‘ಸ್ವಉದ್ಯೋಗಕ್ಕೆ ಕೃಷಿ ಪೂರಕವಾಗಿದೆ’

ಬೆಳ್ತಂಗಡಿ: ಭಾರತವು ಕೃಷಿ ಮೂಲಾಧಾರಿತದೇಶವಾಗಿದೆ. ಈ ಮಣ್ಣಿನಲ್ಲಿ ಹುಟ್ಟಿ, ಕಲಿತು, ಉನ್ನತ ಸ್ಥಾನಕ್ಕೆ ಏರಿದರೂಆಹಾರದ ಮೂಲವಾಗಿರುವಕೃಷಿಯನ್ನು ಮರೆಯಬಾರದುಎಂದುಎಸ್ ಡಿ ಎಂ ಸ್ನಾತಕೋತ್ತರಕೇಂದ್ರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದಡಾ. ರವಿಶಂಕರ್ ಕೆ ಆರ್ ಹೇಳಿದರು.
ಅವರು ಬೆಳ್ತಂಗಡಿಯ ಶ್ರೀ ಗುರುದೇವ ಪದವಿ ಪೂರ್ವಕಾಲೇಜು ಸಭಾಂಗಣದಲ್ಲಿಎಸ್ ಡಿ ಎಂ ಸ್ನಾತಕೋತ್ತರಕೇಂದ್ರದ ಸಮಾಜಕಾರ್ಯ ವಿಭಾಗ, ಬೆಳ್ತಂಗಡಿ ನಗರ ಪಂಚಾಯತ್ ಹಾಗೂ ರುಡ್ ಸೆಟ್ ಸಿದ್ಧವನ ಸಂಯುಕ್ತಆಶ್ರಯದಲ್ಲಿಗುರುವಾರ ನಡೆದ ಭತ್ತದಯಾಂತ್ರೀಕರಣ ಮತ್ತು ಸ್ವಯಂಉದ್ಯೋಗತರಬೇತಿಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯ ಮಹತ್ವವನ್ನು ಮರೆಯುತ್ತಿರುವಕಾಲಘಟ್ಟದಲ್ಲಿಅದನ್ನು ತಿಳಿಸುವ ಪ್ರಯತ್ನ ಈ ಕಾರ್ಯಕ್ರಮ ಮಾಡುತ್ತಿದೆ. ವಿದ್ಯಾರ್ಥಿಗಳು ಇದರಉದ್ದೇಶವನ್ನುಅರಿತು ಮುಂದುವರೆಯಬೇಕುಎಂದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿಶಾಸಕ, ಗುರುದೇವಎಜುಕೇಶನಲ್‍ಟ್ರಸ್ಟ್‍ಅಧ್ಯಕ್ಷರಾದ ಕೆ. ವಸಂತ ಬಂಗೇರ ಮಾತನಾಡಿದರು.ರೈತದೇಶದ ಬೆನ್ನೆಲುಬು. ಹೀಗಾಗಿ ರೈತರ ಮಕ್ಕಳು ಎಂದು ಹೇಳಿಕೊಳ್ಳಲು ಹೆಮ್ಮೆ ಪಡಬೇಕುಎಂದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿ, ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿಎಮ್ ಹೆಚ್ ಸುಧಾಕರ್ ಮಾತನಾಡಿದರು. ಕೃಷಿ ಹದಗೆಟ್ಟಾಗ ಸಂಸ್ಕøತಿಯೂಕೆಡುತ್ತದೆ. ಹೀಗಾಗಿ ಭಾರತೀಯ ಸಂಸ್ಕೃತಿಯ ಉಳಿವಿಗೆ ಕೃಷಿ ಅತ್ಯಗತ್ಯಎಂದು ತಿಳಿಸಿದರು. ರುಡ್ ಸೆಟ್ ಸ್ವಉದ್ಯೋಗತರಬೇತಿ ಸಂಸ್ಥೆ ಉಪನ್ಯಾಸಕಿಅನಸೂಯ ಮಾತನಾಡಿ ವಾಣಿಜ್ಯ ಕೃಷಿಗೆ ಮರುಹೋಗುತ್ತಿರುವ ಇಂದಿನ ದಿನಗಳಲ್ಲಿ ಭತ್ತದಕೃಷಿಯ ಬಗ್ಗೆ ಗಮನಹರಿಸುವುದು ಮುಖ್ಯವಾಗಿದೆಎಂದು ನುಡಿದರು. ಉಡುಪಿಯ ಕೃಷಿ ಯಾಂತ್ರೀಕರಣಯೋಜನಾಧಿಕಾರಿಅಶೋಕ್ ಭತ್ತದಯಾಂತ್ರೀಕರಣ ಬಗೆಗಿನ ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿಕಾಲೇಜಿನ ಪ್ರಾಂಶುಪಾಲ ಸುಕೇಶ್‍ಕುಮಾರ್ ಕೆ. ಉಪಸ್ಥಿತರಿದ್ದರು. ಎಸ್ ಡಿ ಎಂ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿನಿ ಚೈತ್ರಾ ಸ್ವಾಗತಿಸಿದರು. ವಿದ್ಯಾರ್ಥಿ ಸಂತೋμïಕಾರ್ಯಕ್ರಮ ನಿರೂಪಿಸಿದರು. ಶ್ರೀ ಗುರುದೇವ ಪದವಿ ಪೂರ್ವಕಾಲೇಜಿನಕನ್ನಡಉಪನ್ಯಾಸಕರಾಕೇಶ್ ವಂದಿಸಿದರು.

Related Posts

Leave a Reply

Your email address will not be published.

How Can We Help You?