ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವರ ವಾರ್ಷಿಕ ಮಹೋತ್ಸವ

ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವರ ವಾರ್ಷಿಕ ಮಹೋತ್ಸವ ಸಕಲ ವೈಭವ ಸಂಭ್ರಮಗಳಿಂದ ಜರುಗಿತು. ಸಾವಿರಾರು ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು.
ಮಾರ್ಚ್ 10ರಂದು ಮೂಹೂರ್ತ ಬಲಿ ಆರಂಭಗೊಂಡು ಮಾರ್ಚ್ 13ರಂದು ಬೆಳಗ್ಗೆ ದ್ವಜಾರೋಹಣ ನಡೆದು ಐದು ದಿನಗಳ ಉತ್ಸವಕ್ಕೆ ಚಾಲನೆ ದೊರಕಿತು. ಮಾರ್ಚ್ 14ರಂದು ಸಂಕ್ರಮಣ ಮಾರ್ಚ್ 15ರಂದು ಪಾಲಕಿ ಉತ್ಸವ ನಡೆಯಿತು, ಮಾರ್ಚ್16ರಂದು ರಥಾರೋಹಣ ನಡೆದು ಸಂಜೆ ರಥಬೀದಿ ಹಾಗೂ ರಾಜಬೀದಿಯಲ್ಲಿ ದೇವಳಕ್ಕೆ ಬರುವ ರೀತಿಯಲ್ಲಿ ರಥವನ್ನು ಎಳೆಯುವ ದೃಶ್ಯ ಮನಮೋಹಕವಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ಯಕ್ಷಗಾನ ಹಾಡುಗಾರಿಕೆ ತುಳು ನಾಟಕಗಳು ಹಾಗೂ ಪೆರ್ಡೂರು ಮೇಳದವರಿಂದ ಯಕ್ಷಗಾನ ಪ್ರದರ್ಶನಗೊಂಡಿತು.
ಮಾರ್ಚ್ 17ರಂದು ಬೆಳಿಗ್ಗೆ ವಿವಿಧ ಸೇವೆಗಳು ಹಾಗೂ ವಿಶೇಷವಾಗಿ ಹರಕೆಯ ತುಲಾಭಾರ ಸೇವೆಗಳು ಜರುಗಿದವು ಈ ಸಂದರ್ಭದಲ್ಲಿ ಹೋಮಗಳು ವಿವಿಧ ಪೂಜೆಗಳು ಅಷ್ಟಾವಧಾನ ಸೇವೆಗಳು ಕಟ್ಟೆ ಪೂಜೆಗಳು ರಂಗಪೂಜೆ ಕೆರೆ ದೀಪ ಓಲಗ ಮಂಟಪ ದಲ್ಲಿ ವಿವಿಧ ಸೇವೆಗಳು ಜರುಗಿದವು.
ರಥೋತ್ಸವದಂದು ಶ್ರೀ ಸುಭಾಶ್ಚಂದ್ರ ಹೆಗಡೆ ಮತ್ತು ಮನೆಯವರಿಂದ ಬಂದ ಭಕ್ತರಿಗೆ ಅನ್ನದಾನ ನಡೆಯಿತು.
ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಕೊರಂಗ್ರಪಾಡಿ ರಾಘವೇಂದ್ರ ತಂತ್ರಿಯವರ ಮಾರ್ಗದರ್ಶನದಲ್ಲಿ ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಹೇಶ್ ಕುಮಾರ್ ಶೆಟ್ಟಿ ಹಾಗೂ ಸಮಿತಿಯ ಎಲ್ಲ ಸದಸ್ಯರು ಮತ್ತು ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ ಅರ್ಚಕ ಶ್ರೀ ರಾಘವೇಂದ್ರ ಅಡಿಗ ಇವರ ಮೇಲ್ವಿಚಾರಿಕೆ ಯಲ್ಲಿ ದೇವರ ಅನುಗ್ರಹದಿಂದ ಯಶಸ್ವಿಯಾಗಿ ನಡೆಯಿತು.
Jayanth Ithal
+91 97437 80016