ಮಂಗಳೂರು: ಬಿಎಸ್ಪಿ ಸಂಸ್ಥಾಪಕ ಮಾನ್ಯವರ್ ಕಾನ್ಶಿರಾಂಜೀ ಅವರ ಹುಟ್ಟುಹಬ್ಬ ಅಚರಣೆ

ಬಹುಜನ ಸಮಾಜ ಪಾರ್ಟಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಮುತ್ತೂರು ಅಂಬೇಡ್ಕರ್ ಭವನದಲ್ಲಿ ಬಹುಜನರ ನಾಯಕ ಬಿಎಸ್ಪಿ ಸಂಸ್ಥಾಪಕ ಮಾನ್ಯವರ್ ಕಾನ್ಶಿರಾಂ ಜೀಯವರ ೮೮ನೇ ಹುಟ್ಟುಹಬ್ಬ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷರಾದ ದಾಸಪ್ಪ ಎಡಪದವು, ಸಂಯೋಜಕರಾದ ಗೋಪಾಲ್ ಮುತ್ತೂರು, ಸಹೋದರತ್ವ ಸಮಿತಿಯ ಸದಸ್ಯರಾದ ರಾಜೀವ್ ಪಾಡ್ಯಾರ್, ಕಾರ್ಯಕಾರಿಣಿ ಸದಸ್ಯೆ ಶಕುಂತಲಾ, ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಉಮೇಶ್ ಪಾಡ್ಯಾರ್, ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್, ಉಸ್ತುವಾರಿ ಲೋಕೇಶ್ ಮುತ್ತೂರು ಹಾಗೂ ಸಾವಿತ್ರಿ ಭಾಫುಲೇ ಮಹಿಳಾ ಮಂಡಳದ ಪ್ರಧಾನ ಕಾರ್ಯದರ್ಶಿ ಆಶಾ ಲೋಕೇಶ್ ಇವರುಗಳು ಘನ ಉಪಸ್ಥಿತಿಯಲ್ಲಿ ಇದ್ದರು.

ಕಾನ್ಶಿರಾಂಜೀ ಹಾಗೂ ಡಾ/ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪರಿವರ್ತನ ಗೀತೆಗಳನ್ನು ಹಾಡಲಾಯಿತು.

Related Posts

Leave a Reply

Your email address will not be published.

How Can We Help You?