not be published.

How Can We Help You?